ಟೆಸ್ಟ್ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಬಾರಿಸಿದ ಜಗತ್ತಿನ ಟಾಪ್ 5 ಬ್ಯಾಟರ್‌ಗಳಿವರು!

Published : Jul 07, 2025, 03:32 PM IST

ಬೆಂಗಳೂರು: ಟೀಂ ಇಂಡಿಯಾ ಕ್ಯಾಪ್ಟನ್ ಶುಭ್‌ಮನ್ ಗಿಲ್, ಎಜ್‌ಬಾಸ್ಟನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದಾರೆ. ಇದರ ಜತೆಗೆ ಪಂದ್ಯವೊಂದರಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್-5 ಬ್ಯಾಟರ್‌ಗಳ ಸಾಲಿಗೆ ಸೇರಿದ್ದಾರೆ. 

PREV
16
ಟೆಸ್ಟ್ ಕ್ರಿಕೆಟ್ ರೆಕಾರ್ಡ್ಸ್

ಟೆಸ್ಟ್‌ ಪಂದ್ಯದಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 5 ಬ್ಯಾಟರ್ಸ್ ಯಾರು ನೋಡೋಣ ಬನ್ನಿ.

26
5. ಬ್ರಿಯನ್ ಲಾರಾ (400 ರನ್)

ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಬ್ರಿಯನ್ ಲಾರಾ 2004ರಲ್ಲಿ ಇಂಗ್ಲೆಂಡ್ ಎದುರು ಒಂದೇ ಇನ್ನಿಂಗ್ಸ್‌ನಲ್ಲಿ 400 ರನ್ ಸಿಡಿಸಿದ್ದರು. ಟೆಸ್ಟ್‌ ಇನ್ನಿಂಗ್ಸ್‌ವೊಂದರಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ರೆಕಾರ್ಡ್ ಇಂದಿಗೂ ಲಾರಾ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ.

36
4. ಕುಮಾರ ಸಂಗಕ್ಕರ (424 ರನ್)

ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕರ 2014ರಲ್ಲಿ ಬಾಂಗ್ಲಾದೇಶ ಎದುರು ಎರಡು ಇನ್ನಿಂಗ್ಸ್‌ಗಳಿಂದ ಒಂದು ತ್ರಿಶತಕ ಸೇರಿ 424 ರನ್ ಸಿಡಿಸಿದ್ದರು.

46
3. ಮಾರ್ಕ್ ಟೇಲರ್ (426 ರನ್)

ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಮಾರ್ಕ್ ಟೇಲರ್ 1998ರಲ್ಲಿ ಪಾಕಿಸ್ತಾನ ಎದುರು ಅಜೇಯ ತ್ರಿಶತಕ(334*) ಸೇರಿದಂತೆ ಒಟ್ಟು 426 ರನ್ ಸಿಡಿಸಿದ್ದರು.

56
2. ಶುಭ್‌ಮನ್ ಗಿಲ್: (430 ರನ್)

ಟೀಂ ಇಂಡಿಯಾ ಕ್ಯಾಪ್ಟನ್ ಗಿಲ್ 2025 ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಎದುರು ಮೊದಲ ಇನ್ನಿಂಗ್ಸ್‌ನಲ್ಲಿ 269 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್‌ಗಳ ನೆರವಿನಿಂದ 430 ರನ್ ಸಿಡಿಸಿ ಎರಡನೇ ಸ್ಥಾನಕ್ಕೇರಿದ್ದಾರೆ.

66
1. ಗ್ರಾಹಂ ಗೂಚ್ (456 ರನ್)

ಇಂಗ್ಲೆಂಡ್ ದಿಗ್ಗಜ ಕ್ರಿಕೆಟಿಗ ಗ್ರಾಹಂ ಗೂಚ್ ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಗೂಚ್ 1990ರಲ್ಲಿ ಭಾರತ ಎದುರು ಮೊದಲ ಇನ್ನಿಂಗ್ಸ್‌ನಲ್ಲಿ 333 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 123 ರನ್ ಸಹಿತ 456 ರನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

Read more Photos on
click me!

Recommended Stories