ಇಂಗ್ಲೆಂಡ್ ವಿರುದ್ದ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ ವಿರುದ್ದ ಆಕ್ರೋಶಗಳು ಹೆಚ್ಚಾಗುತ್ತಿದೆ. ಈ ಪೈಕಿ 15ರ ಹುಡುಗ ವೈಭವ್ ಸೂರ್ಯವಂಶಿ ವಿರುದ್ಧ ಅಭಿಮಾನಿಗಳು ರೊಟ್ಟಿಗೆದ್ದಿದ್ದಾರೆ. ಸೋಲಿನ ಬೆನ್ನಲ್ಲೇ ವೈಭವ್ ಮೇಲೆ ಆಕ್ರೋಶ ಯಾಕೆ?
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ಹೀನಾಯ ಪ್ರದರ್ಶನ ಹಾಗೂ ಸರಣಿ ಸೋಲು ಬಿಸಿಸಿಐ ನಿದ್ದೆಗೆಡಿಸಿದೆ. ಸರಣಿ ಸೋಲಿನ ಪರಾಮರ್ಶೆ ನಡೆಸಲು ಬಿಸಿಸಿಐ ಮುಂದಾಗಿದೆ. 2026ರ ಟಿ20 ಚಾಂಪಿಯನ್ ಕೇವಲ ನಾಲ್ಕೇ ತಿಂಗಳಿಗೆ ಐರ್ಲೆಂಡ್ ವಿರುದ್ಧ, ಇಂಗ್ಲೆಂಡ್ ವಿರುದ್ಧ ಸರಣಿ ಸೋಲುವಂತ ಕಳಪೆ ತಂಡವಾಯಿತೆ ಅನ್ನೋ ಪ್ರಶ್ನೆಗಳು ಎದುರಾಗಿದೆ. ಇದರ ನಡುವೆ ವೈಭವ್ ಸೂರ್ಯವಂಶಿ ಕೂಡ ಟಾರ್ಗೆಟ್ ಆಗಿದ್ದಾರೆ.
26
ಅಭಿಮಾನಿಗಳ ಆಕ್ರೋಶ ಯಾಕೆ?
ಟೀಂ ಇಂಡಿಯಾ ಸೋಲಿನ ನೋವು ಒಂದೆಡೆಯಾದರೆ ಮತ್ತೊಂದೆಡೆ ವೈಭವ್ ಸೂರ್ಯವಂಶಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆರಂಭದಲ್ಲಿ ವೈಭವ್‌ಗೆ ಅವಕಾಶ ಕೊಡಿ ಎಂಬ ಕೂಗು ದೊಡ್ಡ ಮಟ್ಟದಲ್ಲಿ ಕೇಳಿಬಂದಿದ್ದರೆ, ಇದೀಗ ಇದೇ ವೈಭವ್ ಸೂರ್ಯವಂಶಿಗೆ ಅವಕಾಶ ಯಾಕೆ ಕೊಟ್ಟಿದ್ದೀರಿ ಎಂಬ ಪ್ರಶ್ನೆಗಳು ಎದ್ದಿದೆ. ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಇನ್ನೂ ರೆಡಿಯಾಗಿಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
36
ಆರ್ ಅಶ್ವಿನ್ ಅನಾಲಿಸಿಸ್ ಯಾವತ್ತೂ ಸರಿ ಎಂದ ಫ್ಯಾನ್ಸ್
ವೈಭವ್ ಸೂರ್ಯವಂಶಿಗೆ ಅವಕಾಶ ಯಾಕೆ ನೀಡಿಲ್ಲ ಅನ್ನೋ ಕೂಗು ಹೆಚ್ಚಾದಾಗ ಆರ್ ಅಶ್ವಿನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು. ವೈಭವ್ ಸೂರ್ಯವಂಶಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡು ತಂಡದಿಂದ ಪಾಠ ಕಲಿಯಲು ಸಮಯವಿದೆ. ಈಗಲೇ ಅವಕಾಶ ನೀಡುವುದಕ್ಕಿಂತ ಸಮಯಕ್ಕಾಗಿ ಕಾಯಬೇಕು. ಸದ್ಯ ವಿಶ್ವ ಚಾಂಪಿಯನ್ ಗೆದ್ದ ಆಟಗಾರರ ಬೆಂಬಲಿಸುವುದು ಮುಖ್ಯ ಎಂದಿದ್ದರು. ಈ ವೇಳೆ ಎಲ್ಲರೂ ಆರ್ ಅಶ್ವಿನ್ ಮೇಲೆ ಮುಗಿಬಿದ್ದಿದ್ದರು. ಇದೀಗ ಅಭಿಮಾನಿಗಳು ಆರ್ ಅಶ್ವಿನ್ ಮಾತು ಸರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಸೋಶಿಯಲ್ ಮೀಡಿಯಾ ನೋಡಿಕೊಂಡು ತಂಡ ಆಯ್ಕೆ ಮಾಡುತ್ತದೆ, ಪ್ಲೇಯಿಂಗ್ 11 ಸೆಲೆಕ್ಟ್ ಮಾಡಿಕೊಳ್ಳುತ್ತಿದೆ. ಇದರಿಂದಲೇ ಟೀಂ ಇಂಡಿಯಾ ಸತತ ಸರಣಿ ಸೋಲಿಗೆ ಗುರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ, ಟ್ರೆಂಡ್ ಮೇಲೆ ಆಟಗಾರರ ಆಯ್ಕೆ ಮಾಡಲು ಮುಂದಾಗಿರುವುದೇ ದೊಡ್ಡ ತಪ್ಪು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
56
ಮೂರು ಪಂದ್ಯಗಳಲ್ಲಿ ವೈಭವ್ ನಿರಾಸೆ
ಐರ್ಲೆಂಡ್ ವಿರುದ್ಧ ಬೆಂಚ್ ಕಾದಿದ್ದ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ದಧ 2ನೇ ಟಿ20 ಮೂಲಕ ಪದಾರ್ಪಣೆ ಮಾಡಿದ್ದರು. ಆದರೆ ಮೂರು ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಕೇವಲ 42 ರನ್ ಸಿಡಿಸಿದ್ದಾರೆ. 1 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ್ದಾರೆ.
66
ಒಂದು ಪಂದ್ಯದಲ್ಲಿ ಗೆಲ್ಲುತ್ತಾ ಭಾರತ
ಇಂಗ್ಲೆಂಡ್ ವಿರುದ್ದದ 5 ಟಿ20 ಪಂದ್ಯಗಳ ಪೈಕಿ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಸತತ ಮೂರು ಪಂದ್ಯಗಳಲ್ಲಿ ಭಾರತ ಸೋಲು ಕಂಡು ಸರಣಿ ಕೈಚೆಲ್ಲಿತ್ತು. ಇದೀಗ ಇಂದು ನಡೆಯಲಿರುವ ಒಂದು ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುತ್ತಾ ಅನ್ನೋ ಪ್ರಶ್ನೆಗಳು ಎದುರಾಗಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದದ ಪ್ರದರ್ಶನ ನೋಡಿದರೆ ಇಂದಿನ ಪಂದ್ಯದಲ್ಲೂ ಭಾರತ ಗೆಲ್ಲುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.