ಈ ಕ್ರಿಕೆಟಿಗನ ಬಳಿಯಿದೆ ₹1.5 ಲಕ್ಷ ಕೋಟಿ ಸಂಪತ್ತು..! ಈತನ ಪಿತ್ರಾರ್ಜಿತ ಆಸ್ತಿಯೇ 70 ಸಾವಿರ ಕೋಟಿ..!

First Published | Jan 29, 2024, 6:17 PM IST

ಬೆಂಗಳೂರು: ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಎನ್ನುವ ಹೆಗ್ಗಳಿಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗಿದೆ. ಅದೇ ರೀತಿ ಭಾರತದ ಹಲವು ಕ್ರಿಕೆಟಿಗರು ನೂರಾರು ಕೋಟಿ ಒಡೆಯರೆನಿಸಿದ್ದಾರೆ. ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್, ಎಂ ಎಸ್ ಧೋನಿ ಭಾರತದ ಶ್ರೀಮಂತ ಕ್ರಿಕೆಟಿಗರೆನಿಸಿಕೊಂಡಿದ್ದಾರೆ. ಆದರೆ ಭಾರತದ ಈ ಕ್ರಿಕೆಟಿಗ ಜಗತ್ತಿನ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಯಾರು ಕ್ರಿಕೆಟಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಸಿಕ್ಸರ್ ಬೌಂಡರಿ ಮರೆತುಬಿಡಿ. ಈ ಬಿಲೇನಿಯರ್ ಕ್ರಿಕೆಟರ್ ನೋಡಿ. ಕ್ರಿಕೆಟ್‌ ಜಗತ್ತಿನಲ್ಲಿ ಪ್ರತಿಭೆ ಹಾಗೂ ಅದೃಷ್ಟ ಕೈಹಿಡಿದರೆ ಮಾತ್ರ ಮಿಂಚಬಹುದು ಎನ್ನುವ ಮಾತು ಸುಳ್ಳಲ್ಲ. ಟೀಂ ಇಂಡಿಯಾ ಕ್ರಿಕೆಟಿಗನಾಗಬೇಕೆಂದರೆ ಆಗರ್ಭ ಶ್ರೀಮಂತ ಆಗಬೇಕೆಂದಿಲ್ಲ.

ಹೌದು, ದುಡ್ಡಿರುವ ಶ್ರೀಮಂತರೇ ಟೀಂ ಇಂಡಿಯಾ ಆಟಗಾರರಾಗುತ್ತಿದ್ದರೆ ನಾವು ಹೇಳಲು ಹೊರಟಿರುವ ಆರ್ಯಮನ್ ಬಿರ್ಲಾ ಟೀಂ ಇಂಡಿಯಾ ಖಾಯಂ ಸದಸ್ಯರಾಗಬೇಕಿತ್ತು. ಈ ಆರ್ಯಮನ್ ಬಿರ್ಲಾ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

Tap to resize

ಭಾರತ ಕ್ರಿಕೆಟ್ ದಂತಕಥೆಗಳಾಗಿರುವ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಮೂಲಕವೇ ಸಾವಿರಾರು ಕೋಟಿ ಒಡೆಯರಾಗಿದ್ದಾರೆ. ಆದರೆ ಆರ್ಯಮನ್ ಬಿರ್ಲಾ ಶ್ರೀಮಂತಿಕೆ ಮುಂದೆ ಈ ದಿಗ್ಗಜ ಕ್ರಿಕೆಟಿಗರ ಸಂಪತ್ತು ಏನೇನೂ ಅಲ್ಲ.

ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದ ಆರ್ಯಮನ್ ಬಿರ್ಲಾ:

ಆರ್ಯಮನ್ ಅವರ ತಂದೆ ಕುಮಾರ್ ಮಂಗಲಂ ಬಿರ್ಲಾ ಭಾರತದಲ್ಲಿ ಬ್ಯುಸಿನೆಸ್ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಕುಮಾರ್ ಮಂಗಲಂ ಬಿರ್ಲಾ ಅವರ ಒಟ್ಟು ಸಂಪತ್ತಿನ ಮೌಲ್ಯ ಬರೋಬ್ಬರಿ 5 ಲಕ್ಷ ಕೋಟಿ ರುಪಾಯಿಗಳು. ಈ ಕುಟುಂಬದಲ್ಲಿ ಜನಿಸಿದ್ದಾರೆ ಆರ್ಯಮನ್ ಬಿರ್ಲಾ.
 

ಆರ್ಯಮನ್ ಬಿರ್ಲಾ ಅವರ ಐಶಾರಾಮಿ ಹಿನ್ನೆಲೆಯುಳ್ಳ ಆಗರ್ಭ ಶ್ರೀಮಂತ ಕುಟುಂಬ ಆಗಿದೆ. ಪೋರ್ಬ್ಸ್‌ ವರದಿಯ ಪ್ರಕಾರವೇ ಇವರ ಸಂಪತ್ತಿನ ಮೌಲ್ಯ ಬರೋಬ್ಬರಿ 1.5 ಲಕ್ಷ ಕೋಟಿ ರುಪಾಯಿ. ಇವರ ತಂದೆ ಭಾರತದ ಆಗರ್ಭ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಆರ್ಯಮನ್ ಕ್ರಿಕೆಟ್ ಬದುಕು

ಆರ್ಯಮನ್ ಅವರು ದೇಶಿ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಅವರು 2019ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಕೆಲ ವರ್ಷಗಳ ಕಾಲ ಆರ್ಯಮನ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಭಾಗವಾಗಿದ್ದರು.
 

ದೇಶಿ ಕ್ರಿಕೆಟ್‌ನಲ್ಲಿ ಅವರು 16 ಇನಿಂಗ್ಸ್‌ಗಳನ್ನಾಡಿ ಒಂದು ಶತಕ ಸಹಿತ 414 ರನ್ ಬಾರಿಸಿದ್ದಾರೆ. ಇನ್ನು ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಮೂರು ಇನಿಂಗ್ಸ್‌ಗಳನ್ನಾಡಿ ಕೇವಲ 36 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಆರ್ಯಮನ್ ಬಿರ್ಲಾ ಅವರ ಪ್ರಾಜೆಕ್ಟ್ ಮೌಲ್ಯ.!

ಆರ್ಯಮನ್ ಬಿರ್ಲಾ ಅವರ ನಿಜವಾದ ಗೇಮ್‌ ಜೇಂಜರ್ ಅಂದರೆ ಅವರ ಕುಟುಂಬದ ಹಿನ್ನೆಲೆ. ಕೆಲವು ವರದಿಗಳ ಪ್ರಕಾರ, ಅವರ ಪಿತ್ರಾರ್ಜಿತ ಆಸ್ತಿಯೇ ಬರೋಬ್ಬರಿ 70 ಸಾವಿರ ಕೋಟಿ ರುಪಾಯಿಗಳು. ಈ ಕಾರಣಕ್ಕಾಗಿಯೇ ಅವರು ಜಗತ್ತಿನ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡಿರುವುದು.
 

ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿಗೆ ಬ್ರೇಕ್ ಪಡೆದಿರುವ ಆರ್ಯಮನ್:

2019ರ ಡಿಸೆಂಬರ್‌ನಲ್ಲಿ ಆರ್ಯಮನ್ ಬಿರ್ಲಾ ಅವರು ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿಯ ಮಟ್ಟಿಗೆ ಬ್ರೇಕ್ ಪಡೆಯಲು ತೀರ್ಮಾನಿಸಿದ್ದಾರೆ. ಕ್ರೀಡೆಯ ಕುರಿತಾಗಿ ನಿರೀಕ್ಷೆಯ ಭಾರ ಹೊರಲಾಗದೇ ಕೆಲ ಸಮಯದ ಮಟ್ಟಿಗೆ ಬಿಡುವು ಪಡೆದುಕೊಂಡಿದ್ದಾರೆ.
 

ಬರೋಡ ರಾಜ ಮನೆತನದ ಕ್ರಿಕೆಟಿಗನ ಸಂಪತ್ತನ್ನೇ ಮೀರಿಸಿರುವ ಆರ್ಯಮನ್:

ಆರ್ಯಮನ್ ಅವರ ಪಿತ್ರಾರ್ಜಿತ ಮೌಲ್ಯ 70 ಸಾವಿರ ಕೋಟಿ ರುಪಾಯಿ ಆಗಿರುವುದರಿಂದ ಅವರು ಜಗತ್ತಿನ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇನ್ನು ಬರೋಡ ರಾಜ ಮನೆತನದ ಸಮರಜೀತ್‌ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್ ಅವರ ಆಸ್ತಿ ಮೌಲ್ಯ 20 ಸಾವಿರ ಕೋಟಿ ರುಪಾಯಿಗಳಾಗಿವೆ
 

Latest Videos

click me!