1500+ ಸಿಕ್ಸರ್ ಸಿಡಿಸಿ 2ನೇ ಸ್ಥಾನದಲ್ಲಿದ್ರೂ RCB ಕಪ್ ಗೆದ್ದಿಲ್ಲ, ಫಸ್ಟ್ ಪ್ಲೇಸಲ್ಲಿರೋ ತಂಡ ಕಪ್ ಗೆದ್ದಿದ್ಯಾ?

First Published | Mar 30, 2024, 6:50 PM IST

ಬೆಂಗಳೂರು: ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಐಪಿಎಲ್ ಇತಿಹಾಸದಲ್ಲಿ 1500+ ಸಿಕ್ಸರ್ ಸಿಡಿಸಿದ ಎರಡನೇ ತಂಡ ಎನಿಸಿಕೊಂಡಿದೆ. 1500 ಸಿಕ್ಸರ್ ಸಿಡಿಸಿದರೂ ಆರ್‌ಸಿಬಿ ಕಪ್ ಗೆದ್ದಿಲ್ಲ. ಇನ್ನು ಅತಿಹೆಚ್ಚು ಸಿಕ್ಸರ್ ಸಿಡಿಸಿದ ಐಪಿಎಲ್ ತಂಡ ಯಾವುದು? ಯಾವ ತಂಡ ಎಷ್ಟು ಸಿಕ್ಸರ್ ಸಿಡಿಸಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪಂದ್ಯ ಸೋತರೂ 11 ಸಿಕ್ಸರ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದೀಗ ಆರ್‌ಸಿಬಿ ತಂಡವು 1500+ ಸಿಕ್ಸರ್ ಸಿಡಿಸಿದ ಎರಡನೇ ತಂಡ ಎನಿಸಿದೆ. ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ತಂಡಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.

Tap to resize

10. ಗುಜರಾತ್ ಟೈಟಾನ್ಸ್: 210 ಸಿಕ್ಸರ್

ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್‌ಗಳು ಇಲ್ಲಿಯವರೆಗೆ ಒಟ್ಟು 210 ಸಿಕ್ಸರ್ ಸಿಡಿಸಿದ್ದಾರೆ. ತಂಡದಲ್ಲಿ ಶುಭ್‌ಮನ್ ಗಿಲ್, ರಾಹುಲ್ ತೆವಾಟಿಯಾ, ಡೇವಿಡ್ ಮಿಲ್ಲರ್ ಸಿಕ್ಸರ್ ಸಿಡಿಸುವುದರಲ್ಲಿ ಎತ್ತಿದ ಕೈ.

09. ಲಖನೌ ಸೂಪರ್ ಜೈಂಟ್ಸ್: 238 ಸಿಕ್ಸರ್

ಕೆ ಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಇಲ್ಲಿಯವರೆಗೆ 238 ಸಿಕ್ಸರ್ ಸಿಡಿಸಿ 9ನೇ ಸ್ಥಾನದಲ್ಲಿದೆ. ಲಖನೌ ತಂಡದಲ್ಲಿ ರಾಹುಲ್ ಮಾತ್ರವಲ್ಲದೇ ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಮಾರ್ಕಸ್ ಸ್ಟೋಯ್ನಿಸ್ ಅವರಂತ ಹೊಡಿಬಡಿ ಬ್ಯಾಟರ್‌ಗಳಿದ್ದಾರೆ.
 

08. ಸನ್‌ರೈಸರ್ಸ್ ಹೈದರಾಬಾದ್: 893 ಸಿಕ್ಸರ್

2016ರ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಇದುವರೆಗೂ 893 ಸಿಕ್ಸರ್ ಸಿಡಿಸಿದೆ. ಡೇವಿಡ್ ವಾರ್ನರ್, ಜಾನಿ ಬೇರ್‌ಸ್ಟೋವ್, ಹ್ಯಾರಿ ಬ್ರೂಕ್, ಹೆನ್ರಿಚ್ ಕ್ಲಾಸೇನ್ ಅವರಂತಹ ಬ್ಯಾಟರ್ ಆರೆಂಜ್ ಆರ್ಮಿ ಪರ ಸಿಕ್ಸರ್ ಸಿಡಿಸಿದ್ದಾರೆ.
 

07. ರಾಜಸ್ಥಾನ ರಾಯಲ್ಸ್: 1144 ಸಿಕ್ಸರ್

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್‌ಗಳು ಸಿಕ್ಸರ್ ಸಿಡಿಸುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಶೇನ್ ವಾಟ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಯೂಸೂಪ್ ಪಠಾಣ್ ಅವರಂತಹ ಬ್ಯಾಟರ್‌ಗಳು ರಾಯಲ್ಸ್ ಪರ ಸಿಕ್ಸರ್ ಮಳೆ ಸುರಿಸಿದ್ದಾರೆ
 

06. ಡೆಲ್ಲಿ ಕ್ಯಾಪಿಟಲ್ಸ್: 1229  ಸಿಕ್ಸರ್

ಚೊಚ್ಚಲ ಐಪಿಎಲ್‌ ಟ್ರೋಫಿ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್‌ಗಳು ಇದುವರೆಗೂ 1229 ಸಿಕ್ಸರ್ ಸಿಡಿಸಿದ್ದಾರೆ. ರಿಷಭ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ ಅವರಂತಹ ಬ್ಯಾಟರ್‌ಗಳ ಬಲ ಡೆಲ್ಲಿಗಿದೆ.
 

05. ಕೋಲ್ಕತಾ ನೈಟ್ ರೈಡರ್ಸ್: 1365 ಸಿಕ್ಸರ್

ಬ್ರೆಂಡನ್ ಮೆಕ್ಕಲಂ ಅವರಿಂದ ಹಿಡಿದು ಆಂಡ್ರೆ ರಸೆಲ್ ವರೆಗೆ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಬಿಗ್ ಹಿಟ್ಟರ್‌ಗಳ ಇತಿಹಾಸವೇ ಇದೆ. ಕೆಕೆಆರ್ ತಂಡದ ಪರ ಇದುವರೆಗೂ 1365 ಸಿಕ್ಸರ್ ದಾಖಲಾಗಿವೆ.
 

04. ಪಂಜಾಬ್ ಕಿಂಗ್ಸ್: 1421 ಸಿಕ್ಸರ್

ಚೊಚ್ಚಲ ಆವೃತ್ತಿಯ ಐಪಿಎಲ್‌ನಿಂದಲೂ ಪಾಲ್ಗೊಳ್ಳುತ್ತಾ ಬಂದಿರುವ ಪಂಜಾಬ್ ಕಿಂಗ್ಸ್ ತಂಡವು ಇದುವರೆಗೂ 1421 ಸಿಕ್ಸರ್ ಸಿಡಿಸಿದೆ. ಪಂಹಾಬ್ ತಂಡದಲ್ಲಿ ಶಾನ್ ಮಾರ್ಷ್, ಸ್ಯಾಮ್ ಕರ್ರನ್, ಜಾನಿ ಬೇರ್‌ಸ್ಟೋವ್ ಅಂತಹ ಆಟಗಾರರು ಸಿಕ್ಸರ್ ಮಳೆ ಸುರಿಸಿದ್ದಾರೆ.
 

03. ಚೆನ್ನೈ ಸೂಪರ್ ಕಿಂಗ್ಸ್: 1421 ಸಿಕ್ಸರ್

5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಇದುವರೆಗೂ 1421 ಸಿಕ್ಸರ್ ದಾಖಲಾಗಿವೆ. ಎಂ ಎಸ್ ಧೋನಿ, ಋತುರಾಜ್ ಗಾಯಕ್ವಾಡ್‌, ಸುರೇಶ್ ರೈನಾ ಅವರಂತಹ ಬ್ಯಾಟರ್‌ಗಳು ಸಿಕ್ಸರ್ ಸಿಡಿಸಿದ್ದಾರೆ.
 

02. ರಾಯಲ್ ಚಾಲೆಂಜರ್ಸ್ ಬೆಂಗಳೂರು:  1500 ಸಿಕ್ಸರ್

ಇನ್ನೂ ಕಪ್ ಗೆಲ್ಲಲು ತುದಿಗಾಲಲ್ಲಿ ನಿಂತಿರುವ ಆರ್‌ಸಿಬಿ ತಂಡವು ಇದುವರೆಗೂ 1,500 ಸಿಕ್ಸರ್ ಸಿಡಿಸಿದೆ. ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್‌, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಬ್ಯಾಟರ್‌ಗಳು ಮುಗಿಲೆತ್ತರದ ಸಿಕ್ಸರ್ ಸಿಡಿಸಿದ್ದಾರೆ.

01. ಮುಂಬೈ ಇಂಡಿಯನ್ಸ್: 1575 ಸಿಕ್ಸರ್

5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 1575 ಸಿಕ್ಸರ್ ಸಿಡಿಸಿ ಮೊದಲ ಸ್ಥಾನದಲ್ಲಿದೆ. ಸನತ್ ಜಯಸೂರ್ಯ, ಸಚಿನ್ ತೆಂಡುಲ್ಕರ್, ಕೀರನ್ ಪೊಲ್ಲಾರ್ಡ್, ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಸಿಕ್ಸರ್ ಸುರಿಮಳೆ ಸುರಿಸಿದ್ದಾರೆ.
 

Latest Videos

click me!