ಭಾರತದಲ್ಲಿ ಅತ್ಯಂತ ದುಬಾರಿ ಬಂಗಲೆ ಹೊಂದಿರೋ ಕ್ರಿಕೆಟಿಗ; ಕೊಹ್ಲಿ, ಧೋನಿ, ತೆಂಡೂಲ್ಕರ್ ಅಲ್ಲ ಮತ್ಯಾರು?

First Published | Nov 19, 2023, 1:12 PM IST

ಭಾರತೀಯ ಕ್ರಿಕೆಟಿಗರು ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುವುದರ ಜೊತೆಗೆ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಸಹ ಹೊಂದಿದ್ದಾರೆ. ಆದರೆ, ಭಾರತದಲ್ಲಿ ಅತ್ಯಂತ ದುಬಾರಿ ಮನೆಯಲ್ಲಿ ವಾಸಿಸುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿ, ತೆಂಡೂಲ್ಕರ್ ಇವರು ಯಾರೂ ಅಲ್ಲ. ಮತ್ಯಾರು?

ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೇವಲ ಭಾರತೀಯ ಕ್ರಿಕೆಟ್‌ನ ದಂತಕಥೆಗಳಲ್ಲ. ದೇಶದ ಶ್ರೀಮಂತ ಕ್ರೀಡಾಪಟುಗಳೂ ಹೌದು. ಕ್ರಿಕೆಟ್‌ನಲ್ಲಿ ಅಚ್ಚಳಿಯದೆ ನೆನಪಿನಲ್ಲಿ ಉಳಿಯುವ ಸಾಧನೆ ಮಾಡಿರುವ ಜೊತೆಗೆ ಈ ಆಟಗಾರರು ಐಷಾರಾಮಿ ಬಂಗಲೆಗಳು, ಕಾರುಗಳು ಸೇರಿದಂತೆ ಹಲವು ಕೋಟ್ಯಾಂತರ ಆಸ್ತಿಗಳನ್ನು ಹೊಂದಿದ್ದಾರೆ. 

2023ರ ವಿಶ್ವಕಪ್‌ನ ಭಾರತದ ನಾಯಕ ರೋಹಿತ್ ಶರ್ಮಾ 30 ಕೋಟಿ ರೂಪಾಯಿಗಳ ಅಪಾರ್ಟ್‌ಮೆಂಟ್‌ನಲ್ಲಿ ಐಷಾರಾಮಿ 53 ಅಂತಸ್ತಿನ ಟವರ್‌ನ 29ನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅವರ ಬಾಲಿವುಡ್ ತಾರೆ ಪತ್ನಿ ಅನುಷ್ಕಾ ಶರ್ಮಾ ಗುರುಗ್ರಾಮ್‌ನಲ್ಲಿ 80 ಕೋಟಿ ರೂಪಾಯಿ ವಿಲ್ಲಾ ಹೊಂದಿದ್ದಾರೆ. 
 

Tap to resize

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮುಂಬೈನ ಬಾಂದ್ರಾದಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಡ್ರೀಮ್ ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ಹೀಗಿದ್ದೂ ಅತ್ಯಂತ ದುಬಾರಿ ಮನೆಯಲ್ಲಿ ವಾಸಿಸುವ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಇವರ ಪಾಲಿಗಿಲ್ಲ. ಬದಲಿಗೆ ಗುಜರಾತ್‌ನ ಮಹಿಳಾ ಕ್ರಿಕೆಟಿಗ ಮೃದುಲಾ ಜಡೇಜಾಗೆ ಸೇರಿದೆ. ಆಕೆಯ ನಿವಾಸ ರಾಜ್‌ಕೋಟ್‌ನಲ್ಲಿರುವ ರಂಜಿತ್ ವಿಲಾಸ್ ಅರಮನೆ. ಆದರೆ ಅವರು ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾಗೆ ಸಂಬಂಧಿಸಿಲ್ಲ.

ಮೃದುಲಾ ಕುಮಾರಿ ಜಡೇಜಾ ಅವರು 225 ಎಕರೆಗಳಷ್ಟು ವಿಸ್ತಾರವಾದ ಎಸ್ಟೇಟ್‌ನಲ್ಲಿ ನೆಲೆಗೊಂಡಿರುವ ಪ್ಯಾಲೇಸ್‌ನ ಮಾಲೀಕ ಮಾಂಧತಸಿನ್ಹ್ ಜಡೇಜಾ ಅವರ ಪುತ್ರಿ. ರಾಜ್‌ಕೋಟ್‌ನ ರಾಜಮನೆತನದ ಭಾಗವಾಗಿದ್ದಾರೆ. ಗೋಥಿಕ್ ಚಿತ್ರಣದಲ್ಲಿ ನಿರ್ಮಿಸಲಾದ ರಂಜಿತ್ ವಿಲಾಸ್ ಅರಮನೆಯು 6 ಎಕರೆ ಪ್ರದೇಶದಲ್ಲಿ 150 ಕೊಠಡಿಗಳನ್ನು ನಿರ್ಮಿಸಲಾಗಿದೆ. 

ಇದು ಹಲವಾರು ವಿಂಟೇಜ್ ಐಷಾರಾಮಿ ಕಾರುಗಳೊಂದಿಗೆ ಕಾಸ್ಟ್ಲೀ ಗ್ಯಾರೇಜ್ ಅನ್ನು ಸಹ ಹೊಂದಿದೆ. ಹಿಂದಿನ ರಾಜಮನೆತನದವರ ಖಾಸಗಿ ನಿವಾಸವಾಗಿ ಉಳಿದಿರುವ ಭಾರತದ ಕೆಲವೇ ಕೆಲವು ಅರಮನೆಗಳಲ್ಲಿ ಒಂದಾಗಿದೆ. ಇದನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲು ಬಿಟ್ಟುಕೊಡಲಾಗಿಲ್ಲ.

ಮೃದುಲಾ ಜಡೇಜಾ ತನ್ನ ಬೃಹತ್ ರಾಜಮನೆತನದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅರಮನೆಯು ಭಾರತದ ಅತ್ಯಂತ ದುಬಾರಿ ರಾಜಮನೆತನದ ವಿವಾಹವನ್ನು ಸಹ ಆಯೋಜಿಸಿತ್ತು.

ಮೃದುಳಾ ತಂದೆ ಉದ್ಯಮಿ. ಸೌರಾಷ್ಟ್ರ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿರುವ ಮೃದುಲಾ ಈ ಹಿಂದೆ ಕ್ರೀಡೆಯಲ್ಲಿ ವೇತನ ಸಮಾನತೆಯ ಬಗ್ಗೆ ಧ್ವನಿ ಎತ್ತಿದ್ದರು. ಗೌರವಾನ್ವಿತ ಪಂದ್ಯ ಶುಲ್ಕವು ಬಡ ಕುಟುಂಬಗಳ ಪ್ರತಿಭಾವಂತ ಹುಡುಗಿಯರಿಗೆ ಕ್ರಿಕೆಟ್ ಅನ್ನು ವೃತ್ತಿಯಾಗಿ ಪರಿಗಣಿಸಲು ಸಹಾಯ ಮಾಡುತ್ತದೆ ಎಂದು ವಾದಿಸಿದ್ದರು. 

ಮೃದುಲಾ ಸೌರಾಷ್ಟ್ರ ಮತ್ತು ಪಶ್ಚಿಮ ವಲಯದ ಪರ ಕ್ರಿಕೆಟ್ ಆಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 46 ಸೀಮಿತ ಓವರ್‌ಗಳು, 36 ಟಿ20ಗಳು ಮತ್ತು 1 ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದಾರೆ. 32 ವರ್ಷ ವಯಸ್ಸಿನ ಕ್ರಿಕೆಟರ್ ಬಲಗೈ ಬ್ಯಾಟರ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದಾರೆ. ಅವರು 2021 ರಲ್ಲಿ ಮಹಿಳಾ ಹಿರಿಯ ಏಕದಿನ ಟ್ರೋಫಿಯಲ್ಲಿ ನಾಲ್ಕು ಅರ್ಧ ಶತಕಗಳನ್ನು ಗಳಿಸಿದರು.

Latest Videos

click me!