Devon Conway ಪ್ರೀ ವೆಡ್ಡಿಂಗ್ ಪಾರ್ಟಿ: ಟ್ರೆಡಿಷನಲ್‌ ಲುಕ್‌ನಲ್ಲಿ CSK ಆಟಗಾರರು ಶೈನಿಂಗ್..!

First Published | Apr 21, 2022, 9:44 PM IST

ಐಪಿಎಲ್ 2022 (IPL 2022) ರಲ್ಲಿ, ಎಲ್ಲಾ ತಂಡಗಳು ಟೇಬಲ್ ಪಾಯಿಂಟ್‌ಗಳ ಅಗ್ರಸ್ಥಾನವನ್ನು ತಲುಪಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿವೆ. ಮತ್ತೊಂದೆಡೆ ಮೈದಾನದ ಹೊರಗೆ ಆಟಗಾರರ ಮೋಜು ಮಸ್ತಿಯ  ಫೋಟೋಗಳು, ವಿಡಿಯೋಗಳೂ ಹೊರಬರುತ್ತಿವೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ (CSK) ಡೆವೊನ್ ಕಾನ್ವೆ (Devon Conway) ಪ್ರೀ ವೆಡ್ಡಿಂಗ್ ಪಾರ್ಟಿ ಅನ್ನು ಆಯೋಜಿಸಿದ್ದಾರೆ. CSK ತಂಡದ ಎಲ್ಲಾ ಆಟಗಾರರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಎಲ್ಲಾ ಆಟಗಾರರು ಚೆನ್ನೈನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ವಿಷಯ. 

ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಡೆವೊನ್ ಕಾನ್‌ವೇ ಮತ್ತು ಅವರು ತಮ್ಮ ಫಿಯಾನ್ಸಿ ಕಿನ್ ವ್ಯಾಟ್ಸನ್ ಅವರನ್ನು ಮದುವೆಯಾಗುವ ಮೊದಲು ಈ ಪಾರ್ಟಿಯನ್ನು ಆಯೋಜಿಸಿದ್ದಾರೆ.

ಈ ಫೋಟೋಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಬಿಳಿ ಅಂಗಿಯೊಂದಿಗೆ ಪಂಚೆ ಧರಿಸಿದ್ದಾರೆ. ಈ ವೇಳೆ ಪಾರ್ಟಿಯಲ್ಲಿದ್ದ ಸಹ ಆಟಗಾರರು ಮುಖಕ್ಕೆ ಕೇಕ್ ಹಚ್ಚಿದ್ದು ಕಂಡುಬಂದಿದೆ.

Tap to resize

ಮಹೇಂದ್ರ ಸಿಂಗ್ ಧೋನಿ, ಮಿಚೆಲ್  ಸ್ಯಾಂಟ್ನರ್, ಮೋಯಿನ್ ಅಲಿ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ರಾಜವರ್ಧನ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.

ಭಾರತೀಯ ಆಟಗಾರ ಶಿವಂ ದುಬೆ ಅವರೊಂದಿಗೆ ಡೆವೊನ್ ಕಾನ್ವೇ. ಶಿವಂ ದುಬೆ ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದೆಲ್ಲದರ ಹೊರತಾಗಿಯೂ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವು ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.

ಈ ಆಟಗಾರರು ಚೆನ್ನೈನ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರರು ಈ ಫೋಟೋಗೆ  ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಈ ಋತುವಿನಲ್ಲಿ ಚೆನ್ನೈನ ಪ್ರದರ್ಶನವು ಇಲ್ಲಿಯವರೆಗೆ ಉತ್ತಮವಾಗಿಲ್ಲ. ಈ ಋತುವಿನಲ್ಲಿ 6 ಪಂದ್ಯಗಳನ್ನು ಆಡಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಚೆನ್ನೈನ ಮುಂದಿನ ಪಂದ್ಯವು ಮುಂಬೈ ಇಂಡಿಯನ್ಸ್‌ನೊಂದಿಗೆ ಏಪ್ರಿಲ್ 21 ರಂದು ಅಂದರೆ ಇಂದು ನಡೆಯಲಿದೆ.

ಮಹೇಂದ್ರ ಸಿಂಗ್ ಧೋನಿ, ಮಿಚೆಲ್  ಸ್ಯಾಂಟ್ನರ್, ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ರಾಜವರ್ಧನ್ ಹಾಂಗ್ರೇಕರ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.

ಡೆವೊನ್ ಕಾನ್ವೇ ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಮೊಯಿನ್ ಅಲಿ ಅವರೊಂದಿಗೆ ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ. ಕೋಲ್ಕತ್ತಾ ವಿರುದ್ಧ ಕೇವಲ 3 ರನ್ ಗಳಿಸಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಡೆವೊನ್ ಕಾನ್ವೆ ಅವರ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಧೋನಿ ಹಳದಿ ಕುರ್ತಾದೊಂದಿಗೆ ಪಂಚೆ ಧರಿಸಿದ್ದರು.

Latest Videos

click me!