IPL 2026: ಧೋನಿಯ 'ಫೇವರಿಟ್' ಆಲ್ರೌಂಡರ್ ತನ್ನ ಬುಟ್ಟಿಗೆ ಹಾಕಿಕೊಂಡ ಮುಂಬೈ ಇಂಡಿಯನ್ಸ್!

Published : Nov 13, 2025, 07:00 PM IST

ಅಚ್ಚರಿಯ ರೀತಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮಹೇಂದ್ರ ಸಿಂಗ್ ಧೋನಿ ಅವರ ಫೇವರೇಟ್ ಆಲ್ರೌಂಡರ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯಿಂದ ಟ್ರೇಡ್ ಮಾಡಿಕೊಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

PREV
15
ಮುಂಬೈ ತಂಡಕ್ಕೆ ಬಂದ ಶಾರ್ದೂಲ್ ಠಾಕೂರ್

ಐಪಿಎಲ್ 2026ರ ಕುತೂಹಲ ಹೆಚ್ಚಾಗಿದ್ದು, ಮುಂಬೈ ಇಂಡಿಯನ್ಸ್ ತಂಡವು ಸಿಎಸ್‌ಕೆ ಮಾಜಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು 2 ಕೋಟಿ ರೂ.ಗೆ ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.

25
ಲಖನೌ ತಂಡದಲ್ಲಿದ್ದ ಶಾರ್ದೂಲ್

ಐಪಿಎಲ್ ಅಧಿಕೃತ ಪ್ರಕಟಣೆ ಪ್ರಕಾರ, ಲಖನೌ ಸೂಪರ್ ಜೈಂಟ್ಸ್‌ನ ಆಲ್‌ರೌಂಡರ್ ಶಾರ್ದೂಲ್ ಠಾಕೂರ್, 2 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡ್ ಆಗಿದ್ದಾರೆ.  ಧೋನಿಯ ನೆಚ್ಚಿನ ಆಟಗಾರ ಶಾರ್ದೂಲ್.

35
ಅರ್ಜುನ್ ತೆಂಡೂಲ್ಕರ್ ಹೊರಕ್ಕೆ?

ಶಾರ್ದೂಲ್ ಠಾಕೂರ್ ಬದಲಿ ಆಟಗಾರನಾಗಿ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

45
ದೀಪಕ್ ಚಹರ್‌ಗೆ ಶಾರ್ದೂಲ್ ಬ್ಯಾಕಪ್ ಆಟಗಾರ

ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ದೀಪಕ್ ಚಹರ್ ಗಾಯದ ಸಮಸ್ಯೆ ಇರುವುದರಿಂದ ಅವರಿಗೆ ಬ್ಯಾಕ್‌ಅಪ್ ಬೌಲರ್ ರೀತಿಯಲ್ಲಿ ಶಾರ್ದೂಲ್ ಠಾಕೂರ್ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ಮುಂಬೈ ಫ್ರಾಂಚೈಸಿ

55
ಮತ್ತೆ ಕಪ್ ಗೆಲ್ಲಲು ರೆಡಿಯಾದ ಮುಂಬೈ

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಕಳೆದ ಬಾರಿ ಪ್ಲೇ ಆಫ್‌ ಪ್ರವೇಶಿಸಿತ್ತಾದರೂ, ಫೈನಲ್‌ಗೇರಲು ವಿಫಲವಾಗಿತ್ತು. ಕಳೆದ ಬಾರಿ ಮಾಡಿದ ತಪ್ಪನ್ನು ತಿದ್ದಿಕೊಂಡು ಮೈದಾನಕ್ಕಿಳಿಯಲು ಮುಂಬೈ ಫ್ರಾಂಚೈಸಿ ಸಜ್ಜಾಗಿದೆ.

Read more Photos on
click me!

Recommended Stories