1. 5 ಪಂದ್ಯಗಳನ್ನೊಳಗೊಂಡಿದ್ದ ಟಿ20 ಸರಣಿಯಲ್ಲಿ ಭಾರತ ಸೋಲು ಕಂಡಿದ್ದು ಇದೇ ಮೊದಲು. ಇನ್ನು2022ರ ಟಿ20 ವಿಶ್ವಕಪ್‌ಗೆ ಅರ್ಹತೆಯನ್ನೇ ಪಡೆಯದ ವಿಂಡೀಸ್ ಎದುರು ಟಿ20 ಸರಣಿ ಸೋತಿದ್ದು, ಅಭಿಮಾನಿಗಳ ಪಾಲಿಗೆ ಶಾಕ್ ಆಗಿ ಪರಿಣಮಿಸಿದೆ.
2. ಒಂದು ಟಿ20 ಸರಣಿಯಲ್ಲಿ ಭಾರತ 3 ಪಂದ್ಯಗಳನ್ನು ಸೋತಿದ್ದು ಇದೇ ಮೊದಲು. ಭಾರತ ತಂಡವು ಈ ಹಿಂದೆ ಕೆಲವು 5 ಪಂದ್ಯಗಳ ಸರಣಿಯನ್ನಾಡಿದ್ದು, ಒಮ್ಮೆಯೂ ಎರಡಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ.
3. 25 ತಿಂಗಳಲ್ಲಿ ಭಾರತಕ್ಕೆ ಇದು ಮೊದಲ ಟಿ20 ಸರಣಿ ಸೋಲು. ಇದಕ್ಕೂ ಮುನ್ನ 2021ರ ಶ್ರೀಲಂಕಾ ಪ್ರವಾಸದಲ್ಲಿ 1-2ರಲ್ಲಿ ಸರಣಿ ಸೋಲು ಅನುಭವಿಸಿತ್ತು. ಇದಾದ ಮೊದಲ ಬಾರಿಗೆ ಟಿ20 ಸರಣಿಯಲ್ಲಿ ಭಾರತ ಸೋಲನುಭವಿಸಿದೆ.
4. 2017ರ ಬಳಿಕ ವಿಂಡೀಸ್‌ನಲ್ಲಿ ಎದುರಾದ ಮೊದಲ ಸರಣಿ ಸೋಲು. 2016ರಲ್ಲಿ 2 ಪಂದ್ಯಗಳ ಸರಣಿಯಲ್ಲಿ 0-1, 2017ರಲ್ಲಿ ಏಕೈಕ ಪಂದ್ಯದ ಸರಣಿಯನ್ನು 0-1ರಲ್ಲಿ ಸೋತಿತ್ತು. 2019ರಲ್ಲಿ 3 ಪಂದ್ಯಗಳ ಸರಣಿಯನ್ನು 3-0, 2022ರಲ್ಲಿ 5 ಪಂದ್ಯಗಳ ಸರಣಿಯನ್ನು 4-1ರಲ್ಲಿ ಭಾರತ ಗೆದ್ದಿತ್ತು.
5. ಇನ್ನು ದ್ವಿಪಕ್ಷೀಯ ಸರಣಿಯ ಬಗ್ಗೆ ಹೇಳುವುದಾದರೇ, ಭಾರತ ಕ್ರಿಕೆಟ್ ತಂಡವು ಬರೋಬ್ಬರಿ 17 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತ ತಂಡವು ಕೆರಿಬಿಯನ್ ಪಡೆ ಎದುರು ಮೊದಲ ಬಾರಿಗೆ ಮಂಡಿಯೂರಿ ಮುಖಭಂಗ ಅನುಭವಿಸಿದೆ.