ಬೆಂಗಳೂರು: ಆಸ್ಟ್ರೇಲಿಯಾ ಎದುರಿನ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಈಗಾಗಲೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಇನ್ನು ಏಕದಿನ ಸರಣಿಗೆ ಆಯ್ಕೆಯಾಗದ ಶಮಿ, ಇದೀಗ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್‌ಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ್ದಾರೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ, ಇದಾದ ಬಳಿಕ ಏಷ್ಯಾಕಪ್ ಟೂರ್ನಿ, ಈಗ ಆಸ್ಟ್ರೇಲಿಯಾ ಪ್ರವಾಸ. ಈ ಮೂರು ಸರಣಿಯಲ್ಲೂ ಅನುಭವಿ ವೇಗಿ ಮೊಹಮ್ಮದ್ ಶಮಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು.
27
ಮೊಹಮ್ಮದ್ ಶಮಿ ಕಡೆಗಣನೆ
2023ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪರ ಅದ್ಭುತ ಪ್ರದರ್ಶನ ತೋರುವ ಮೂಲಕ ಮಿಂಚಿದ್ದ ಮೊಹಮ್ಮದ್ ಶಮಿ, ಇತ್ತೀಚೆಗೆ ಟೀಂ ಇಂಡಿಯಾ ಆಯ್ಕೆ ಸಮಿತಿ ಕಡೆಗಣಿಸುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
37
ಶಮಿ ಆಯ್ಕೆಯಾಗದ್ದರ ಬಗ್ಗೆ ಪ್ರಶ್ನೆ
ಇನ್ನು ಆಸ್ಟ್ರೇಲಿಯಾ ಎದುರಿನ ಸರಣಿಗೆ ಭಾರತ ತಂಡವನ್ನು ಘೋಷಿಸಿದ ಬಳಿಕ, ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಪತ್ರಕರ್ತರು, ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರನ್ನು ಪ್ರಶ್ನಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಗರ್ಕರ್, ಶಮಿ ಫಿಟ್ನೆಸ್ ಕುರಿತಂತೆ ನಮಗೆ ಯಾವುದೇ ಅಪ್‌ಡೇಟ್ ಇಲ್ಲ ಎಂದಿದ್ದರು. ಅವರು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕಿದ್ದರೇ ಕ್ರಿಕೆಟ್ ಆಡಬೇಕಾಗುತ್ತದೆ ಎಂದಿದ್ದರು.
57
ಅಗರ್ಕರ್‌ಗೆ ಶಮಿ ತಿರುಗೇಟು
ಇದೀಗ ಅಜಿತ್ ಅಗರ್ಕರ್ ಮಾತಿಗೆ ಶಮಿ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ, ಐಪಿಎಲ್ 2025 ಹಾಗೂ ದುಲೀಪ್ ಟ್ರೋಫಿ ಆಡಿದ್ದೇನೆ. ಯಾವೆಲ್ಲಾ ಮ್ಯಾಚ್ ನಡೆದಿದೆಯೋ ಆ ಮ್ಯಾಚ್‌ಗಳನ್ನು ಆಡಿದ್ದೇನೆ.
67
ಪ್ರಾಕ್ಟೀಸ್ ಮಾಡುತ್ತಿದ್ದೇನೆ
ಇದರ ಜತೆಗೆ ನಾನು ಪ್ರಾಕ್ಟೀಸ್ ಕೂಡಾ ಮಾಡುತ್ತಿದ್ದೇನೆ. ಇದರರ್ಥ ನಾನು ಔಟ್ ಆಫ್ ಟಚ್‌ನಲ್ಲಿಲ್ಲ. ಮ್ಯಾಚ್ ಆಡಲು ಅವಕಾಶ ಸಿಕ್ಕಿದರಷ್ಟೇ ಆಡಬಹುದಲ್ಲ ಎಂದು ಶಮಿ ಹೇಳಿದ್ದಾರೆ.
77
ಶಮಿ ವ್ಯಂಗ್ಯ
ನಾನು ನಾಲ್ಕು ದಿನಗಳ ರಣಜಿ ಮ್ಯಾಚ್ ಆಡಲು ಫಿಟ್ ಇದ್ದೇನೆ ಎಂದಾದರೇ 50 ಓವರ್ ಪಂದ್ಯವಾಡಲು ಸಹ ಫಿಟ್ ಇದ್ದೇನೆ ಎಂದರ್ಥ. ನನ್ನ ಫಿಟ್ನೆಸ್ ಬಗ್ಗೆ ಆಯ್ಕೆ ಸಮಿತಿಗೆ ಯಾರು ಮಾಹಿತಿ ನೀಡುತ್ತಿದ್ದಾರೋ ಗೊತ್ತಿಲ್ಲ ಎಂದು ಶಮಿ ವ್ಯಂಗ್ಯವಾಡಿದ್ದಾರೆ.