ವಿರಾಟ್ ಕೊಹ್ಲಿಗಿಂತ ಹೆಚ್ಚು ಸಂಪಾದನೆ ಮಾಡಿದ 8 ಸ್ಟಾರ್ ಕ್ರಿಕೆಟಿಗರಿವರು..!

First Published | Aug 15, 2023, 3:31 PM IST

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಜಗತ್ತಿನ ಶ್ರೀಮಂತ ಟಿ20 ಲೀಗ್ ಎನಿಸಿಕೊಂಡಿದೆ. ಭಾರತದ ಸ್ಟಾರ್ ಆಟಗಾರ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರಿಗಿಂತ ಕಳೆದ ವರ್ಷ ಐಪಿಎಲ್‌ನಲ್ಲಿ ಹೆಚ್ಚು ಸಂಪಾದನೆ ಮಾಡಿದ ಟಾಪ್ 8 ಆಟಗಾರರ ಪರಿಚಯ ಇಲ್ಲಿದೆ ನೋಡಿ.
 

2018ರಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಬರೋಬ್ಬರಿ 17 ಕೋಟಿ ರುಪಾಯಿ ನೀಡಿ ವಿರಾಟ್ ಕೊಹ್ಲಿಯನ್ನು ರೀಟೈನ್ ಮಾಡಿಕೊಂಡಿತ್ತು. ಅದು ಆ ಸಂದರ್ಭದಲ್ಲಿ ರೀಟೈನ್ ಮಾಡಿಕೊಂಡ ಆಟಗಾರರ ಪೈಕಿ 2 ಕೋಟಿ ಹೆಚ್ಚಿಗೆ ವಿರಾಟ್‌ಗೆ ನೀಡಲಾಗಿತ್ತು. 

ಟೀಂ ಇಂಡಿಯಾ ರನ್‌ ಮಷೀನ್ ವಿರಾಟ್ ಕೊಹ್ಲಿ ಚೊಚ್ಚಲ ಆವೃತ್ತಿಯ(2008) ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

Tap to resize

2022ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿಯನ್ನು 15 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತು. ಇದರೊಂದಾಗಿ ಐಪಿಎಲ್‌ನಲ್ಲಿ ಅತಿಹೆಚ್ಚು ಸಂಪಾದನೆ ಮಾಡಿದ ಆಟಗಾರರ ಪೈಕಿ ಕೊಹ್ಲಿ 9ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ.  
 

1. ಸ್ಯಾಮ್ ಕರ್ರನ್‌:

ಪಂಜಾಬ್ ಕಿಂಗ್ಸ್ ತಂಡದ ಆಲ್ರೌಂಡರ್ ಸ್ಯಾಮ್ ಕರ್ರನ್‌ ಅವರಿಗೆ 18.5 ಕೋಟಿ ರುಪಾಯಿ ನೀಡಿ ಪಂಜಾಬ್ ಫ್ರಾಂಚೈಸಿ ಖರೀದಿಸಿದೆ. ಈ ಮೂಲಕ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅತಿಹೆಚ್ಚು ಸಂಪಾದನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

2. ಕ್ಯಾಮರೋನ್ ಗ್ರೀನ್:

2023ರ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಆಸ್ಟ್ರೇಲಿಯಾ ಮೂಲದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರಿಗೆ 17.5 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಹೀಗಾಗಿ ಗ್ರೀನ್ ಎರಡನೇ ಅತಿಹೆಚ್ಚು ಸಂಪಾದನೆ ಮಾಡಿದ ಆಟಗಾರ ಎನಿಸಿದ್ದಾರೆ.

3. ಕೆ ಎಲ್ ರಾಹುಲ್:

ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಅವರನ್ನು ಫ್ರಾಂಚೈಸಿಯು 17 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಈ ಮೂಲಕ ಗರಿಷ್ಠ ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ರಾಹುಲ್ ಮೂರನೇ ಸ್ಥಾನ ಪಡೆದಿದ್ದಾರೆ.

4. ಬೆನ್ ಸ್ಟೋಕ್ಸ್‌:

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ 16.25 ಕೋಟಿ ರುಪಾಯಿ ನೀಡಿ ಖರೀದಿಸಿರುವುದರಿಂದ ಗರಿಷ್ಠ ಸಂಪಾದನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್ 4ನೇ ಸ್ಥಾನದಲ್ಲಿದ್ದಾರೆ.

5. ರೋಹಿತ್ ಶರ್ಮಾ:

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಫ್ರಾಂಚೈಸಿಯು 16 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ. ಈ ಮೂಲಕ ಗರಿಷ್ಠ ಸಂಪಾದನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಹಿಟ್‌ಮ್ಯಾನ್ 5ನೇ ಸ್ಥಾನದಲ್ಲಿದ್ದಾರೆ.

6. ರವೀಂದ್ರ ಜಡೇಜಾ:

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚಾಂಪಿಯನ್ ಆಲ್ರೌಂಡರ್ ಜಡೇಜಾ, ಅವರನ್ನು ಸಿಎಸ್‌ಕೆ ಫ್ರಾಂಚೈಸಿಯು 16 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ. ಜಡೇಜಾ ತಾವೆಷ್ಟು ಉಪಯುಕ್ತ ಆಲ್ರೌಂಡರ್ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

7. ನಿಕೋಲಸ್ ಪೂರನ್‌:

ವೆಸ್ಟ್ ಇಂಡೀಸ್ ಮೂಲದ ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಪೂರನ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 16 ಕೋಟಿ ರುಪಾಯಿ ನೀಡಿ ಖರೀದಿಸಿದ್ದು, ಗರಿಷ್ಠ ಸಂಭಾವನೆ ಪಡೆದ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.

8. ಇಶಾನ್ ಕಿಶನ್‌:

ಮುಂಬೈ ಇಂಡಿಯನ್ಸ್ ತಂಡದ ಸ್ಪೋಟಕ ಬ್ಯಾಟರ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಫ್ರಾಂಚೈಸಿಯು 15.25 ಕೋಟಿ ರುಪಾಯಿಗೆ ರೀಟೈನ್ ಮಾಡಿಕೊಂಡಿದ್ದು, ಕೊಹ್ಲಿಗಿಂತ ಹೆಚ್ಚು ಸಂಪಾದನೆ ಮಾಡಿದ ಆಟಗಾರರ ಪೈಕಿ 8ನೇ ಸ್ಥಾನದಲ್ಲಿದ್ದಾರೆ.

Latest Videos

click me!