ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಹೀಗಿದ್ದರೂ ತಾವು ಹೋರಾಟ ನಿಲ್ಲಿಸುವುದಿಲ್ಲ, ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡುತ್ತೇನೆ ಎಂದು ಗುಡುಗಿದ್ದಾರೆ.
ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಶಮಿ ಪದೇ ಪದೇ ಆಯ್ಕೆ ಸಮಿತಿಯಿಂದ ಕಡೆಗಣನೆಗೆ ಒಳಗಾಗುತ್ತಿದ್ದಾರೆ.
26
ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಮುಗಿಯಿತಾ
ಮೊಹಮ್ಮದ್ ಸಮಿ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಗಾಯದಿಂದ ಚೇತರಿಸಿಕೊಂಡು ಐಪಿಎಲ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ಮಿಂಚಿದರೂ ಶಮಿಗೆ ಟೀಂ ಇಂಡಿಯಾ ಬಾಗಿಲು ಇನ್ನೂ ಓಪನ್ ಆಗಿಲ್ಲ. ಇದರ ಬೆನ್ನಲ್ಲೇ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ
36
ಶಮಿ ನಿವೃತ್ತಿ ಕೊಡೋದು ಬೆಸ್ಟ್ ಎಂದ ಸೆಹ್ವಾಗ್
ಶಮಿಯನ್ನು ಆಯ್ಕೆ ಸಮಿತಿ ಕಡೆಗಣಿಸುವುದು ಈಗಂತೂ ಸಾಮಾನ್ಯವಾಗಿಬಿಟ್ಟಿದೆ. ಇದನ್ನು ನೋಡಿದರೆ ನನಗೆ ನಿಜಕ್ಕೂ ನೋವಾಗುತ್ತಿದೆ. ಭಾರತ ತಂಡದ ಪರ ಮಾತ್ರವಲ್ಲದೇ ದೇಶಿ ಕ್ರಿಕೆಟ್ನಲ್ಲೂ ಶಮಿ ಒಳ್ಳೆಯ ಲಯದಲ್ಲಿದ್ದಾರೆ. ಹೀಗಿದ್ದೂ ಸೆಲೆಕ್ಟರ್ಸ್ ಆತನನ್ನು ಪರಿಗಣಿಸಿಲ್ಲ. ಇದನ್ನೆಲ್ಲಾ ನೋಡಿದರೆ ಶಮಿ ಭಾರತ ಪರ ಆಡೋದು ಕಷ್ಟ. ಸುಮ್ಮನೆ ತಮ್ಮ ಬ್ಯಾಗ್ ಪ್ಯಾಕ್ ಮಾಡಿ ನಿವೃತ್ತಿ ಘೋಷಿಸುವುದು ಒಳ್ಳೆಯದು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಇದೆಲ್ಲದರ ನಡುವೆ ಮೊಹಮ್ಮದ್ ಶಮಿ ಈ ಕುರಿತಂತೆ ಮೌನ ಮುರಿದಿದ್ದು, ತಾವು 2027ರ ಏಕದಿನ ವಿಶ್ವಕಪ್ ಆಡುವ ಕನಸನ್ನು ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ. ನನ್ನ ಗುರಿ ಭಾರತ ತಂಡಕ್ಕೆ ಮತ್ತೊಮ್ಮೆ ಆಡುವುದಾಗಿದೆ. ನಾನು ಈ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಅನುಭವಿ ವೇಗಿ ಹೇಳಿದ್ದಾರೆ.
56
ಖಡಕ್ ಸಂದೇಶ ರವಾನಿಸಿದ ವೇಗಿ ಶಮಿ
ಪ್ರತಿಯೊಬ್ಬ ಆಟಗಾರರಿಗೂ ಒಂದು ಗುರಿಯಿರಬೇಕು. ನಾನೀಗ ಸದ್ಯ ಭಾರತ ತಂಡದಲ್ಲಿಲ್ಲ. ಈಗೇನಿದ್ದರೂ ನಾನು ದೇಶಿ ಕ್ರಿಕೆಟ್ ಆಡುವುದು, ಅಲ್ಲಿ ನನ್ನ ಸ್ಕಿಲ್ ಇನ್ನಷ್ಟು ಉತ್ತಮ ಮಾಡಿಕೊಳ್ಳುವುದಾಗಿದೆ. ಭವಿಷ್ಯದಲ್ಲಿ ಏನೇನು ಆಗಲಿದೆಯೋ ಗೊತ್ತಿಲ್ಲ. ಒಂದು ವೇಳೆ ನನಗೆ 2027ರ ಏಕದಿನ ವಿಶ್ವಕಪ್ ಆಡುವ ಅವಕಾಶ ಸಿಕ್ಕಿದರೆ, ಖಂಡಿತವಾಗಿಯೂ 100% ಕಪ್ ಗೆಲ್ಲಿಸಲು ನಾನು ಪ್ರಯತ್ನ ಮಾಡುತ್ತೇನೆ. ನನ್ನ ದೇಶಕ್ಕೆ ಕಪ್ ಗೆಲ್ಲಲು ನಾನು ಇನ್ನಷ್ಟು ಕಠಿಣ ಪರಿಶ್ರಮ ಪಡುತ್ತೇನೆ, ನಾನು ಹೋರಾಟ ಕೈಬಿಡುವುದಿಲ್ಲ. ಭಾರತಕ್ಕೆ ಕಮ್ಬ್ಯಾಕ್ ಮಾಡುತ್ತೇನೆ ಎಂದು ಸಂದೇಶ ರವಾನಿಸಿದ್ದಾರೆ.
66
ಶಮಿಗೆ ಅವಕಾಶ ನೀಡಬೇಕಾ?
ಮುಂಬರುವ ದಿನಗಳಲ್ಲಾದರೂ ಮೊಹಮ್ಮದ್ ಶಮಿಗೆ ಟೀಂ ಇಂಡಿಯಾ ಅವಕಾಶ ಸಿಗಬೇಕೇ? ಅಥವಾ ಯುವ ವೇಗಿಗಳಿಗೆ ಅವಕಾಶ ನೀಡಬೇಕೇ ಎನ್ನುವುದನ್ನು ಕಮೆಂಟ್ ಮಾಡುವ ಮೂಲಕ ತಿಳಿಸಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.