ವಜ್ರಕಾಯ ನಟಿಗಿತ್ತು ಪಾಕ್ ಕ್ರಿಕೆಟಿಗನ ಮೇಲೆ ಕ್ರಶ್, ಅವನು ಸಲಿಂಗಕಾಮಿ ಎಂದು ಗೊತ್ತಾದಾಗ ಶಾಕ್!

First Published | May 27, 2024, 10:53 AM IST

ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಸೇರಿ ತೆಲಗು ಚಿತ್ರರಂಗದಲ್ಲಿ ಮಿಂಚಿದ್ದ ನಟಿ ಜಯಸುಧಾ ವಿವಿಧ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಹೋದ ವರ್ಷ ಮೂರನೇ ಮದುವೆಯಾಗಿ ಸುದ್ದಿಯಾಗಿದ್ದರೆ, ಮತ್ತೊಮ್ಮೆ ಬಿಜೆಪಿಗೆ ಸೇರಿ ಸದ್ದು ಮಾಡಿದ್ದರು. ಇದೀಗ ಅವರ ಇಂಟರ್‌ವ್ಯೂ ತುಣಕೊಂಡು ಮತ್ತೆ ಸದ್ದು ಮಾಡುತ್ತಿದ್ದು, ಅವರಿಗೆ ಸ್ಟಾರ್ ಕ್ರಿಕೆಟಿಗನ ಮೇಲಿದ್ದ ಕ್ರಶ್ ಹಾಗೂ ಅವನು ಸಲಿಂಗ ಕಾಮಿ ಎಂದು ಗೊತ್ತಾದಾಗ ಆದ ಆಘಾತದ ಬಗ್ಗೆ ಓಪನ್ ಅಪ್ ಆಗಿದ್ದಾರೆ.

ಒಂದು ಕಾಲದಲ್ಲಿ ಕಾಲಿವುಡ್‌ನಲ್ಲಿ ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಚಿತ್ರರಂಗದ ರಸಿಕರ ಗಮನ ಸೆಳೆದಿದ್ದ ಜಯಸುಧಾ, ಈಗೀಗ ತುಂಬಾ ಕಡಿಮೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಅದರಲ್ಲಿಯೂ ಫೋಷಕ ಪಾತ್ರಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸುತ್ತಿದ್ದು, ಹೀರೋ ಅಥವಾ ಹೀರೋಯಿನ್ ತಾಯಿಯೋ, ಚಿಕ್ಕಮ್ಮನೋ ಆಗಿ ನಟಿಸುತ್ತಿದ್ದಾರೆ. ಆದರೆ, ಇವರಿಗೆ ಇವರೇ ಸಾಟಿ ಎನ್ನುವಂತೆ ಅಭಿನಯಕ್ಕೆ ಯಾರೂ ಸಮಾನರಾಗೋಲ್ಲ.

Tap to resize

ಉದ್ಯಮಿಯೊಂದಿಗಿನ ಅವರ ಪೋಟೋ ವೈರಲ್ ಆದ ನಂತರ ಇಂಥದ್ದೊಂದು ಊಹಾಪೋಹಗಳು ಹುಟ್ಟಿಕೊಂಡಿದ್ದು, ಅವರ ಜೊತೆ ಜಯಸುಧಾ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.

ನಟಿ ಜಯಸುಧಾ ಜೀವನ ಚರಿತ್ರೆ ಮಾಡಲು ಫೆಲಿಪ್ ರೂಲ್ಸ್ ಎಂಬ ವಿದೇಶಿ ಉದ್ಯಮಿ ಭಾರತಕ್ಕೆ ಬಂದಿದ್ದರೇ ಹೊರತು, ಅವರೊಂದಿಗೆ ಬೇರೇನೂ ಸಂಬಂಧವಿಲ್ಲವೆಂದು ಹೇಳುವ ಮೂಲಕ ಹರಿದಾಡ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದರು ಜಯಸುಧಾ.

ಆಗಲೇ 2ನೇ ಮದುವೆಯಾಗಿದ್ದ ಜಯಸುಧಾ ದ್ವಿತೀಯ ಪತಿ ನಿತಿನ್ ಕಪೂರ್ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದರು. ಇದೀಗ ಈ ನಟಿ ತಮ್ಮ ಜೀವನದ ಬಗ್ಗೆ ಹಲವು ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಇಂಥದ್ದೊಂದು ಸಂದರ್ಶನದಲ್ಲಿ ಹಲವು ತೆಲಗು ಹೀರೋಗಳ ಮೇಲೆ ತಮಗಿದ್ದ ಕ್ರಶ್ ಬಗ್ಗೆ ಗಮನ ಸೆಳೆದಿದ್ದ ಜಯಸುಧಾ, ಪಾಕಿಸ್ತಾನಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಮೇಲೂ ಹುಚ್ಚು ಪ್ರೇಮವಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಒಂದು ಕಾದಲ್ಲಿ ಹಲವು ಹೆಂಗಳೆಯರ ಹೃದಯದಲ್ಲಿ ಸ್ಥಾನ ಪಡೆದಿದ್ದ ಈ ಪಾಕಿಸ್ತಾನ ಕ್ರಿಕೆಟಿನ ಬಗ್ಗೆ ಸಹಜವಾಗಿಯೇ ಜಯಸುಧಾಗೂ ಒನ್ ಸೈಡೆಡ್ ಲವ್ ಇತ್ತು ಎನ್ನೋದನ್ನು ಅವರ ಮಾತಿನಿಂದ ವೇದ್ಯವಾಗುತ್ತದೆ.

ಆದರೆ, ಯಾವಾಗ ಈ ಇಮ್ರಾನ್ ಖಾನ್ ಸಲಿಂಗ ಕಾಮಿ ಎಂದು ಗೊತ್ತಾಯಿತೋ ಆಗ ಬೆಳ್ಳಗೆ ಕಂಡಿದ್ದೆಲ್ಲ ಹಾಲಲ್ಲ ಎಂಬುದು ಇವರಿಗೆ ಸ್ಪಷ್ಟವಾಯಿತಂತೆ. ಮನಸ್ಸು ಏನೇನೋ ಬಯಸುತ್ತಿದೆ. ಆದರೆ ಬಯಸಿದ್ದಕ್ಕೆ ಹಾತೊರೆಯಬಾರದು ಎಂದು ಅರಿವಾಯಿತು ಎಂದಿದ್ದಾರೆ ನಟಿ.

80ರ ದಶಕದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ ನಟಿ ಜೀನತ್ ಅಮನ್ ಜೊತೆ ಇಮ್ರಾನ್ ಖಾನ್‌ಗೆ ಅಫೇರ್ ಇತ್ತು ಎನ್ನಲಾಗಿತ್ತು. 1979ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತದಲ್ಲಿತ್ತು. ಆಗ ಜೀನತ್ ಅಮನ್ ಜೊತೆ ಇಮ್ರಾನ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆಂಬ ಸುದ್ದಿ ಸದ್ದು ಮಾಡಿತ್ತು.

Latest Videos

click me!