ಕರಾಚಿ: ಪಾಕಿಸ್ತಾನ ಕ್ರಿಕೆಟ್ ಕಂಡ ಮಾರಕ ವೇಗಿ ಉಮರ್ ಗುಲ್ ಶನಿವಾರ(ಅ.17) ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಉಮರ್ ಗುಲ್ ಪಾಲಿಗೆ ನ್ಯಾಷನಲ್ ಟಿ20 ಕಪ್ ಟೂರ್ನಿಯೇ ಕೊನೆಯ ಸ್ಫರ್ಧಾತ್ಮಕ ಟೂರ್ನಿಯಾಗಿರಲಿದೆ.
36 ವರ್ಷದ ಉಮರ್ ಗುಲ್ ಸದ್ಯ ನ್ಯಾಷನಲ್ ಕಪ್ ಟೂರ್ನಿಯಲ್ಲಿ ಬಲೂಚಿಸ್ತಾನ್ ತಂಡವನ್ನು ಪ್ರತಿನಿಧಿಸುತ್ತಿದ್ದು, ತಂಡ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಬೆನ್ನಲ್ಲೇ ಗುಲ್ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.