ಆರ್‌ಸಿಬಿ ಮಾಜಿ ವೇಗಿ ಈಗ ಮಿನಿಸ್ಟರ್, ಪ್ರಮಾಣವಚನ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

Published : Jun 01, 2026, 05:09 PM IST

ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್‌ಸಿಬಿ ಪರವೂ ಆಡಿದ್ದಾರೆ. 

PREV
16
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಈಗ ಸಚಿವ

ರಾಯಲ್ ಚಾಲೆಂಜರ್ಸ್ ಬೆಂಗಳೂರು , ಕೆಕೆಆರ್, ಪುಣೆ ಸೂಪರ್‌ಜೈಂಟ್ಸ್ ಸೇರಿದಂತೆ ಪ್ರಮುಖ ಐಪಿಎಲ್ ತಂಡಗಳಲ್ಲಿ ಆಡಿದ ವೇಗಿ, ಟೀಂ ಇಂಡಿಯಾದಲ್ಲೂ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದಲ್ಲಿ ಸಚಿವನಾಗಿ ಪ್ರಮಾಣಚನ ಸ್ವೀಕರಿಸಿದ್ದಾರೆ. ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾದ ಮಾಜಿ ವೇಗಿ ಬೇರೆ ಯಾರು ಅಲ್ಲ, ಅಶೋಕ್ ದಿಂಡಾ.

26
ಅಶೋಕ್ ದಿಂಡಾಗೆ ಪ್ರತಿಜ್ಞಾವಿಧಿ ಬೋಧಿಸಿದ ರಾಜ್ಯಪಾಲರು

ಸುವೇಂದು ಅಧಿಕಾರಿ ಕ್ಯಾಬಿನೆಟ್ ವಿಸ್ತರಣೆಯಾಗಿದೆ. 35 ಶಾಸಕರು ಪ್ರಮಾಣವಚನ ಸ್ವೀಕರಿಸಿ ಸಚಿವರಾಗಿದ್ದಾರೆ. ಈ ಪೈಕಿ ಅಶೋಕ್ ದಿಂಡಾ ಕೂಡ ಸೇರಿದ್ದಾರೆ. ರಾಜ್ಯಪಾಲ ಆರ್‌ಎನ್ ರವಿ ಪ್ರತಿಜ್ಞಾವಿಧಿ ಭೋಧಿಸಿದ್ದಾರೆ. ಟೀಂ ಇಂಡಿಯಾ ಮಾಜಿ ವೇಗಿ ಎಂದು ಕರೆಯಿಸಿಕೊಳ್ಳುತ್ತಿದ್ದ ದಿಂಡಾ ಇದೀಗ ಬಂಗಾಳದ ಸಚಿವನಾಗಿ ಬಡ್ತಿ ಪಡೆದಿದ್ದಾರೆ.

36
ಜನನಾಯಕನಾದ ಅಶೋಕ್ ದಿಂಡಾ

ಟೀಂ ಇಂಡಿಯಾ ಹಾಗೂ ಐಪಿಎಲ್ ಟೂರ್ನಿಗೆ ವಿದಾಯ ಹೇಳಿದ ಬಳಿಕ ವೇಗಿ ಅಶೋಕ್ ದಿಂಡಾ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ಸೇರಿಕೊಂಡರು. ಈ ವೇಳೆ ಬಂಗಾಳದಲ್ಲಿ ಬಿಜೆಪಿ ಮೂರನೇ ಪಾರ್ಟಿಯಾಗಿತ್ತು. ಬೆದರಿಕೆ, ಬಿಜೆಪಿ ನಾಯಕರ ಮೇಲೆ ಸತತ ದಾಳಿಗಳ ನಡುವೆಯೂ ದಿಂಡಾ ಬಿಜೆಪಿಯಲ್ಲೇ ಉಳಿದಿಕೊಂಡು ಜನ ನಾಯಕನಾಗಿ ಬೆಳೆದರು.

46
ಮೊಯ್ನಾ ವಿಧಾನಸಭೆಯ ಶಾಸಕ

ಮೊಯ್ನಾ ವಿಧಾನಸಭ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ ಅಶೋಕ್ ದಿಂಡಾ ತೃಣಮೂಲ ಕಾಂಗ್ರೆಸ್ ನಾಯಕ ಚಂದನ್ ಮಂಡಲ್ ವಿರುದ್ದ 16,241 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ವಿಶೇಷ ಅಂದರೆ ದಿಂಡಾ ಸ್ಪರ್ಧಿಸಿದ ಎರಡು ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಅಶೋಕ್ ದಿಂಡಾ ಬಿಜೆಪಿ ಸೇರಿಕೊಂಡ ಕೆಲ ವರ್ಷಗ ಬಳಿಕ ಅಂದರೆ 2021ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲಿ ದಿಂಡಾ ಟಿಎಂಸಿಯ ಸಂಗ್ರಾಮ್ ದುಲೈ ವಿರುದ್ದ 1,260 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

56
ಐಪಿಎಲ್ ಕರಿಯರ್

ಅಶೋಕ್ ದಿಂಡಾ ಆರ್‌ಸಿಬಿ, ಪುಣೆ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪುಣೆ ಸೂಪರ್‌ಜೈಂಟ್ಸ್ ತಂಡ ಸೇರಿದಂತೆ ಒಟ್ಟು ಐದು ತಂಡ ಪ್ರತಿನಿಧಿಸಿದ್ದಾರೆ. ಈ ಪೈಕಿ ಪುಣೆ ವಾರಿಯರ್ಸ್ ತಂಡದ ಪರ ಬಲು ದುಬಾರಿಯಾಗಿದ್ದ ಅಶೋಕ್ ದಿಂಡಾ ಟೀಕೆಗೆ ಗುರಿಯಾಗಿದ್ದರು. 78 ಐಪಿಎಲ್ ಪಂದ್ಯದಿಂದ 69 ವಿಕೆಟ್ ಕಬಳಿಸಿದ್ದಾರೆ.

66
ಟೀಂ ಇಂಡಿಯಾ ಪರ ಆಡಿದ್ದ ಅಶೋಕ್ ದಿಂಡಾ

ಟೀಂ ಇಂಡಿಯಾ ಪರ 2009ರಲ್ಲಿ ಡೆಬ್ಯೂ ಮಾಡಿದ ಅಶೋಕ್ ದಿಂಡಾ 13 ಎಕದಿನ ಪಂದ್ಯ ಆಡಿದ್ದಾರೆ. ಏಕದಿನದಲ್ಲಿ 12 ವಿಕೆಟ್ ಹಾಗೂ 9 ಟಿ20 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದಾರೆ. ತಲೆಗೆ ಬ್ಯಾಂಡ್ ಹಾಕಿ ತಮ್ಮ ವಿಶೇಷ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಅಶೋಕ್ ದಿಂಡಾ ಇದೀಗ ಪಶ್ಚಿಮ ಬಂಗಾಳದ ಸಚಿವನಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories