ಇವರೇ ನೋಡಿ ಲಂಕಾ ದಿಗ್ಗಜ ಕ್ರಿಕೆಟಿಗನ ಬ್ಯೂಟಿಫುಲ್ ಪತ್ನಿ..! ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್

First Published Aug 15, 2023, 5:27 PM IST

ಬೆಂಗಳೂರು: ಶ್ರೀಲಂಕಾ ಕ್ರಿಕೆಟ್ ದಂತಕಥೆ ಲಸಿತ್ ಮಾಲಿಂಗ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಮಾಲಿಂಗ ಅವರ ಪತ್ನಿಯ ಬಗ್ಗೆ ಬಹುತೇಕ ಮಂದಿಗೆ ಗೊತ್ತಿಲ್ಲ. ಲಸಿತ್ ಮಾಲಿಂಗ ಅವರ ಪತ್ನಿ ಯಾರು? ಅವರ ಹಿನ್ನೆಲೆ ಏನು? ಮೊದಲು ಭೇಟಿಯಾಗಿದ್ದು ಎಲ್ಲಿ ಎನ್ನುವುದರ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ ನೋಡಿ.
 

ಲಸಿತ್ ಮಾಲಿಂಗ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ?. ಶ್ರೀಲಂಕಾ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಮಾರಕ ವೇಗದ ಬೌಲಿಂಗ್ ತಾರೆ ಮಾಲಿಂಗ. ವಿಚಿತ್ರ ಶೈಲಿಯ ಬೌಲಿಂಗ್ ಹಾಗೂ ಮ್ಯಾನರಿಸಂ ಮೂಲಕ ಮಾಲಿಂಗ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಲಸಿತ್ ಮಾಲಿಂಗ ಬರೋಬ್ಬರಿ 16 ವರ್ಷಗಳ ಕಾಲ ಅಕ್ಷರಶಃ ಶ್ರೀಲಂಕಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಮಾಲಿಂಗ ಅವರನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ.

ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಜಗತ್ತಿನ ಏಕೈಕ ಬೌಲರ್ ಎನ್ನುವ ಹೆಗ್ಗಳಿಕೆ ಮಾಲಿಂಗ ಅವರದ್ದು. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ದಾಖಲೆಯೂ ಮಾಲಿಂಗ ಹೆಸರಿನಲ್ಲಿದೆ.

ಲಸಿತ್ ಮಾಲಿಂಗ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಆದರೆ ಮಾಲಿಂಗ ಯಶಸ್ಸಿನ ಹಿಂದಿರುವ ಅವರ ಸುಂದರ ಪತ್ನಿ ತಾನ್ಯ ಪೆರೆರಾ ಬಗ್ಗೆ ಬಹುತೇಕ ಮಂದಿಗೆ ಗೊತ್ತಿಲ್ಲ. ಬನ್ನಿ ನಾವಿಂದು ಲಸಿತ್ ಮಾಲಿಂಗ ಅವರ ಇಂಟ್ರೆಸ್ಟಿಂಗ್ ಲವ್‌ ಸ್ಟೋರಿ ಹೇಗಿತ್ತು ಎಂದು ತಿಳಿಯೋಣ.

ತಾನ್ಯ ಪೆರೆರಾ, ಲಸಿತ್ ಮಾಲಿಂಗ ಅವರ ಸುಂದರ ಮಡದಿಯಾಗಿದ್ದಾರೆ. ಯುಜುವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ ಅವರಂತೆ ಮಾಲಿಂಗ ಅವರ ಪತ್ನಿ ವೃತ್ತಿಯಲ್ಲಿ ಓರ್ವ ಪ್ರಖ್ಯಾತ ಡ್ಯಾನ್ಸರ್ ಹಾಗೂ ಕೊರಿಯೊಗ್ರಾಫರ್ ಆಗಿದ್ದಾರೆ. 

ಲಸಿತ್ ಮಾಲಿಂಗ ಹಾಗೂ ತಾನ್ಯ ಪೆರೆರಾ ಅವರ ಸುಂದರ ದಾಂಪತ್ಯ ಜೀವನಕ್ಕೆ 13 ವರ್ಷಗಳು ತುಂಬಿವೆ. ಮಾಲಿಂಗ ಚಾಂಪಿಯನ್ ಬೌಲರ್ ಆಗಿ ಹೊರಹೊಮ್ಮುವಲ್ಲಿ ತಾನ್ಯ ಪೆರೆರಾ ಅವರ ಸಹಕಾರ ತುಂಬಾ ದೊಡ್ಡದಿದೆ.

ಕೆಲವು ವರದಿಗಳ ಪ್ರಕಾರ ಲಸಿತ್ ಮಾಲಿಂಗ ಹಾಗೂ ತಾನ್ಯ ಪೆರೆರಾ ಒಂದು ಅಡ್ವರ್ಟೈಸ್‌ಮೆಂಟ್ ಶೂಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಆಗ ತಾನ್ಯ ಪೆರೆರಾ ಆ ಪ್ರಾಜೆಕ್ಟ್‌ನ ಇವೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೊದಲ ನೋಟದಲ್ಲೇ ಈ ಜೋಡಿ ಪ್ರೇಮಪಾಶಕ್ಕೆ ಬಿದ್ದರು. ಇದಾದ ಬಳಿಕ ಕೆಲ ಕಾಲ ಡೇಟಿಂಗ್ ನಡೆಸಿದ ಮಾಲಿಂಗ-ತಾನ್ಯ ಜೋಡಿ ಜನವರಿ 22, 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸುಂದರ ಜೋಡಿಗೆ ಓರ್ವ ಮಗ ಹಾಗೂ ಮಗಳು ಇದ್ದಾರೆ.

ತಾನ್ಯ ಪೆರೆರಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ 28.6 ಸಾವಿರ ಮಂದಿ ಫಾಲೋವರ್ಸ್‌ ಇದ್ದಾರೆ. ಆದರೆ ಅವರ ಅಕೌಂಟ್ ಪ್ರೈವೇಟ್‌ನಲ್ಲಿ ಇಟ್ಟಿರುವುದರಿಂದ ಅವರ ದಿನನಿತ್ಯದ ಖಾಸಗಿ ಬದುಕಿನ ಮಾಹಿತಿ ಎಲ್ಲರಿಗೂ ಸಿಗುವುದು ವಿರಳ ಎನಿಸಿದೆ.

click me!