ಐಪಿಎಲ್‌ಗೆ ಕಾದು ಕುಳಿತ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್, ಗೋವಾದಲ್ಲಿ ಈ ಬಾರಿ ಹರಾಜು,ಯಾವ ದಿನ?

Published : Oct 17, 2026, 09:18 PM IST

ಐಪಿಎಲ್ ಟೂರ್ನಿಗಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಬಿಸಿಸಿಐನಿಂದ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಈ ಬಾರಿಯ ಹರಾಜು ಪ್ರಕ್ರಿಯೆ ಗೋವಾದಲ್ಲಿ ನಡೆಯಲಿದೆ. ಯಾವ ದಿನಾಂಕ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

PREV
15
ಐಪಿಎಲ್ 2027 ಆಕ್ಷನ್

ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಆರಂಭಗೊಂಡ ಕೆಲ ತಿಂಗಳೇ ಉರುಳಿದೆ. ಆಟಗಾರರ ಟ್ರಯಲ್ಸ್, ಸಿಬ್ಬಂದಿಗಳ ಆಯ್ಕೆ, ಆಟಗಾರರ ರಿಟೇನ್ ಹಾಗೂ ರಿಲೀಸ್ ಪಟ್ಟಿ ತಯಾರಿ ಸೇರಿದಂತೆ ಹಲವು ತಯಾರಿ ನಡೆಯುತ್ತಿದೆ. ಇದೀಗ ಐಪಿಎಲ್ ಹರಾಜು ಕುರಿತು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಈ ಬಾರಿ ಐಪಿಎಲ್ ಆಕ್ಷನ್ ಗೋವಾದಲ್ಲಿ ನಡೆಯಲಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಈ ಕುರಿತು ಬಿಸಿಸಿಐ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಬಿಸಿಸಿಐ ಮೂಲಗಳ ಪ್ರಕಾರ ಹರಾಜು ದಿನಾಂಕ ಹಾಗೂ ಸ್ಥಳ ಫಿಕ್ಸ್ ಮಾಡಲಾಗಿದೆ.

25
ಗೋವಾದಲ್ಲಿ ಹರಾಜು, ದಿನಾಂಕ ಯಾವಾಗ?

ವರದಿಗಳ ಪ್ರಕಾರ ಈ ಬಾರಿ ಐಪಿಎಲ್ ಆಕ್ಷನ್ ಗೋವಾದ ಐಟಿಸಿ ಹೊಟೆಲ್‌ನಲ್ಲಿ ನಡೆಯಲಿದೆ. ಡಿಸೆಂಬರ್ 16ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 15ರಂದು ಆಕ್ಷನ್ ಬ್ರೀಫಿಂಗ್ ನಡೆಯಲಿದೆ. ಈ ಕುರಿತು ಬಿಸಿಸಿಐ ಲಾಜಿಸ್ಟಿಕ್ ತಂಡ ಸಂದೇಶವನ್ನು ನೀಡಿದೆ ಎಂದು ವರದಿಯಾಗಿದೆ. ಬಿಸಿಸಿಐ ಫ್ರಾಂಚೈಸಿ ಮಾಲೀಕರಿಗೆ, ಪದಾಧಿಕಾರಿಗಳಿಗೆ ಇನ್ನಷ್ಟೇ ಅಧಿಕೃತ ಸಂದೇಶ ಕಳುಹಿಸಬೇಕಿದೆ.

35
ಗೋವಾ ಪ್ರಯಾಣಕ್ಕೆ ತಯಾರಿ

ಬಿಸಿಸಿಐನಿಂದ ಗೋವಾದಲ್ಲಿ ಹರಾಜು ಹಾಗೂ ಡಿಸೆಂಬರ್ 16ರ ದಿನಾಂಕ ಕುರಿತು ಈಗಾಗಲೇ ಫ್ರಾಂಚೈಸಿಗಳಿಗೆ ಸೂಚನೆಗಳು ಬಂದಿರುವ ಕುರಿತು ವರದಿಯಾಗಿದೆ. ಫ್ರಾಂಚೈಸಿಗಳ ಸಿಬ್ಬಂದಿಗಳು,ಪ್ರತಿನಿಧಿಗಳು, ಐಪಿಎಲ್ ಗರ್ವನಿಂಗ್ ಕೌನ್ಸಿಲ್, ಸಿಬ್ಬಂದಿಗಳು ಗೋವಾ ಪ್ರಯಾಣಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಲಾಜಿಸ್ಟಿಕ್ ತಂಡದಿಂದ ಅಧಿಕೃತ ದಿನಾಂಕ ಹಾಗೂ ಸ್ಥಳ ಘೋಷಣೆಗೂ ಮುನ್ನವೇ ಮಾಹಿತಿ ನೀಡಲಾಗಿದೆ.

45
ಒಂದೆಡೆ ಆಕ್ಷನ್ ಮತ್ತೊಂಡೆದೆ ಎಕದಿನ ಪಂದ್ಯ

ವಿಶೇಷ ಅಂದರೆ ಅಕ್ಟೋಬರ್ 16ರಂದು ಐಪಿಎಲ್ ಹರಾಜು ಗೋವಾದಲ್ಲಿ ನಡೆದರೆ, ಅದೇ ದಿನ ಬೆಂಗಳೂರಿನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಪಂದ್ಯ ಆಯೋಜನೆಗೊಂಡಿದೆ. ಹೀಗಾಗಿ ಒಂದೇ ದಿನ ಎರಡು ಮೆಗಾ ಈವೆಂಟ್ ನಡೆಸುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಡಿಸೆಂಬರ್ 16ರ ದಿನಾಂಕ ಬದಲು ಡಿಸೆಂಬರ್ 16ರ ಆಸುಪಾಸಿನ ದಿನಾಂಕಕ್ಕೆ ಹರಾಜು ಪ್ರಕ್ರಿಯೆ ಬದಲಿಸುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.

55
ಆರ್‌ಸಿಬಿ ಮೇಲೆ ಎಲ್ಲರ ಚಿತ್ತ

10 ತಂಡಗಳಲ್ಲಿ ಈಗಾಗಲೇ ಹಲವು ಬದಲಾವಣೆಗಳು ಆಗಿದೆ. ಯಾರನ್ನು ತಂಡದಿಂದ ಕೈಬಿಡಲಾಗಿದೆ, ಯಾರು ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ ಅನ್ನೋ ಪಟ್ಟಿಯನ್ನು ಫ್ರಾಂಚೈಸಿಗಳು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ. ಇತ್ತ ಆರ್‌ಸಿಬಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸತತ 2 ವರ್ಷ ಟ್ರೋಫಿ ಗೆದ್ದ ಆರ್‌ಸಿಬಿ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದೆ. ಹೀಗಾಗಿ ಆರ್‌ಸಿಬಿ ಆಟಗಾರರ ರಿಟೇನ್ ಹಾಗೂ ರಿಲೀಸ್ ಪಟ್ಟಿ ಮೇಲೆ ಎಲ್ಲರು ಕಣ್ಣಿಟ್ಟಿದ್ದಾರೆ. ಆರ್‌ಸಿಬಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮುಂದಾಗಿದೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಸಲು ಮುಂದಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories