ಎಂ ಎಸ್ ಧೋನಿ ಏಕದಿನ ವಿಶ್ವಕಪ್‌ ವಿನ್ನಿಂಗ್ ಸಿಕ್ಸರ್ ಅಜರಾಮರವಾಗಿಸಿದ ಮುಂಬೈ ಕ್ರಿಕೆಟ್ ಸಂಸ್ಥೆ..!

Published : Apr 08, 2023, 04:16 PM IST

ಮುಂಬೈ(ಏ.08): ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, 2011ರಲ್ಲಿ ಶ್ರೀಲಂಕಾವನ್ನು ಮಣಿಸಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಧೋನಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಚಾಂಪಿಯನ್‌ ಪಟ್ಟಕ್ಖೇರಿಸಿದ್ದರು. ಇದೀಗ ಧೋನಿ ಬಾರಿಸಿದ ಚೆಂಡು ಬಿದ್ದ ಸ್ಥಳವನ್ನು ಸ್ಮಾರಕವನ್ನಾಗಿ ಮಾಡುವ ಮೂಲಕ ಮುಂಬೈ ಕ್ರಿಕೆಟ್ ಸಂಸ್ಥೆಯು ಧೋನಿಗೆ ವಿಶೇಷ ಗೌರವ ನೀಡಿದೆ. ಧೋನಿ ಈ ಸ್ಮಾರಕವನ್ನು ಉದ್ಘಾಟಿಸಿದ್ದಾರೆ.  

PREV
15
ಎಂ ಎಸ್ ಧೋನಿ ಏಕದಿನ ವಿಶ್ವಕಪ್‌ ವಿನ್ನಿಂಗ್ ಸಿಕ್ಸರ್ ಅಜರಾಮರವಾಗಿಸಿದ ಮುಂಬೈ ಕ್ರಿಕೆಟ್ ಸಂಸ್ಥೆ..!

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, 2011ರ ಐಸಿಸಿ ಏಕದಿನ ವಿಶ್ವಕಪ್ ಜಯಿಸುವ ಮೂಲಕ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 

25

ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಲಂಕಾ ಎದುರು ಟೀಂ ಇಂಡಿಯಾ 6 ವಿಕೆಟ್ ಜಯ ಸಾಧಿಸಿತ್ತು. ಗೌತಮ್ ಗಂಭೀರ್ 97 ರನ್ ಸಿಡಿಸಿದರೆ, ನಾಯಕ ಧೋನಿ ಅಜೇಯ 91 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

35

ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ 49ನೇ ಓವರ್‌ನ ಎರಡನೇ ಎಸೆತದಲ್ಲಿ ನುವಾನ್ ಕುಲಸೇಖರ ಬೌಲಿಂಗ್‌ನಲ್ಲಿ ಮುಗಿಲೆತ್ತರದ ಸಿಕ್ಸರ್ ಸಿಡಿಸಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಇದು ಕ್ರಿಕೆಟ್ ಅಭಿಮಾನಿಗಳ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದಿದೆ.

45

2011ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರ​ತದ ಗೆಲು​ವಿನ ಸಿಕ್ಸರ್‌ ಬಾರಿ​ಸಿದ್ದ ಎಂ.ಎ​ಸ್‌.​ಧೋ​ನಿ​ಯನ್ನು ಶುಕ್ರ​ವಾರ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿ​ಎ)ಯು ವಾಂಖೇಡೆ ಕ್ರೀಡಾಂಗ​ಣ​ದಲ್ಲಿ ಸನ್ಮಾ​ನಿ​ಸಿ​ತು. 

55

ಸಿಕ್ಸರ್‌ ಬಾರಿ​ಸುವ ಚಿತ್ರ​ವಿ​ರುವ ಫ್ರೇಮ್‌ ನೀಡಿ ಸಂಸ್ಥೆಯ ಅಧಿ​ಕಾ​ರಿ​ಗಳು ಗೌರ​ವಿ​ಸಿ​ದ​ರು. ಗೆಲು​ವಿನ ಸಿಕ್ಸರ್‌ ಬಾರಿಸಿದ ವೇಳೆ ಚೆಂಡು ಬಿದ್ದ ಸ್ಥಳ​ದಲ್ಲಿ 5 ಆಸ​ನ​ಗ​ಳನ್ನು ಎಂಸಿಎ ಗುರು​ತಿ​ಸಿದ್ದು, ಆ ಸ್ಥಳ​ದಲ್ಲಿ ನಿರ್ಮಾ​ಣ​ವಾ​ಗ​ಲಿ​ರುವ ಸ್ಮಾರ​ಕವನ್ನು ಧೋನಿ ವೀಕ್ಷಿಸಿದರು.
 

Read more Photos on
click me!

Recommended Stories