IPLನಲ್ಲಿ ಮುಂಬೈ ಇಂಡಿಯನ್ಸ್ ಮೈಲಿಗಲ್ಲು, ಪಾಕ್ ದಾಖಲೆ ಮುರಿಯಲು ಇನ್ನು 3 ಹೆಜ್ಜೆ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೊತ್ತ ಚೇಸಿಂಗ್ ನಡುವೆ ಮುಂಬೈ ಇಂಡಿಯನ್ಸ್ ಬರೆದ ದಾಖಲೆ ಏನು?
ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಕೆಕೆಆರ್ 220 ರನ್ ಸಿಡಿಸಿ ಬೃಹತ್ ಟಾರ್ಗೆಟ್ ನೀಡಿದೆ. ಇತ್ತ ಮುಂಬೈ ಇಂಡಿಯನ್ಸ್ ಚೇಸಿಂಗ್ ವಿಶ್ವಾಸದಲ್ಲಿ ಅಬ್ಬರಿಸುತ್ತಿದೆ. ಇದರ ನಡುವೆ ಮುಂಬೈ ಇಂಡಿಯನ್ಸ್ ದಾಖಲೆಯೊಂದು ಬರೆದಿದೆ.
25
ಪಂದ್ಯದಲ್ಲಿ ದಾಖಲೆ ಬರೆದ ಮುಂಬೈ ಇಂಡಿಯನ್ಸ್
ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟ್ರೋಫಿ ಸೇರಿ ಒಟ್ಟು 300 ಪಂದ್ಯ ಆಡಿದ ಸಾಧನೆ ಮಾಡಿದೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ತಂಡ ಅನ್ನೋ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮುಂಬೈ 300ನೇ ಪಂದ್ಯದ ಸಾಧನೆ ಮಾಡಿದೆ.
35
300 ಪಂದ್ಯ ಆಡಿ ದಾಖಲೆ ಬರೆದ ತಂಡ
ಮುಂಬೈ ಇಂಡಿಯನ್ಸ್ 300 ಪಂದ್ಯದ ಸಾಧನೆ ಮಾಡಿದರೆ, ಇದಕ್ಕೂ ಮೊದಲು ಪಾಕಿಸ್ತಾನ ತಂಡ 303 ಪಂದ್ಯ ಆಡಿದ ಸಾಧನೆ ಮಾಡಿದೆ. ಇನ್ನು ಇಂಗ್ಲೀಷ್ ಕೌಂಟಿ ತಂಡ 303 ಪಂದ್ಯ ಆಡಿ ಈ ಸಾಧನೆ ಮಾಡಿದೆ. ಈ ಐಪಿಎಲ್ ಟೂರ್ನಿಯಲ್ಲಿ ಈ ಎರಡು ತಂಡಗಳ ದಾಖಲೆ ಮುರಿದು ಮುಂಬೈ ಇಂಡಿಯನ್ಸ್ ಅತೀ ಗರಿಷ್ಠ ಪಂದ್ಯದ ದಾಖಲೆ ಬರೆಯಲಿದೆ.
ಐಪಿಎಲ್ ಟೂರ್ನಿಯಲ್ಲ ಗರಿಷ್ಠ ಪಂದ್ಯ ಆಡಿದ ದಾಖಲೆಯಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನದಲ್ಲಿದೆ. ವಿಶೇಷ ಅಂದರೆ ಎರಡನೇ ಸ್ಥಾನ ಆರ್‌ಸಿಬಿ ಪಾಲಾಗಿದೆ. ಆರ್‌ಸಿಬಿ 287 ಪಂದ್ಯ ಆಡಿದ ಸಾಧನೆ ಮಾಡಿದೆ. ಕೆಕೆಆರ್ ತಂಡ 281 ಪಂದ್ಯದ ಮೂಲಕ ಮೂರನೇ ಸ್ಥಾನದಲ್ಲಿದೆ.
55
ಐದು ಐಪಿಎಲ್ ಟೂರ್ನಿ ಸಾಧನೆ
ಮುಂಬೈ ಇಂಡಿಯನ್ಸ್ ಗರಿಷ್ಠ ಪಂದ್ಯ ಹಾಗೂ ಗರಿಷ್ಠ ಟ್ರೋಫಿ ಗೆದ್ದುಕೊಂಡಿದೆ. ಮುಂಬೈ 5 ಬಾರಿ ಐಪಿಎಲ್ ಟ್ರೋಫಿ ಗೆದ್ದು ಗರಿಷ್ಠ ಟ್ರೋಫಿ ಪಟ್ಟಿಯಲ್ಲಿ ಸಿಎಸ್‌ಕೆ ಜೊತೆ ಮೊದಲ ಸ್ಥಾನ ಗೆದ್ದುಕೊಂಡಿದೆ.ಮುಂಬೈ ಇಂಡಿಯನ್ಸ್ 2013, 2015, 2017, 2019 ಹಾಗೂ 2020ರಲ್ಲಿ ಟ್ರೋಫಿ ಸಾಧನೆ ಮಾಡಿದೆ. ಕಳೆದ 5 ವರ್ಷದಲ್ಲಿ ಮುಂಬೈ ಟ್ರೋಫಿ ಗೆದ್ದಿಲ್ಲ.
ಐದು ಐಪಿಎಲ್ ಟೂರ್ನಿ ಸಾಧನೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.