10 ವರ್ಷದಲ್ಲಿ ಮೊದಲ ಬಾರಿಗೆ ಒಂದು ತಿಂಗಳು ಬ್ಯಾಟ್‌ ಮುಟ್ಟಿರಲಿಲ್ಲ..! ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

Published : Aug 27, 2022, 05:37 PM IST

ದುಬೈ: ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾಕಷ್ಟು ಬಿಡುವಿನ ಬಳಿಕ ಟೀಂ ಇಂಡಿಯಾ ಕೂಡಿಕೊಂಡಿರುವ ವಿರಾಟ್ ಕೊಹ್ಲಿ, ತಾವು ಕೂಡಾ ಕೆಲ ಸಮಯ ಮಾನಸಿಕವಾಗಿ ಕುಗ್ಗಿರುವ ವಿಚಾರವನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಇದೀಗ ಏಷ್ಯಾಕಪ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ಕೆಲವು ಅಚ್ಚರಿಯ ಸಂಗತಿಗಳನ್ನು ಹೊರಹಾಕಿದ್ದಾರೆ.  

PREV
110
10 ವರ್ಷದಲ್ಲಿ ಮೊದಲ ಬಾರಿಗೆ ಒಂದು ತಿಂಗಳು ಬ್ಯಾಟ್‌ ಮುಟ್ಟಿರಲಿಲ್ಲ..! ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?
virat kohli

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಕಳೆದ ಕೆಲ ವರ್ಷಗಳಿಂದ ದೊಡ್ಡ ಇನಿಂಗ್ಸ್‌ ಕಟ್ಟಲು ಪದೇ ಪದೇ ವೈಪಲ್ಯ ಅನುಭವಿಸುತ್ತಲೇ ಬಂದಿದ್ದಾರೆ. ಇದರ ಬೆನ್ನಲ್ಲೇ ಕಳೆದ ಜುಲೈನಿಂದೀಚೆಗೆ ಕೊಹ್ಲಿ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದರು.

210
Virat Kohli

33 ವರ್ಷದ ವಿರಾಟ್ ಕೊಹ್ಲಿ, ತಾವಾಡಿದ ಕೊನೆಯ ಸರಣಿಯಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಒಂದು ಟೆಸ್ಟ್‌, 2 ಟಿ20 ಹಾಗೂ 2 ಏಕದಿನ ಪಂದ್ಯಗಳಿಂದ ಕೇವಲ 76 ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು.

310

ಇಂಗ್ಲೆಂಡ್ ಪ್ರವಾಸ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದರು. ಇದೀಗ ಬಿಡುವಿನ ಸಮಯದಲ್ಲಿ ತಾನೇನು ಮಾಡಿದೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

410
Virat Kohli-Babar Azam

ಆಧುನಿಕ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಬ್ಯಾಟರ್‌ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಏಷ್ಯಾಕಪ್ ಟೂರ್ನಿಯ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆಗಸ್ಟ್‌ 28ರಂದು ಟೀಂ ಇಂಡಿಯಾ ದುಬೈನಲ್ಲಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

510

ತಮ್ಮ ಆಕ್ರಮಣಶಾಲಿ ಮನೋಭಾವದ ಮೂಲಕ ಮೈದಾನದಲ್ಲಿ ಸಹ ಆಟಗಾರರನ್ನು ಹುರಿದುಂಬಿಸುತ್ತಿದ್ದ ವಿರಾಟ್ ಕೊಹ್ಲಿ, ತಾವು ಅನುಭವಿಸಿದ ಮಾನಸಿಕವಾಗಿ ಕುಗ್ಗಿದ್ದರಿಂದಲೇ ತಾವು ಅನಿವಾರ್ಯವಾಗಿ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯಲು ಮುಂದಾಗಿದ್ದನ್ನು ಒಪ್ಪಿಕೊಂಡಿದ್ದಾರೆ.
 

610

10 ವರ್ಷಗಳಲ್ಲಿ ನಾನು ಮೊದಲ ಬಾರಿಗೆ, ಒಂದು ತಿಂಗಳ ಕಾಲ ನನ್ನ ಬ್ಯಾಟ್ ಮುಟ್ಟಿರಲಿಲ್ಲ. ಈ ಸಮಯದಲ್ಲಿ ನಾನು ಇತ್ತೀಚೆಗೆ ತೀವ್ರತೆಯನ್ನು ಸ್ವಲ್ಪ ನಕಲಿ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ನಾನು ಅರಿತುಕೊಂಡೆ. ನನ್ನ ಮನಸ್ಥಿತಿಗೆ ತಕ್ಕಂತೆ ನನ್ನ ದೇಹ ಸ್ಪಂದಿಸುತ್ತಿಲ್ಲವೆಂದು ಅರ್ಥವಾಯಿತು. ಕೆಲ ಕಾಲ ವಿಶ್ರಾಂತಿ ಪಡೆದು, ಆ ಬಳಿಕ ಕಮ್‌ಬ್ಯಾಕ್ ಮಾಡು ಎಂದು ನನ್ನ ಮನಸ್ಸು ಹೇಳುತ್ತಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
 

710
Virat Kohli

ಮೇಲ್ನೋಟಕ್ಕೆ, ನಾನು ನೋಡಲು ಮಾನಸಿಕವಾಗಿ ಬಲಿಷ್ಠವಾಗಿಯೇ ಕಾಣುತ್ತೇನೆ. ಆದರೆ ಪ್ರತಿಯೊಬ್ಬರು ತಮ್ಮದೇ ಆದ ಇತಿಮಿತಿಗಳನ್ನು ಹೊಂದಿರುತ್ತಾರೆ. ನಾನು ನಮ್ಮ ಇತಿಮಿತಿಗಳನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೇ ಎಲ್ಲವೂ ಅಸ್ತವ್ಯಸ್ಥವಾಗುತ್ತದೆ. 

810
Virat Kohli and KL Rahul

ನಾನು ಬಿಡುವು ಪಡೆದುಕೊಂಡ ಸಮಯದಲ್ಲಿ ಸಾಕಷ್ಟು ಪಾಠಗಳನ್ನು ಕಲಿತುಕೊಂಡಿದ್ದೇನೆ. ಕೊನೆಗೂ ನಾನು ಎಲ್ಲಿ ಎಡವುತ್ತಿದ್ದೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

910

ನಾನು ಮಾನಸಿಕವಾಗಿ ಕುಸಿದಿದ್ದೆ ಎಂದು ಹೇಳಲು ನನಗೇನು ನಾಚಿಕೆ ಎನಿಸುತ್ತಿಲ್ಲ. ಇದು ಜೀವನದಲ್ಲಿ ಸಾಮಾನ್ಯ ಪ್ರಕ್ರಿಯೆ, ಆದರೆ ನಾವು ಈ ವಿಚಾರವನ್ನು ಮಾತನಾಡಲು ಹಿಂಜರಿಯುತ್ತೇವೆ. ನಾವು ಮಾನಸಿಕವಾಗಿ ಕುಸಿದಿದ್ದೇವೆ ಎಂದು ತೋರ್ಪಡಿಸಿಕೊಳ್ಳಲು ಬಯಸುವುದಿಲ್ಲ. ಒಂದು ಸತ್ಯ ಹೇಳುತ್ತೇನೆ ಕೇಳಿ, ನಾನು ಬಲಿಷ್ಠವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುವುದಕ್ಕಿಂತ, ದುರ್ಬಲರಾಗಿದ್ದೇವೆ ಎಂದು ಒಪ್ಪಿಕೊಳ್ಳುವುದು ಉತ್ತಮ ಎಂದು ಕೊಹ್ಲಿ ಮನಬಿಚ್ಚಿ ಹೇಳಿದ್ದಾರೆ.

1010
Virat Kohli

ಪಾಕಿಸ್ತಾನ ವಿರುದ್ದದ ಕಮ್‌ಬ್ಯಾಕ್ ಪಂದ್ಯವು ವಿರಾಟ್ ಕೊಹ್ಲಿ ಪಾಲಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100ನೇ ಪಂದ್ಯವಾಗಿದೆ.  ಕೊಹ್ಲಿ ಇದುವರೆಗೂ 99 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ 139.66ರ ಸ್ಟ್ರೈಕ್‌ರೇಟ್‌ನಲ್ಲಿ 3,308 ರನ್ ಬಾರಿಸಿದ್ದಾರೆ.

Read more Photos on
click me!

Recommended Stories