ರಿಷಭ್ ಪಂತ್ ಹೃದಯ ಕದ್ದ ಇಶಾ ನೇಗಿ..! ಇಲ್ಲಿದೆ ಕ್ಯೂಟ್ ಜೋಡಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

First Published | Apr 3, 2024, 5:56 PM IST

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಅಪಘಾತದಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿಗೆ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ನಾವಿಂದು ರಿಷಭ್ ಪಂತ್ ಅವರ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ತಿಳಿಯೋಣ ಬನ್ನಿ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಷಭ್ ಪಂತ್ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ರಿಷಭ್ ಪಂತ್‌ ಅವರ ಗರ್ಲ್‌ ಫ್ರೆಂಡ್‌ ಬಗ್ಗೆ ಬಹುತೇಕ ಮಂದಿಗೆ ಗೊತ್ತಿಲ್ಲ.
 

ಇನ್ನು 2022ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ನೋಡಲು ರಿಷಭ್ ಪಂತ್ ಗೆಳತಿ ಇಶಾ ನೇಗಿ ಬಂದಿದ್ದರು. ಆ ಪಂದ್ಯದ ಬಳಿಕ ಇಶಾ ನೇಗಿ ಹಾಕಿದ ಒಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
 

Tap to resize

ಇನ್ನು ಇದಕ್ಕೂ ಮೊದಲು 2019ರಲ್ಲಿ ರಿಷಭ್ ಪಂತ್ ಜತೆ ಇಶಾ ನೇಗಿ ಒಟ್ಟಿಗೆ ನಿಂತುಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಾವು ರಿಲೇಷನ್‌ಶಿಪ್‌ನಲ್ಲಿರುವುದು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು.
 

ಈ ಫೋಟೋ ಜತೆಗೆ ಇಶಾ ನೇಗಿ "ನನ್ನ ಹುಡುಗ, ನನ್ನ ಜತೆಗಾರ, ನನ್ನ ಬೆಸ್ಟ್ ಫ್ರೆಂಡ್, ನನ್ನ ಜೀವನದ ಪ್ರೀತಿಪಾತ್ರರಾದ ವ್ಯಕ್ತಿ ರಿಷಭ್ ಪಂತ್" ಎಂದು ಬರೆಯುವ ಮೂಲಕ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದರು.
 

ಇನ್ನು ರಿಷಭ್ ಪಂತ್ ಗೆಳತಿ ಇಶಾ ನೇಗಿ ಓರ್ವ ಉದ್ಯಮಿ ಹಾಗೂ ಇಂಟೀರಿಯರ್ ಡಿಸೈನರ್ ಆಗಿದ್ದು, ಆಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕನ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಶಾ ಹಾಗೂ ಪಂತ್ ತಾವು 19 ವರ್ಷದವರಿದ್ದಾಗಲೇ ಡೇಟಿಂಗ್ ನಡೆಸಲಾರಂಭಿಸಿದ್ದರು ಎಂದು ವರದಿಯಾಗಿದೆ.

ರಿಷಭ್ ಪಂತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಶಾ ನೇಗಿ ಅವರೊಂದಿಗಿನ ಸಂಬಂಧವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ದಿಟ್ಟ ಹೆಜ್ಜೆಯನ್ನಿಟ್ಟರು. ಇದು ಭಾರತೀಯ ಕ್ರಿಕೆಟಿಗರಲ್ಲಿ ತೀರಾ ಅಪರೂಪವಾಗಿದೆ.

ಇಶಾ ನೇಗಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಆಗಾಗ ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

Latest Videos

click me!