Ind vs Pak Asia Cup: ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಟೀಮ್ ಇಂಡಿಯಾ WAGs!
First Published | Aug 27, 2022, 6:03 PM ISTಭಾರತ ಹಾಗೂ ಪಾಕಿಸ್ತಾನದ ಏಷ್ಯಾಕಪ್ ಮಹಾ ಕದನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವೆ ರಣರೋಚಕ ಕಾಳಗ ಏರ್ಪಡುವ ನಿರೀಕ್ಷೆಯೂ ಇದೆ. ಇದರ ನಡುವೆ ಟೀಮ್ ಇಂಡಿಯಾ ಪ್ಲೇಯರ್‌ಗಳ ವ್ಯಾಗ್ಸ್ (ವೈಫ್ ಆಂಡ್ ಗರ್ಲ್‌ಫ್ರೆಂಡ್ಸ್) ಪಂದ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದ ವೀಕ್ಷಿಸಲಿದ್ದಾರೆ. ಭಾರತ-ಪಾಕ್ ಮುಖಾಮುಖಿಯ ವೇಳೆ ತಮ್ಮ ಆಟಗಾರರಾಗಿರುವ ತಮ್ಮ ಪತಿ ಹಾಗೂ ಗೆಳೆಯನ್ನು ಬೆಂಬಲಿಸಲು ದುಬೈ ಸ್ಟ್ಯಾಂಡ್‌ನಲ್ಲಿ ಕಾಣಬಹುದಾದ ವ್ಯಾಗ್ಸ್‌ಗಳ ಪಟ್ಟಿ ಇಲ್ಲಿದೆ.