ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಎಂ.ಎಸ್‌.ಧೋನಿ ಅಲಭ್ಯ! ಲೀಗ್‌ ಹಂತದಲ್ಲಿ ಧೋನಿ-ಕೊಹ್ಲಿ ಮುಖಾಮುಖಿ ಇಲ್ಲ!

Published : Mar 29, 2026, 11:11 AM IST

ಬೆಂಗಳೂರು: ಭಾರತದ ದಿಗ್ಗಜ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ 19ನೇ ಸೀಸನ್ ಐಪಿಎಲ್ ಟೂರ್ನಿಯ ಲೀಗ್‌ ಹಂತದಲ್ಲಿ ಮುಖಾಮುಖಿಯಾಗುವುದು ಅನುಮಾನ ಎನಿಸಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ. 

PREV
16
RCB ಎದುರಿನ ಪಂದ್ಯಕ್ಕೆ ಧೋನಿ ಅಲಭ್ಯ

ಸ್ನಾಯುಸೆಳೆತಕ್ಕೆ ಒಳಗಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ನಾಯಕ ಎಂ.ಎಸ್‌.ಧೋನಿ ಅವರು ಈ ಬಾರಿ ಐಪಿಎಲ್‌ನಲ್ಲಿ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ. ಇದರೊಂದಿಗೆ ಅವರು ಏ.5ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

26
ಸಿಎಸ್‌ಕೆ ಫ್ರಾಂಚೈಸಿಯಿಂದ ಅಧಿಕೃತ ಪ್ರಕಟಣೆ

‘ಸ್ನಾಯುಸೆಳೆತಕ್ಕೆ ಒಳಗಾಗಿ ಧೋನಿ ಈಗ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಹೀಗಾಗಿ ಅವರು 2026ರ ಐಪಿಎಲ್‌ನ ಆರಂಭಿಕ 2 ವಾರ ಪಂದ್ಯಗಳಿಗೆ ಲಭ್ಯವಿಲ್ಲ’ ಎಂದು ಶನಿವಾರ ಸಿಎಸ್‌ಕೆ ಫ್ರಾಂಚೈಸಿ ತಿಳಿಸಿದೆ.

36
44 ವರ್ಷದ ಧೋನಿ

44 ವರ್ಷದ ಧೋನಿ 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗಿದ್ದರೂ ಐಪಿಎಲ್‌ ಆಡುತ್ತಿದ್ದಾರೆ. ಕಳೆದ ವರ್ಷ ಅವರು ಎಲ್ಲಾ 14 ಪಂದ್ಯಗಳಲ್ಲೂ ಕಾಣಿಸಿಕೊಂಡಿದ್ದರು.

46
ಐಪಿಎಲ್ ಇತಿಹಾಸದಲ್ಲೇ ಸಿಎಸ್‌ಕೆ ಮೊದಲ ಸಲ ಧೋನಿ-ರೈನಾ ಇಲ್ಲದೇ ಆಡುತ್ತಿದೆ

ಈ ಬಾರಿ ಆರಂಭಿಕ ಕೆಲ ಪಂದ್ಯಗಳಿಗೆ ಚೆನ್ನೈ ಪರ ಧೋನಿ ಆಡುವುದಿಲ್ಲ. ಇದರೊಂದಿಗೆ, ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿ ಸಿಎಸ್‌ಕೆ ತಂಡ ಎಂ.ಎಸ್‌.ಧೋನಿ ಅಥವಾ ಸುರೇಶ್‌ ರೈನಾ ಇಲ್ಲದೆ ಆಡುವಂತಾಗಿದೆ.

56
2008ರಿಂದ ರೈನಾ/ಧೋನಿ ಇಬ್ಬರಲ್ಲಿ ಒಬ್ಬರು ಸಿಎಸ್‌ಕೆ ಪರ ಆಡುತ್ತಲೇ ಬಂದಿದ್ದಾರೆ

2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಎಂ ಎಸ್ ಧೋನಿ ಅಥವಾ ಸುರೇಶ್ ರೈನಾ ಇರುತ್ತಿದ್ದರು. ರೈನಾ 2021ರವರೆಗೂ ಚೆನ್ನೈ ತಂಡದಲ್ಲಿದ್ದರು.

66
ಈ ಸೀಸನ್‌ ಲೀಗ್‌ನಲ್ಲಿ ಧೋನಿ-ಕೊಹ್ಲಿ ಮುಖಾಮುಖಿಯಿಲ್ಲ!

ಆಧುನಿಕ ಕ್ರಿಕೆಟ್‌ನ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಲೀಗ್ ಹಂತದಲ್ಲಿ ಮುಖಾಮುಖಿಯಾಗುತ್ತಿಲ್ಲ. ಯಾಕೆಂದರೆ ಲೀಗ್‌ ಹಂತದಲ್ಲಿ ಒಮ್ಮೆ ಮಾತ್ರ ಸಿಎಸ್‌ಕೆ ಹಾಗೂ ಆರ್‌ಸಿಬಿ ತಂಡಗಳು ಮುಖಾಮುಖಿಯಾಗುತ್ತಿವೆ. ಒಂದು ವೇಳೆ ಉಭಯ ತಂಡಗಳು ನಾಕೌಟ್ ಹಂತಕ್ಕೇರಿದರೆ ಹಾಗೂ ಧೋನಿ ಕೂಡಾ ಫಿಟ್ ಆಗಿದ್ದರಷ್ಟೇ ಧೋನಿ-ಕೊಹ್ಲಿ ಕಾದಾಟ ನೋಡಲು ಅಭಿಮಾನಿಗಳಿಗೆ ಸಿಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories