Athiya Shetty ಮಾತ್ರವಲ್ಲ, ಈ ನಟಿಯರ ಜೊತೆ KL Rahulಗೆ ಲಿಂಕ್‌?

Published : Apr 18, 2022, 05:21 PM IST

ಲಕ್ನೋ ಸೂಪರ್‌ಜೈಂಟ್ಸ್ (LSG) ನಾಯಕ ಕೆಎಲ್ ರಾಹುಲ್ (KL Rahul)  ಏಪ್ರಿಲ್ 18 ರಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 18 ಏಪ್ರಿಲ್ 1992 ರಂದು ಕರ್ನಾಟಕದ ಮಂಗಳೂರು ನಗರದಲ್ಲಿ ಜನಿಸಿದ ಈ ಆಟಗಾರನು ತನ್ನ ಆಟದ ಜೊತೆಗೆ ತನ್ನ ವೈಯಕ್ತಿಕ ಜೀವನದ ಕಾರಣದಿಂದಲೂ  ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಅಂದಹಾಗೆ, ಪ್ರಸ್ತುತ ಕೆಎಲ್ ರಾಹುಲ್ ಅವರ ಹೆಸರು ಬಾಲಿವುಡ್ ನಟಿ ಮತ್ತು ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿಯೊಂದಿಗೆ ಕೇಳಿ ಬರುತ್ತಿದೆ. ಆದರೆ ಅಥಿಯಾ ಅವರಿಂಗತಲೂ ಮೊದಲು ರಾಹುಲ್‌  ಹೆಸರು 4 ನಟಿಯರೊಂದಿಗೆ ಲಿಂಕ್‌ ಆಗಿತ್ತ್ತು.ಅವರಲ್ಲಿ ಒಬ್ಬರು ಅಥಿಯಾ ಅವರ ಫ್ರೆಂಡ್‌ ಕೂಡ ಆಗಿದ್ದಾರೆ. ಕೆಎಲ್ ರಾಹುಲ್ ಅವರ ರೂಮರ್ಡ್‌ ಗರ್ಲ್‌ಫ್ರೆಂಡ್ಸ್‌ ಯಾರಾರು ನೋಡೋಣ. 

PREV
15
Athiya Shetty ಮಾತ್ರವಲ್ಲ, ಈ ನಟಿಯರ ಜೊತೆ KL Rahulಗೆ ಲಿಂಕ್‌?

ಆಕಾಂಕ್ಷಾ ರಂಜನ್:

ಆಥಿಯಾ ಶೆಟ್ಟಿಗಿಂತ ಮೊದಲು, ಕೆಎಲ್ ರಾಹುಲ್ ಅವರ ಹೆಸರು ಬಾಲಿವುಡ್ ನಟಿ ಮತ್ತು ಆಥಿಯಾ ಶೆಟ್ಟಿ ಅವರ ಫ್ರೆಂಡ್‌  ಆಕಾಂಕ್ಷಾ ರಂಜನ್ ಅವರೊಂದಿಗೆ ಕೇಳಿಬಂದಿತ್ತು. ಅಥಿಯಾ ಮತ್ತು ಆಕಾಂಕ್ಷಾ ಇಬ್ಬರೂ ಕೆಎಲ್ ರಾಹುಲ್ ಅವರೊಂದಿಗೆ ಥಾಯ್ಲೆಂಡ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರ ಹಲವು ಚಿತ್ರಗಳು ವೈರಲ್ ಆಗಿವೆ.


 

25

ಸೋನಾಲ್ ಚೌಹಾಣ್:
ಜನ್ನತ್ ಚಿತ್ರದ ಮೂಲಕ ಗಮನ ಸೆಳೆದ ನಟಿ ಸೋನಾಲ್ ಚೌಹಾಣ್ ಅವರ ಹೆಸರೂ ಕೆಎಲ್ ರಾಹುಲ್ ಜೊತೆ ಸೇರಿಕೊಂಡಿದೆ. ಆದರೆ ಇಬ್ಬರೂ ಸಾರ್ವಜನಿಕರ ಮುಂದೆ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳಲಿಲ್ಲ.
 

35

ನಿಧಿ ಅಗರ್ವಾಲ್:

ಮುನ್ನಾ ಮೈಕೆಲ್‌ನ ನಟಿ ನಿಧಿ ಅಗರ್‌ವಾಲ್ ಜೊತೆಗೆ  ಕೂಡ ಕೆಎಲ್ ರಾಹುಲ್ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರೂ ಕೂಡ ಹಲವು ಬಾರಿ ಪರಸ್ಪರ ಜೊತೆಯಾಗಿ ಕಾಣಿಸಿಕೊಂಡರು. ಆದರೆ ಅವರಿಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ ಮತ್ತು ಯಾವಾಗಲೂ ನಾವು ಫ್ರೆಂಡ್ಸ್‌ ಎಂದು  ಹೇಳಿಕೊಂಡಿದ್ದರು.

45

ಸೋನಮ್ ಬಾಜ್ವಾ:
ಅಥಿಯಾ ಶೆಟ್ಟಿಯೊಂದಿಗೆ ಡೇಟಿಂಗ್ ಮಾಡುವ ಮೊದಲು, ಕೆಎಲ್ ರಾಹುಲ್ ಅವರ ಹೆಸರು ಪಂಜಾಬಿ ನಟಿ ಸೋನಂ ಬಾಜ್ವಾ ಅವರೊಂದಿಗೆ ಸಂಪರ್ಕಗೊಂಡಿತ್ತು ಮತ್ತು ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.
 

55

ಆಥಿಯಾ ಶೆಟ್ಟಿ:
ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಮತ್ತು ನಟಿಯಾದ ಆಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅನೇಕ ಬಾರಿ ಪರಸ್ಪರ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅವರು 2022 ರ ಐಪಿಎಲ್‌ನಲ್ಲಿ ರಾಹುಲ್‌ ಅವರನ್ನು  ಚಿಯರ್‌ ಮಾಡಲು ಕ್ರಿಕೆಟ್‌ ಮೈದಾನಕ್ಕೆ ಬಂದರು ಮತ್ತು ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಕೆಎಲ್ ರಾಹುಲ್ ಅವರ ಶತಕವನ್ನು ಸಹ ಅಥಿಯಾ ಸೆಲೆಬ್ರೆಟ್‌ ಅಮಡಿದ್ದರು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ.

 

click me!

Recommended Stories