ಬೆಂಗಳೂರು: ಅಜಿತ್ ಅಗರ್ಕರ್ ಅವರಿಂದ ತೆರವಾದ ಬಿಸಿಸಿಐ ಚೀಫ್ ಸೆಲೆಕ್ಟರ್ ಸ್ಥಾನಕ್ಕೆ ಹೊಸದಾಗಿ ಪ್ರಗ್ಯಾನ್ ಓಜಾ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿದ್ದ ಐದು ಆಟಗಾರರಿಗೆ ಇದೀಗ ನಡುಕ ಶುರುವಾಗಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಭಾರತ ಕ್ರಿಕೆಟ್ನ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಇದೀಗ ಟೀಂ ಇಂಡಿಯಾ ಸ್ಟಾರ್ ಆಟಗಾರರ ಭವಿಷ್ಯ ನಿರ್ಧರಿಸಲು ರೆಡಿಯಾಗಿದ್ದಾರೆ. ಅಜಿತ್ ಅಗರ್ಕರ್ ಯಾವೆಲ್ಲಾ ಆಟಗಾರರನ್ನು ಬ್ಯಾಕ್ಅಪ್ ಮಾಡಿದ್ದರೋ, ಅವರ ಪೈಕಿ ಕೆಲ ಆಟಗಾರರಿಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಇದೀಗ ಓಜಾ ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ಈ ಐದು ಭಾರತೀಯ ಆಟಗಾರರಿಗೆ ನಡುಕ ಶುರುವಾಗಿದೆ. ಈ ಲಿಸ್ಟ್ನಲ್ಲಿ ಅಚ್ಚರಿಯ ಹೆಸರುಗಳು ಇವೆ.
26
1. ರವೀಂದ್ರ ಜಡೇಜಾ:
ಟೀಂ ಇಂಡಿಯಾ ದಿಗ್ಗಜ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಇದೀಗ ಓಜಾ ತಾವು ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ಏಕದಿನ ತಂಡದಿಂದ ಗೇಟ್ಪಾಸ್ ನೀಡಿದ್ದಾರೆ. ಜಡ್ಡು ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ ಓಜಾ ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ಕಿವೀಸ್ ಎದುರಿನ ಏಕದಿನ ಸರಣಿಯಿಂದ ಜಡೇಜಾ ಅವರನ್ನು ಹೊರಗಿಡಲಾಗಿದೆ. ಹೀಗಾಗಿ ಜಡ್ಡು 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
36
2. ವಾಷಿಂಗ್ಟನ್ ಸುಂದರ್;
ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ಗೆ ಮಾಜಿ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೆಚ್ಚು ಹೆಚ್ಚು ಅವಕಾಶ ನೀಡುತ್ತಾ ಬಂದಿದ್ದರು. ಸುಂದರ್ ಮೂರು ಮಾದರಿಯಲ್ಲೂ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಓಜಾ ಇದೀಗ ಸುಂದರ್ಗೆ ಸೀಮಿತ ಓವರ್ಗಳ ತಂಡದಿಂದ ಗೇಟ್ಪಾಸ್ ನೀಡಿದ್ದಾರೆ. ಸುಂದರ್ ಬದಲಿಗೆ ಇದೀಗ ಓಜಾ ಕಿವೀಸ್ ಎದುರಿನ ಟಿ20 ಹಾಗೂ ಏಕದಿನ ಸರಣಿಯಲ್ಲಿ ನಮನ್ ಧೀರ್ಗೆ ಅವಕಾಶ ನೀಡಿದ್ದಾರೆ. ಸುಂದರ್ ಕೂಡಾ ಟೆಸ್ಟ್ಗೆ ಸೀಮಿತವಾಗುವ ಸಾಧ್ಯತೆಯಿದೆ.
ಟೀಂ ಇಂಡಿಯಾ ಟೆಸ್ಟ್ ಆರಂಭಿಕನಾಗಿ ಯಶಸ್ಸು ಗಳಿಸಿರುವ ಯಶಸ್ವಿ ಜೈಸ್ವಾಲ್, 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಬ್ಯಾಕ್ಅಪ್ ಓಪನ್ನರ್ ಆಗಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಓಜಾ ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಓಜಾ ನೇತೃತ್ವದ ಟೀಮ್ ಮ್ಯಾನೇಜ್ಮೆಂಟ್ ಇದೀಗ ಜೈಸ್ವಾಲ್ ಬದಲಿಗೆ ಏಕದಿನ ಕ್ರಿಕೆಟ್ನಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು ಬ್ಯಾಕ್ಅಪ್ ಓಪನ್ನರ್ ಮಾಡುವ ಲಕ್ಷಣಗಳು ಕಾಣಿಸುತ್ತಿವೆ.
56
4. ಸೂರ್ಯಾನ್ಶ್ ಶೆಡ್ಗೆ:
ವೇಗದ ಬೌಲಿಂಗ್ ಆಲ್ರೌಂಡರ್ ಸೂರ್ಯಾನ್ಶ್ ಶೆಡ್ಗೆ ಭಾರತ ಸೀಮಿತ ಓವರ್ಗಳ ತಂಡದಲ್ಲಿ ಬ್ಯಾಕ್ಅಪ್ ಆಲ್ರೌಂಡರ್ ರೂಪದಲ್ಲಿ ಸ್ಥಾನ ಪಡೆಯುತ್ತಾ ಬಂದಿದ್ದರು. ಈಗ ಓಜಾ ಚೀಫ್ ಸೆಲೆಕ್ಟರ್ ಆದ ಬೆನ್ನಲ್ಲೇ ಶೆಡ್ಗೆಗೆ ಗೇಟ್ಪಾಸ್ ನೀಡಿ ಮೂರು ಮಾದರಿಯಲ್ಲೂ ಮತ್ತೋರ್ವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಶೆಡ್ಗೆ ಟೀಂ ಇಂಡಿಯಾಗೆ ಮತ್ತೆ ಕಮ್ಬ್ಯಾಕ್ ಮಾಡಬೇಕಿದ್ದರೇ, ದೇಶಿ ಕ್ರಿಕೆಟ್ನಲ್ಲಿ ಅಸಾಧಾರಣ ಪ್ರದರ್ಶನ ತೋರಬೇಕಿದೆ.
66
5. ಸಾರಾನ್ಶ್ ಜೈನ್:
ಆಫ್ಸ್ಪಿನ್ ಆಲ್ರೌಂಡರ್ ಸಾರಾನ್ಶ್ ಜೈನ್ ಅವರಿಗೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಸ್ಥಾನ ನೀಡಿತ್ತು. ಇದೀಗ ಓಜಾ ನೇತೃತ್ವದಲ್ಲಿ ಕಿವೀಸ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಆಯ್ಕೆ ಮಾಡುವಾಗ ಸಾರಾನ್ಶ್ ಜೈನ್ ಹೆಸರು ನಾಪತ್ತೆಯಾಗಿದೆ. ಜೈನ್ ಮತ್ತೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡುವ ಸಾಧ್ಯತೆ ಕಷ್ಟವಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.