IPL ನಿಂದ ಅತಿಹೆಚ್ಚು ಸಂಪಾದನೆ ಮಾಡಿದ ಟಾಪ್ 5 ಭಾರತೀಯ ಕ್ರಿಕೆಟಿಗರಿವರು..!

Published : Apr 08, 2023, 02:07 PM IST

ಬೆಂಗಳೂರು(ಏ.08): ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು 15 ಯಶಸ್ವಿ ಆವೃತ್ತಿ ಮುಗಿಸಿ, ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಜರುಗುತ್ತಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಿಂದ ಅತಿಹೆಚ್ಚು ಸಂಪಾದನೆ ಮಾಡಿದ ಟಾಪ್ 5 ಭಾರತೀಯ ಕ್ರಿಕೆಟಿಗರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
115
IPL ನಿಂದ ಅತಿಹೆಚ್ಚು ಸಂಪಾದನೆ ಮಾಡಿದ ಟಾಪ್ 5 ಭಾರತೀಯ ಕ್ರಿಕೆಟಿಗರಿವರು..!
5. ರವೀಂದ್ರ ಜಡೇಜಾ: 109 ಕೋಟಿ ರುಪಾಯಿ

2008ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಆ ಬಳಿಕ 2008ರಲ್ಲಿ ಆರಂಭವಾದ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ, ರಾಜಸ್ಥಾನ ರಾಯಲ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು.
 

215

ರಾಜಸ್ಥಾನ ರಾಯಲ್ಸ್‌ ಪರ 12 ಲಕ್ಷ ರುಪಾಯಿಗೆ ಹರಾಜಾಗಿದ್ದ ಜಡೇಜಾ, ಆ ಬಳಿಕ ತಮ್ಮ ಅದ್ಭುತ ಪ್ರದರ್ಶನದ ಮೂಲಕ ತಮ್ಮ ಮೌಲ್ಯ ಹೆಚ್ಚಿಸಿಕೊಂಡರು. 2011ರಲ್ಲಿ ನಡೆದ ಐಪಿಎಲ್‌ ಹರಾಜಿನಲ್ಲಿ ಜಡ್ಡು 4.37 ಕೋಟಿ ರುಪಾಯಿಗೆ ಕೊಚ್ಚಿ ಟಸ್ಕರ್ಸ್‌ ಕೇರಳ ತಂಡವನ್ನು ಕೂಡಿಕೊಂಡಿದ್ದರು.

315

ಇದಾಗಿ ಮರು ವರ್ಷವೇ ಜಡೇಜಾ 12.8 ಕೋಟಿ ರುಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್‌ ಪಾಲಾಗಿದ್ದರು. ಇನ್ನು 2016 ಹಾಗೂ 2017ರ ಅವಧಿಯಲ್ಲಿ ಜಡೇಜಾ 5.5 ಹಾಗೂ 9.5 ಕೋಟಿ ರುಪಾಯಿಗೆ ಗುಜರಾತ್ ಲಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು 2018ರಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಜಡ್ಡು ವಾರ್ಷಿಕ 16 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

415
4. ಸುರೇಶ್ ರೈನಾ: 110 ಕೋಟಿ ರುಪಾಯಿ

15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸುರೇಶ್ ರೈನಾ ಅನ್‌ಸೋಲ್ಡ್ ಆದ ಬೆನ್ನಲ್ಲೇ 2022ರ ಸೆಪ್ಟೆಂಬರ್‌ನಲ್ಲಿ ರೈನಾ, ಐಪಿಎಲ್‌ಗೆ ವಿದಾಯ ಘೋಷಿಸಿದ್ದರು. ರೈನಾ, ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಐಪಿಎಲ್ ವೃತ್ತಿಜೀವನ ಆರಂಭಿಸಿ, ಸಿಎಸ್‌ಕೆ ತಂಡದಲ್ಲಿದ್ದಾಗಲೇ ಐಪಿಎಲ್‌ಗೆ ಗುಡ್ ಬೈ ಹೇಳಿರುವುದು ವಿಶೇಷ.
 

515

ರೈನಾ, 2008ರ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ 2.6 ಕೋಟಿ ರುಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಕೂಡಿಕೊಂಡಿದ್ದರು. 2010ರಲ್ಲಿ ಸಿಎಸ್‌ಕೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ರೈನಾ ಮಹತ್ತರ ಪಾತ್ರ ವಹಿಸಿದ್ದರಿಂದ ಫ್ರಾಂಚೈಸಿಯು ರೈನಾ ಅವರನ್ನು 2011ರ ಮೆಗಾ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿತ್ತು. 

615

ರೈನಾ 2011ರಿಂದ 2013ರ ವರೆಗೆ ಸಿಎಸ್‌ಕೆ ಪರ 5.9 ಕೋಟಿ ರುಪಾಯಿ ಸಂಭಾವನೆ ಪಡೆದರೆ, 2014ರಲ್ಲಿ ತಮ್ಮ ಸಂಭಾವನೆಯನ್ನು 9.5 ಕೋಟಿಗೆ ಹೆಚ್ಚಿಸಿಕೊಂಡರು. ಇನ್ನು 2016 ಹಾಗೂ 2017ರಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕರಾಗಿ 12.5 ಕೋಟಿ ರುಪಾಯಿ ಸಂಭಾವನೆ ಪಡೆದರು. ಇನ್ನು ಮತ್ತೆ 2018ರಲ್ಲಿ 11 ಕೋಟಿ ರುಪಾಯಿಗೆ ರೈನಾ ಸಿಎಸ್‌ಕೆ ತೆಕ್ಕೆಗೆ ಜಾರಿದರು. ಮಿಸ್ಟರ್ ಐಪಿಎಲ್ ಎಂದೇ ಹೆಸರಾದ ರೈನಾ, ಐಪಿಎಲ್‌ನಿಂದ 110 ಕೋಟಿ ರುಪಾಯಿ ಸಂಪಾದನೆ ಮಾಡಿದ್ದಾರೆ. 
 

715
3. ವಿರಾಟ್ ಕೊಹ್ಲಿ: 173 ಕೋಟಿ

ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ, ಐಪಿಎಲ್‌ ಮೂಲಕವೇ ಸುಮಾರು 173 ಕೋಟಿ ರುಪಾಯಿ ಜೇಬಿಗಿಳಿಸಿಕೊಂಡಿದ್ದಾರೆ. 16 ಆವೃತ್ತಿಗಳಲ್ಲೂ ಒಂದೇ ತಂಡವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಕೊಹ್ಲಿಯವರದ್ದು.
 

815

2008ರಲ್ಲಿ ಕೇವಲ 12 ಲಕ್ಷ ರುಪಾಯಿಗೆ ಆರ್‌ಸಿಬಿ ಕೂಡಿಕೊಂಡಿದ್ದ ಕೊಹ್ಲಿ, ಇದಾದ ಬಳಿಕ 2011ರ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ರೀಟೈನ್ ಮಾಡಿಕೊಂಡ ಏಕೈಕ ಕ್ರಿಕೆಟಿಗ ಕೊಹ್ಲಿ ಎನಿಸಿಕೊಂಡರು. ಆಗ ಕೊಹ್ಲಿ ಮೌಲ್ಯ 8.3 ಕೋಟಿ ರುಪಾಯಿಗೆ ಏರಿಕೆ ಕಂಡಿತು.
 

915

ಇನ್ನು 2013ರಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಕೊಹ್ಲಿಗೆ ನಾಯಕ ಪಟ್ಟ ಕಟ್ಟಿ ಸಂಭಾವನೆಯನ್ನು 8.3 ಕೋಟಿಯಿಂದ 12.5 ಕೋಟಿ ರುಪಾಯಿಗೆ ಏರಿಸಿತು. ಇನ್ನು 2018ರಿಂದ 2021ರ ಅವಧಿಯಲ್ಲಿ ಕೊಹ್ಲಿ ವಾರ್ಷಿಕ 17 ಕೋಟಿ ರುಪಾಯಿ ಗಳಿಸಿದರು. ಆ ಬಳಿಕ 2022ರಿಂದ ಕೊಹ್ಲಿ ಪ್ರತಿ ಆವೃತ್ತಿಯಲ್ಲಿ 15 ಕೋಟಿ ರುಪಾಯಿ ಗಳಿಸುತ್ತಿದ್ದಾರೆ. 

1015
2. ಮಹೇಂದ್ರ ಸಿಂಗ್ ಧೋನಿ: 176 ಕೋಟಿ

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಅತ್ಯಂತ ಯಶಸ್ವಿ ಐಪಿಎಲ್ ತಂಡವಾಗಿ ಹೊರಹೊಮ್ಮಿದ್ದು, 4 ಬಾರಿ ಐಪಿಎಲ್ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಚೊಚ್ಚಲ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ಬರೋಬ್ಬರಿ 6 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಈ ಮೂಲಕ ಧೋನಿ ಐಪಿಎಲ್‌ನ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದರು.
 

1115

2010ರಲ್ಲಿ ಚೆನ್ನೈ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಹೀಗಾಗಿ 2011ರಲ್ಲಿ ಸಿಎಸ್‌ಕೆ ಫ್ರಾಂಚೈಸಿಯು ಧೋನಿಯನ್ನು ರೀಟೈನ್ ಮಾಡಿಕೊಂಡಿತು. ಇದರ ಜತೆಗೆ ಅವರ ಸಂಭಾವನೆಯನ್ನು 8.3 ಕೋಟಿ ರುಪಾಯಿಗೆ ಹೆಚ್ಚಿಸಿತು. ಇದಾದ ಬಳಿಕ 2014ರಿಂದ 2017ರ ವರೆಗೆ ಸಿಎಸ್‌ಕೆ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ ಪರ ಧೋನಿ 12.5 ಕೋಟಿ ರುಪಾಯಿ ಗಳಿಸಿಕೊಂಡರು.

1215

ಇನ್ನು 2018ರಿಂದ 2021ರ ವರೆಗೆ ಚೆನ್ನೈ ಸೂಪರ್ ಕಿಂಗ್ಸ್‌ ಪರ ಧೋನಿ 15 ಕೋಟಿ ರುಪಾಯಿ ಸಂಭಾವನೆ ಪಡೆದರೆ, 2022ರಿಂದ ಧೋನಿ 12 ಕೋಟಿ ರುಪಾಯಿ ಐಪಿಎಲ್‌ನಿಂದ ಸಂಪಾದನೆ ಮಾಡುತ್ತಿದ್ದು, ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ಸಂಭಾವನೆ ಪಡೆದ ಭಾರತೀಯ ಕ್ರಿಕೆಟಿಗರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.

1315
1. ರೋಹಿತ್ ಶರ್ಮಾ: 178 ಕೋಟಿ ರುಪಾಯಿ

ಐಪಿಎಲ್‌ ಇತಿಹಾಸದಲ್ಲಿ ನಾಯಕನಾಗಿ 5 ಹಾಗೂ ಒಟ್ಟಾರೆ 6 ಟ್ರೋಫಿ ಗೆದ್ದ ಏಕೈಕ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ಹೊಂದಿರುವ ರೋಹಿತ್ ಶರ್ಮಾ, ಸಹಜವಾಗಿಯೇ ಐಪಿಎಲ್‌ನಲ್ಲಿ ಅತಿಹೆಚ್ಚು ಸಂಪಾದನೆ ಮಾಡಿದ ಆಟಗಾರ ಕೂಡಾ ಹೌದು ಎನಿಸಿದ್ದಾರೆ.
 

1415

ರೋಹಿತ್ ಶರ್ಮಾ 2008ರಿಂದ 2010ರ ಅವಧಿಯಲ್ಲಿ ಡೆಕ್ಕನ್ ಚಾರ್ಜರ್ಸ್‌ ತಂಡದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಪ್ರತಿ ಆವೃತ್ತಿಯಲ್ಲಿ 3 ಕೋಟಿ ರುಪಾಯಿ ಸಂಭಾವನೆ ಪಡೆದರು. ಇನ್ನು 2011ರ ಮೆಗಾ ಹರಾಜಿನಲ್ಲಿ ರೋಹಿತ್ ಶರ್ಮಾ ಅವರಿಗೆ 9.2 ಕೋಟಿ ರುಪಾಯಿ ನೀಡಿ ಮುಂಬೈ ಇಂಡಿಯನ್ಸ್‌ ತಮ್ಮ ತೆಕ್ಕೆಗೆ ಸೆಳೆದುಕೊಂಡಿತು.

1515

2013ರಲ್ಲಿ ಮುಂಬೈ ಇಂಡಿಯನ್ಸ್‌ ನಾಯಕರಾಗಿ ನೇಮಕವಾದ ರೋಹಿತ್ ಶರ್ಮಾ ಅವರು ತಮ್ಮ ಸಂಭಾವನೆಯನ್ನು 12.5 ಕೋಟಿ ರುಪಾಯಿಗೆ ಹೆಚ್ಚಿಸಿಕೊಂಡರು. ಇನ್ನು ಐಪಿಎಲ್‌ನಲ್ಲಿ ಟ್ರೋಫಿ ಬೇಟೆಯಾಡಿದ ರೋಹಿತ್ ಶರ್ಮಾ, 2018ರಿಂದ ತಮ್ಮ ಸಂಭಾವನೆಯನ್ನು 15 ಕೋಟಿ ರುಪಾಯಿಗೆ ಹೆಚ್ಚಿಸಿಕೊಂಡರು. ಇನ್ನು 2022ರ ಐಪಿಎಲ್ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ 16 ಕೋಟಿ ರುಪಾಯಿ ಸಂಭಾವನೆ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

Read more Photos on
click me!

Recommended Stories