ಅಂತಾರಾಷ್ಟ್ರೀಯ T20 ಪಂದ್ಯದಲ್ಲಿ ಒಂದೇ ಒಂದು ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಗೆಲ್ಲದ ಟಾಪ್-5 ದಿಗ್ಗಜ ಕ್ರಿಕೆಟಿಗರಿವರು!

Published : Jul 03, 2026, 03:41 PM IST

ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಪಂದ್ಯದ ದಿಕ್ಕು ಬದಲಾಗಿ ಹೋಗುತ್ತೆ. ಆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ 'ಪ್ಲೇಯರ್ ಆಫ್‌ ದಿ ಮ್ಯಾಚ್' ಪ್ರಶಸ್ತಿ ಗೆಲ್ಲದ ಟಾಪ್ 5 ದಿಗ್ಗಜ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ. 

PREV
16
ಅಂತಾರಾಷ್ಟ್ರೀಯ ಟಿ20ಯಲ್ಲಿ ಒಂದೇ ಒಂದು ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಗೆಲ್ಲದ ದಿಗ್ಗಜರು

ಕ್ರಿಕೆಟ್‌ ಜಗತ್ತಿನಲ್ಲಿ ಹಲವಾರು ದಿಗ್ಗಜ ಕ್ರಿಕೆಟಿಗರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಳಿದ್ದಾರೆ. ಸಾಕಷ್ಟು ಟ್ರೋಫಿಗಳನ್ನು ಗೆದ್ದಿದ್ದಾರೆ. ಏಕಾಂಗಿಯಾಗಿ ತಮ್ಮ ದೇಶದ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಹೀಗಿದ್ದೂ ಕೆಲವು ದಿಗ್ಗಜ ಕ್ರಿಕೆಟಿಗರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಒಂದು ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಗೆದ್ದಿಲ್ಲ. ಈ ಪಟ್ಟಿಯಲ್ಲಿವೆ ಕೆಲವು ಅಚ್ಚರಿಯ ಹೆಸರು.

26
1. ಎಂ ಎಸ್ ಧೋನಿ:(ಭಾರತ)

ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ, ಕೂಲ್ ಕ್ಯಾಪ್ಟನ್ ಹಾಗೂ ಅಪಾಯಕಾರಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಭಾರತ ಪರ 98 ಟಿ20 ಪಂದ್ಯಗಳನ್ನಾಡಿರುವ ಧೋನಿ 1617 ರನ್ ಸಿಡಿಸಿದ್ದಾರೆ. ನಾಯಕನಾಗಿ, ಚಾಣಾಕ್ಷ ವಿಕೆಟ್ ಕೀಪರ್ ಆಗಿ ಹಾಗೂ ಮ್ಯಾಚ್ ಫಿನಿಶರ್ ಆಗಿ ಏಕಾಂಗಿಯಾಗಿಯೇ ಹಲವು ಬಾರಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇನ್ನು ಇದೆಲ್ಲದರ ಹೊರತಾಗಿ ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೇ, ಧೋನಿ ಒಮ್ಮೆಯೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಮ್ಮೆಯೂ ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಗೆದ್ದಿಲ್ಲ.

36
2. ರಮೇಶ್ ರಾಮ್ದಿನ್(ವೆಸ್ಟ್ ಇಂಡೀಸ್)

ವೆಸ್ಟ್‌ ಇಂಡೀಸ್ ತಂಡದ ದಿಗ್ಗಜ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ರಾಮ್ದಿನ್ 2006ರಿಂದ 2019ರವರೆಗೆ 71 ಬಾರಿ ಕೆರಿಬಿಯನ್ ತಂಡವನ್ನು ಪ್ರತಿನಿಧಿಸಿದ್ದಾರೆ. ರಾಮ್ದಿನ್ 2012 ಹಾಗೂ 2016ರಲ್ಲಿ ವೆಸ್ಟ್‌ ಇಂಡೀಸ್ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಎರಡು ಟಿ20 ವಿಶ್ವಕಪ್ ಗೆಲ್ಲುವುದು ಕಡಿಮೆ ಸಾಧನೆಯೇನಲ್ಲ. ಹೀಗಿದ್ದೂ ರಾಮ್ದಿನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಒಂದು ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಗೆದ್ದಿಲ್ಲ ಎನ್ನುವುದು ಅಚ್ಚರಿಯಾದ್ರೂ ಸತ್ಯ.

46
3. ಬೆನ್ ಸ್ಟೋಕ್ಸ್‌:(ಇಂಗ್ಲೆಂಡ್)

ಇಂಗ್ಲೆಂಡ್ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್ರೌಂಡರ್, ಬಿಗ್‌ ಮ್ಯಾಚ್ ಪ್ಲೇಯರ್ ಎಂದೇ ಗುರುತಿಸಿಕೊಂಡಿರುವ ಬೆನ್ ಸ್ಟೋಕ್ಸ್, 2019ರ ಏಕದಿನ ವಿಶ್ವಕಪ್ ಹಾಗೂ 2022ರ ಟಿ20 ವಿಶ್ವಕಪ್‌ನಲ್ಲಿ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಇಂಗ್ಲೆಂಡ್ ಪರ 43 ಟಿ20 ಪಂದ್ಯಗಳನ್ನಾಡಿ 585 ರನ್ ಹಾಗೂ 26 ವಿಕೆಟ್ ಕಬಳಿಸಿದ್ದರೂ ಸಹಾ ಒಂದೇ ಒಂದು ಮ್ಯಾನ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಗೆದ್ದಿಲ್ಲ.

56
4. ಅಸ್ಗರ್ ಅಫ್ಘಾನ್:(ಆಫ್ಘಾನಿಸ್ತಾನ)

ಆಫ್ಘಾನಿಸ್ತಾನ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರ ಪೈಕಿ ಅಸ್ಗರ್ ಅಫ್ಘಾನ್ ಕೂಡಾ ಒಬ್ಬರು. ಅಸ್ಗರ್ ಅಫ್ಘಾನ್ ನೇತೃತ್ವದಲ್ಲಿ ಆಫ್ಘಾನಿಸ್ತಾನ ಆಡಿದ 52 ಪಂದ್ಯಗಳ ಪೈಕಿ 42 ಪಂದ್ಯಗಳನ್ನು ಗೆದ್ದಿದೆ. ಇನ್ನು ಮಧ್ಯಮ ಕ್ರಮಾಂಕದ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಅಫ್ಘಾನ್ ಒಟ್ಟು 75 ಟಿ20 ಪಂದ್ಯಗಳನ್ನಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಸ್ಗರ್ ಒಂದೇ ಒಂದು ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಜಯಿಸಿಲ್ಲ.

66
5. ವಿಲಿಯಂ ಫೋರ್ಟ್‌ಫೀಲ್ಡ್:(ಐರ್ಲೆಂಡ್)

2008ರಿಂದ 2018ರ ತನಕ ಒಂದು ದಶಕಗಳ ಕಾಲ ಐರ್ಲೆಂಡ್‌ ತಂಡದ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದ ವಿಲಿಯಂ ಫೋರ್ಟ್‌ಫೀಲ್ಡ್ ಒಟ್ಟು 61 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ. ಇನ್ನು ನಾಯಕನಾಗಿಯೂ ಐರ್ಲೆಂಡ್ ತಂಡವನ್ನು ಮುನ್ನಡೆಸಿದ್ದರು. ಹೀಗಿದ್ದೂ ಒಮ್ಮೆಯೂ ಪ್ಲೇಯರ್ ಆಫ್‌ ದಿ ಮ್ಯಾಚ್ ಗೆದ್ದಿಲ್ಲ ಎನ್ನುವುದು ವಿಶೇಷ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories