ಎಂ ಎಸ್ ಧೋನಿ ಅಣ್ಣ ನರೇಂದ್ರನೊಂದಿಗೆ ಪೂರ್ತಿ ಸಂಬಂಧ ಕಡಿದುಕೊಂಡಿದ್ದೇಕೆ? ಹಣದ ವಿಷಯಕ್ಕೆ ಜಗಳವಾಯ್ತಾ?

Published : Jul 11, 2024, 02:37 PM IST

ನೀವು 'ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಚಿತ್ರ ನೋಡಿದ್ದರೆ ಅದರಲ್ಲಿ ಕ್ರಿಕೆಟಿಗನ ಅಣ್ಣನ ಕುರಿತು ಚಕಾರವೆತ್ತಿಲ್ಲ. ಆದರೆ, ಧೋನಿಗೆ ಅಣ್ಣನಿದ್ದಾರೆ. ಎಂಎಸ್‌ಡಿಯು ಅವರೊಂದಿಗೆ ಪೂರ್ತಿ ಸಂಬಂಧ ಕಡಿದುಕೊಳ್ಳಲೊಂದು ಕಾರಣವಿದೆ. 

PREV
110
ಎಂ ಎಸ್ ಧೋನಿ ಅಣ್ಣ ನರೇಂದ್ರನೊಂದಿಗೆ ಪೂರ್ತಿ ಸಂಬಂಧ ಕಡಿದುಕೊಂಡಿದ್ದೇಕೆ? ಹಣದ ವಿಷಯಕ್ಕೆ ಜಗಳವಾಯ್ತಾ?

ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಕ್ರಿಕೆಟಿಗರು ಮತ್ತು ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ನಿಸ್ಸಂದೇಹವಾಗಿ ಈ ಪೀಳಿಗೆಯ ಅತ್ಯಂತ ಪ್ರೀತಿಯ ಕ್ರಿಕೆಟಿಗರಾಗಿದ್ದಾರೆ. 

210

ಭಾರತೀಯ ಕ್ರಿಕೆಟ್ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದರ ಜೊತೆಗೆ, MS ಧೋನಿ ತಮ್ಮ 15 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಲೆಕ್ಕವಿಲ್ಲದಷ್ಟು ವೈಯಕ್ತಿಕ ಪ್ರಶಸ್ತಿಗಳು ಮತ್ತು ಟ್ರೋಫಿಗಳನ್ನು ಗೆದ್ದಿದ್ದಾರೆ.
 

310

ಕ್ರಿಕೆಟಿಗನು ತನ್ನ ಕಠಿಣ ಪರಿಶ್ರಮ ಮತ್ತು ಸರಳ ಸ್ವಭಾವದಿಂದ ಜನರನ್ನು ಪ್ರೇರೇಪಿಸುವುದಷ್ಟೇ ಅಲ್ಲ, ಪತ್ನಿ ಮಕ್ಕಳ ಮೇಲಿನ ಪ್ರೀತಿಗಾಗೂ ಸುದ್ದಿಯಾಗುತ್ತಾರೆ.

410

ಜುಲೈ 7, 1981 ರಂದು ರಾಂಚಿಯ ಮಧ್ಯಮ ವರ್ಗದ ಕುಟುಂಬ ಪಾನ್ ಸಿಂಗ್ ಧೋನಿ ಮತ್ತು ದೇವಕಿ ಧೋನಿ ಅವರ ಕಿರಿಯ ಮಗನಾಗಿ ಹುಟ್ಟಿದ ಧೋನಿಗೆ ಹಿರಿಯ ಸಹೋದರಿ ಜಯಂತಿ ಗುಪ್ತಾ ಮತ್ತು ಅಣ್ಣ ನರೇಂದ್ರ ಸಿಂಗ್ ಧೋನಿ ಕೂಡ ಇದ್ದಾರೆ.

510

ಎಂಎಸ್ ಧೋನಿ ತನ್ನ ಸಹೋದರಿಯೊಂದಿಗೆ ಸುಂದರವಾದ ಬಾಂಧವ್ಯವನ್ನು ಹಂಚಿಕೊಂಡಿದ್ದರೂ, ಕೆಲವು ವರ್ಷಗಳಿಂದ ಅವರು ತಮ್ಮ ಅಣ್ಣನೊಂದಿಗೆ ಮಾತನಾಡುತ್ತಿಲ್ಲ. ಧೋನಿಯ ಜೀವನಚರಿತ್ರೆ 'ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ'ಯಲ್ಲಿ ಕ್ರಿಕೆಟಿಗನಿಗೆ ಅಣ್ಣನಿರುವ ವಿಷಯವನ್ನೇ ಹೇಳಿಲ್ಲ. ಏಕೆ ಹೀಗೆ?

610

ಅಣ್ಣ ತಮ್ಮನ ಸಂಬಂಧ ಸರಿ ಇಲ್ಲದ ಕಾರಣ ಇವರ ಕತೆಯನ್ನು ಬಯೋಪಿಕ್‌ನಲ್ಲಿ ಸೇರಿಸಲಾಗಿಲ್ಲ. ಮಹೇಂದ್ರ ಸಿಂಗ್ ಧೋನಿ ಅವರ ಕುಟುಂಬಕ್ಕೆ ಹತ್ತಿರವಿರುವ ವ್ಯಕ್ತಿಯೊಬ್ಬರು ಒಮ್ಮೆ ಹಣದ ವಿಷಯವು ಇಬ್ಬರು ಸಹೋದರರ ನಡುವಿನ ಸಂಬಂಧವನ್ನು ಹದಗೆಡಿಸಿತು ಎಂದು ಹಂಚಿಕೊಂಡಿದ್ದಾರೆ.

710

ಎಂಎಸ್ ಧೋನಿ ಒಮ್ಮೆ ರಾಂಚಿಯಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಲು ತಮ್ಮ ಅಣ್ಣನಿಗೆ ದೊಡ್ಡ ಮೊತ್ತದ ಹಣವನ್ನು ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ನರೇಂದ್ರ ಧೋನಿ ವೃದ್ಧಾಶ್ರಮವನ್ನು ತೆರೆಯುವ ಬದಲು, ಅವರು ತಮ್ಮ ಅತ್ತೆಗೆ ಎರಡು ಮಹಡಿ ಅಪಾರ್ಟ್‌ಮೆಂಟನ್ನು ಉಡುಗೊರೆಯಾಗಿ ನೀಡಿದರಂತೆ. 

810

ಇದೇ ಕಾರಣಕ್ಕೆ ಕೋಪಗೊಂಡು ಧೋನಿ, ತನ್ನ ಸಹೋದರನೊಂದಿಗಿನ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಿದರು ಮತ್ತು ರಾಂಚಿಯಲ್ಲಿ 5 ಅಂತಸ್ತಿನ ಅಪಾರ್ಟ್ಮೆಂಟ್ ಅನ್ನು ನಿರ್ಮಿಸಿ ವೃದ್ಧಾಶ್ರಮವಾಗಿಸಿದರು. 

910

ನರೇಂದ್ರ ಸಿಂಗ್ ಧೋನಿ ಪತ್ನಿ ಮಕ್ಕಳು
ನರೇಂದ್ರ ಸಿಂಗ್ ಧೋನಿ ರಾಜಕಾರಣಿ ಮತ್ತು 2013ರಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಆದರೆ, ನರೇಂದ್ರ ಈ ಹಿಂದೆ ಭಾರತೀಯ ಜನತಾ ಪಕ್ಷ (ಬಿಜೆಪಿ)ದಲ್ಲಿದ್ದರು. ನವೆಂಬರ್ 21, 2007 ರಂದು, ನರೇಂದ್ರ ವಿವಾಹವಾದರು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. 

1010

ನರೇಂದ್ರ ಧೋನಿ ಅವರು ಸಾಮಾನ್ಯವಾಗಿ ತಮ್ಮ ಕುಟುಂಬದೊಂದಿಗೆ ರಾಂಚಿಯಲ್ಲಿ ವಾಸಿಸುತ್ತಾರೆ, ಆದರೆ ಉತ್ತರಾಖಂಡದ ತಮ್ಮ ಸ್ಥಳೀಯ ಹಳ್ಳಿಯಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ.

Read more Photos on
click me!

Recommended Stories