ಮಹೇಂದ್ರ ಸಿಂಗ್ ಧೋನಿ. ಈ ಹೆಸರೇ ಒಂದು ಅದ್ಭುತ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿರುವ ಧೋನಿ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಒಂದು ಆಸಕ್ತಿಕರ ಲೇಖನ ನಿಮಗಾಗಿ.
ಧೋನಿ ಟೀಂ ಇಂಡಿಯಾ ಕ್ರಿಕೆಟಿಗನಾಗು ಮೊದಲು ಭಾರತೀಯ ರೈಲ್ವೇಯಲ್ಲಿ ಟ್ರೈನ್ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಧೋನಿ ಭಾರತದ ಮನೆ ಮಾತಾಗಿದ್ದಾರೆ.
27
ಕಾರುಗಳೆಂದರೆ ಪ್ರೀತಿ
ಮೈದಾನದಲ್ಲಿ ಹೆಲಿಕಾಪ್ಟರ್ ಶಾಟ್‌ಗಳಿಂದ ರಂಜಿಸುವ ಧೋನಿಗೆ ಕಾರು, ಬೈಕುಗಳೆಂದರೆ ಪಂಚಪ್ರಾಣ. ಇವುಗಳಿಗಾಗಿ ಪ್ರತ್ಯೇಕ ಗ್ಯಾರೇಜನ್ನೇ ನಿರ್ಮಿಸಿಕೊಂಡಿದ್ದಾರೆಂದರೆ ಧೋನಿಯವರ ಆಸಕ್ತಿ ಎಷ್ಟೆಂದು ಅರ್ಥ ಮಾಡಿಕೊಳ್ಳಬಹುದು.
ಅವರ ಬಳಿ ಸುಮಾರು 70ಕ್ಕೂ ಹೆಚ್ಚು ಬೈಕುಗಳು, 15 ಐಷಾರಾಮಿ ಕಾರುಗಳಿವೆ. ಇವುಗಳ ಒಟ್ಟು ಮೌಲ್ಯ 15 ಕೋಟಿ ರೂ.ಗಳಿಗೂ ಹೆಚ್ಚು. ಧೋನಿ ಸಂಗ್ರಹದಲ್ಲಿ ಸೂಪರ್ ಕಾರುಗಳಿಂದ ಹಿಡಿದು ಅಪರೂಪದ ಬೈಕುಗಳವರೆಗೆ ಎಲ್ಲವೂ ಇವೆ.
37
ಹಾರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್
ಅಮೇರಿಕನ್ ಕ್ಲಾಸಿಕ್ ಬೈಕ್ ಆದ ಫ್ಯಾಟ್ ಬಾಬ್, ಧೋನಿ ಅಚ್ಚುಮೆಚ್ಚಿನ ಬೈಕುಗಳಲ್ಲಿ ಒಂದು. ಬೆಲೆ ಸುಮಾರು 14 ಲಕ್ಷ ರೂ.