ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಪ್ರಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹಿರಿಯ ರಾಜಕಾರಣಿ ನವಜೋತ್ ಸಿಂಗ್ ಸಿಧು ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಬನ್ನಿ ನಾವಿಂದು ಸಿಧು ಕೇವಲ 5 ತಿಂಗಳಲ್ಲಿ 33 ಕೆ.ಜಿ ತೂಕ ಕಳೆದುಕೊಂಡಿದ್ದು ಹೇಗೆ ಎನ್ನುವುದನ್ನು ನೋಡೋಣ.
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿರುವುದು ರಾಜಕೀಯದ ಹೇಳಿಕೆ ಅಥವಾ ಕ್ರಿಕೆಟ್ ಕುರಿತಾದ ಹೇಳಿಯಿಂದಲ್ಲ. ಇದರ ಬದಲಾಗಿ ಅಚ್ಚರಿಯ ರೀತಿಯಲ್ಲಿ ಗಣನೀಯ ಪ್ರಮಾಣದ ತೂಕ ಕಳೆದುಕೊಂಡು ಗಮನ ಸೆಳೆದಿದ್ದಾರೆ.
26
ನವಜೋತ್ ಸಿಂಗ್ ಸಿಧು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸದಾಗಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಪೈಕಿ ಒಂದು ತುಂಬಾ ದಪ್ಪಗಿರುವ ಹಳೆಯ ಫೋಟೋವಾದರೆ, ಮತ್ತೊಂದು ಫೋಟೋ ಇತ್ತೀಚೆಗೆ ತುಂಬಾ ಸಪೂರವಾಗಿರುವಂತೆ ಕಾಣುವ ಫೋಟೋ ಹಂಚಿಕೊಂಡಿದ್ದಾರೆ.
36
ಇದರ ಜತೆಗೆ ಸಿಧು, ಕಳೆದ 5 ತಿಂಗಳಿನಲ್ಲಿ ತಮ್ಮ ದೇಹದ ತೂಕದಲ್ಲಿ 33 ಕೆ.ಜಿ ಕಡಿಮೆಯಾಗಿದೆ. ಇದನ್ನು ಹೇಳುವುದಕ್ಕಾಗಿಯೇ ತಾವು ತಮ್ಮ ಹಳೆಯ ಹಾಗೂ ಇತ್ತೀಚೆಗಿನ ಫೋಟೋವನ್ನು ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ.
46
Navjot-Singh-SIdhu
ತಮ್ಮ ಫೋಟೋ ಜತೆಗೆ ನವಜೋತ್ ಸಿಂಗ್ ಸಿಧು, ಮೊದಲು ಹಾಗೂ ಆಮೇಲೆ. ಕಳೆದ ಆಗಸ್ಟ್‌ನಿಂದ 5 ತಿಂಗಳೊಳಗಾಗಿ ತಾವು 33 ಕಿಲೋ ಗ್ರಾಮ್ ದೇಹದ ತೂಕ ಕಡಿಮೆ ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ.
56
ಇದೆಲ್ಲವೂ ಇಚ್ಚಾಶಕ್ತಿ, ದೃಢಸಂಕಲ್ಪ, ಪ್ರಯತ್ನ, ಪ್ರಾಣಾಯಾಮದಿಂದಾಗಿ ಸಾಧ್ಯವಾಗಿದೆ. ತೂಕ ಇಳಿಸಿಕೊಳ್ಳುವ ಟ್ರೇನಿಂಗ್‌ನಿಂದಾಗಿ ಇದು ಸಾಕಾರವಾಗಿದೆ. ಜೀವನದಲ್ಲಿ ಯಾವುದೂ ಅಸಾಧ್ಯವಾದುದಿಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
66
ನವಜೋತ್ ಸಿಂಗ್ ಸಿಧು ಭಾರತ ಪರ 51 ಟೆಸ್ಟ್ ಮ್ಯಾಚ್‌ಗಳನ್ನಾಡಿ 42.13ರ ಬ್ಯಾಟಿಂಗ್ ಸರಾಸರಿಯಲ್ಲಿ 3202 ರನ್ ಸಿಡಿಸಿದ್ದಾರೆ. ಇದರಲ್ಲಿ 9 ಶತಕ ಹಾಗೂ 15 ಅರ್ಧಶತಕಗಳು ಸೇರಿವೆ. ಇನ್ನು 136 ಏಕದಿನ ಪಂದ್ಯಗಳನ್ನಾಡಿ 6 ಶತಕ ಹಾಗೂ 33 ಅರ್ಧಶತಕ ಸಹಿತ 4413 ರನ್ ಸಿಡಿಸಿದ್ದಾರೆ.