ಇವರೇ ನೋಡಿ ವಿಶ್ವ ನಂ.1 ಒನ್‌ಡೇ ಬೌಲರ್ ಕೇಶವ್ ಮಹರಾಜ್ ಮುದ್ದಾದ ಪತ್ನಿ..!

Published : Dec 07, 2023, 02:06 PM IST

ದುಬೈ: ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್ ಮಹರಾಜ್ ಇದೀಗ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿ ಭದ್ರವಾಗಿ ಕುಳಿತಿದ್ದಾರೆ. ನಾವಿಂದು ಕೇಶವ್ ಮಹರಾಜ್ ಅವರ ಪರ್ಸನಲ್ ಲೈಫ್, ಅವರ ಪತ್ನಿಯ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಯನ್ನು ನೋಡೋಣ ಬನ್ನಿ.  

PREV
19
ಇವರೇ ನೋಡಿ ವಿಶ್ವ ನಂ.1 ಒನ್‌ಡೇ ಬೌಲರ್ ಕೇಶವ್ ಮಹರಾಜ್ ಮುದ್ದಾದ ಪತ್ನಿ..!

ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹರಾಜ್ ಇದೀಗ ನೂತನವಾಗಿ ಪ್ರಕಟಗೊಂಡ ಐಸಿಸಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೇಶವ್ ಮಹರಾಜ್ ತಮ್ಮ ಪತ್ನಿ ಲೆರಿಶಾ ಮುನ್‌ಸಾಮಿ ಅವರೊಂದಿಗೆ ಸುಂದರ ಸಂಸಾರವನ್ನು ನಡೆಸುತ್ತಿದ್ದಾರೆ
 

29

ಕೇಶವ್ ಮಹರಾಜ್ ಹಾಗೂ ಲೆರಿಶಾ ಮುನ್‌ಸಾಮಿ ಇಬ್ಬರಿಗೂ ಕ್ರಿಕೆಟ್ ಹಾಗೂ ಭಾರತೀಯ ಸಂಸ್ಕೃತಿಯ ಕುರಿತಾಗಿ ಒಲವು ಹಾಗೂ ಅಭಿಮಾನವಿದೆ. ಸಮಯ ಸಿಕ್ಕಾಗಲ್ಲೆಲ್ಲಾ ಈ ಜೋಡಿ ಅದನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ.

39

ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್ ಮಹರಾಜ್ ಹಾಗೂ ಲೆರಿಶಾ ಮುನ್‌ಸಾಮಿ ಕಳೆದ ವರ್ಷ ಅಂದರೆ 2022ರ ಏಪ್ರಿಲ್‌ನಲ್ಲಿ ಭಾರತೀಯ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 

49

ಲೆರಿಶಾ ಓರ್ವ ಪ್ರತಿಭಾನ್ವಿತ ಕಥಕ್ ಡ್ಯಾನ್ಸರ್ ಆಗಿದ್ದಾರೆ. ಲೆರಿಸಾ ಮೂಲ ಕೂಡಾ ಭಾರತದ್ದೇ ಆಗಿದೆ. ಸದಾ ತಮ್ಮ ಪತಿ ಕೇಶವ್ ಮಹರಾಜ್ ಅವರನ್ನು ಬೆಂಬಲಿಸುತ್ತಾ ಬಂದಿರುವ ಲೆರಿಶಾ ಆಗಾಗ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ.

59

ಸಾಕಷ್ಟು ವರ್ಷಗಳಿಂದ ಈ ಜೋಡಿ ಡೇಟಿಂಗ್ ನಡೆಸುತ್ತಾ ಬಂದಿದ್ದರೂ ಸಹಾ, ಎಲ್ಲೂ ಈ ವಿಚಾರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ. ಅಷ್ಟು ಗುಟ್ಟಾಗಿ ಈ ಜೋಡಿ ಡೇಟಿಂಗ್ ನಡೆಸಿದ್ದರು.

69

ಕಾಮನ್‌ಫ್ರೆಂಡ್ ಮೂಲಕ ಕೇಶವ್ ಮಹರಾಜ್ ಹಾಗೂ ಲೆರಿಶಾ ಮುನ್‌ಸಾಮಿ ಮೊದಲಿಗೆ ಭೇಟಿಯಾಗಿದ್ದರು. ಮೊದಲ ನೋಟದಲ್ಲೇ ಈ ಜೋಡಿಗೆ ಪ್ರೇಮಾಂಕುರವಾಗಿತ್ತು. ಹಲವು ವರ್ಷಗಳ ಡೇಟಿಂಗ್ ಬಳಿಕ ಇದೀಗ ಸುಖ ಸಂಸಾರ ನಡೆಸುತ್ತಿದ್ದಾರೆ.

79

ವಿವಾಹ ವಿಚ್ಛೇದನ ಹಿನ್ನೆಲೆಯಿದ್ದಿದ್ದು, ಈ ಜೋಡಿಯ ವಿವಾಹಕ್ಕೆ ಕೊಂಚ ಅಡ್ಡಿಯಾಗಿತ್ತು. ಆದರೆ ಲೆರಿಶಾ ಅವರ ಕಥಕ್ ಸ್ಕಿಲ್‌ , ಕೇಶವ್ ಮಹರಾಜ್ ಪೋಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

89

ಕಥಕ್ ಡ್ಯಾನ್ಸರ್ ಲೆರಿಶಾ ಮುನ್‌ಸಾಮಿ ಅವರ ಪೂರ್ವಜರು ತಮಿಳುನಾಡಿನವರಾದರೆ, ಕೇಶವ್ ಮಹರಾಜ್ ಅವರ ಪೂರ್ವಜರು ಉತ್ತರ ಪ್ರದೇಶ ಮೂಲದವರಾಗಿದ್ದಾರೆ.

99

ಕೇಶವ್ ಮಹರಾಜ್ ಅವರ ಪತ್ನಿ ಲೆರಿಶಾ ಮುನ್‌ಸಾಮಿ ಬಾಲಿವುಡ್‌ನ ದೊಡ್ಡ ಅಭಿಮಾನಿ. ಬಾಲಿವುಡ್ ಹಾಡು ಕೇಳುವುದು, ಹಿಂದಿ ಸಿನೆಮಾಗಳನ್ನು ನೋಡುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ.

click me!

Recommended Stories