ಸನಾ ಜಾವೆದ್ ಜತೆ ಈದ್ ಆಚರಿಸಿದ ಶೋಯೆಬ್ ಮಲಿಕ್..! ಇಲ್ಲಿವೆ ಫೋಟೋಗಳು

First Published | Apr 11, 2024, 5:42 PM IST

ಕರಾಚಿ: ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ತಮ್ಮ ನೂತನ ಮಡದಿ ಸನಾ ಮಲಿಕ್ ಜತೆ ಸಂಭ್ರಮದಿಂದ ಈದ್ ಹಬ್ಬ ಆಚರಿಸಿದ್ದು, ಕೆಲವು ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಇಂದು ಜಗತ್ತಿನಾದ್ಯಂತ ಈದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ಇದೀಗ ತಮ್ಮ ಮುದ್ದಾದ ಮಡದಿ ಸನಾ ಜಾವೆದ್ ಅವರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ.

ಇದೀಗ ಸ್ವತಃ ಸನಾ ಜಾವೆದ್ ಹಾಗೂ ಶೋಯೆಬ್ ಮಲಿಕ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಇಬ್ಬರೂ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಈದ್ ಶುಭಾಶಯ ಕೋರಿದ್ದಾರೆ.

Tap to resize

ಇನ್ನು ಇದಕ್ಕೂ ಮೊದಲು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ತಮ್ಮ ಕುಟುಂಬದೊಟ್ಟಿಗೆ ಈದ್ ಆಚರಿಸಿದ್ದು, ತಮ್ಮ ಪ್ರೀತಿ ಪಾತ್ರರಿಗೆ ಈದ್ ಶುಭಾಶಯ ಕೋರಿದ್ದರು.
 

ಇನ್ನು ಶೋಯೆಬ್ ಮಲಿಕ್ ವಿಚಾರಕ್ಕೆ ಬರುವುದಾದರೇ, ಈ ವರ್ಷಾರಂಭದಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ತಲಾಖ್ ನೀಡಿ, ಮಾಡೆಲ್ ಸನಾ ಜಾವೆದ್ ಅವರೊಂದಿಗೆ ಮಲಿಕ್ ಮೂರನೇ ಮದುವೆಯಾಗಿದ್ದರು.

ಇನ್ನು ಇತ್ತೀಚೆಗಷ್ಟೇ ಜರುಗಿದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಶೋಯೆಬ್ ಮಲಿಕ್‌ ಅವರಿಗೆ ಮೈದಾನಕ್ಕೆ ಬಂದು ಸನಾ ಚಿಯರ್ ಅಪ್ ಮಾಡಿ ಗಮನ ಸೆಳೆದಿದ್ದರು.

ಇನ್ನು ಎರಡು ವಾರಗಳ ಹಿಂದಷ್ಟೇ ಸನಾ ಜಾವೆದ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಶೋಯೆಬ್ ಮಲಿಕ್ ಜತೆಗಿದ್ದು, ಮಡದಿಯ ಜತೆ ಸುಂದರ ಕ್ಷಣಗಳನ್ನು ಕಳೆದಿದ್ದರು.

ಈ ಸುಂದರ ಕ್ಷಣಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಸನಾ ಜಾವೆದ್, "ಕೇವಲ ನಾವಿಬ್ಬರಷ್ಟೇ. ಈ ಹುಟ್ಟುಹಬ್ಬವನ್ನು ಸುಂದರವಾಗಿಸಿದ್ದಕ್ಕೆ ಧನ್ಯವಾದಗಳು ಗಂಡ" ಎಂದು ಸನಾ ಜಾವೆದ್ ಪೋಸ್ಟ್ ಮಾಡಿದ್ದರು.

ಸನಾ ಜಾವೆದ್ ಹಾಗೂ ಶೋಯೆಬ್ ಮಲಿಕ್ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಇವರಿಬ್ಬರು ಮದುವೆಯಾದ ಮೇಲಂತೂ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಲೇ ಬಂದಿದ್ದಾರೆ.

Latest Videos

click me!