'ಇನ್ನಾದರೂ...?' ಶೋಯೆಬ್ ಮಲಿಕ್ ಮದುವೆಯಾಗಿದ್ದನ್ನ ಲೇವಡಿ ಮಾಡಿದ ಶಾಹಿದ್ ಅಫ್ರಿದಿ..! ಏನಂದ್ರು ನೀವೇ ನೋಡಿ

First Published | Jan 24, 2024, 6:09 PM IST

ಬೆಂಗಳೂರು: ಕಳೆದ ಶನಿವಾರ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾಗೆ ಕೈಕೊಟ್ಟು ಮೂರನೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಮದುವೆಯನ್ನು ಪಾಕ್ ಮಾಜಿ ನಾಯಕ ಶೋಯೆಬ್ ಮಲಿಕ್ ಲೇವಡಿ ಮಾಡಿದ್ದಾರೆ
 

ಪಾಕಿಸ್ತಾನದ ಅನುಭವಿ ಆಲ್ರೌಂಡರ್ ಶೋಯೆಬ್ ಮಲಿಕ್ ಇದೀಗ ಮಾಡೆಲ್ ಸನಾ ಜಾವೆದ್ ಅವರನ್ನು ಮದುವೆಯಾಗಿದ್ದಾರೆ. ಇದು ಶೋಯೆಬ್ ಮಲಿಕ್‌ ಪಾಲಿಗೆ ಮೂರನೇ ಮದುವೆಯಾದರೆ, ಸನಾ ಪಾಲಿಗೆ ಎರಡನೇ ಮದುವೆ.

ಈ ಮೊದಲು ಶೋಯೆಬ್ ಮಲಿಕ್ ತಮ್ಮ ಮೊದಲ ಪತ್ನಿ ಆಯೆಷಾ ಸಿದ್ದಿಕಿ ಅವರಿಗೆ ವಿಚ್ಛೇದನ ನೀಡಿ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಿದ್ದರು. ಕಳೆದೊಂದು ವರ್ಷದಿಂದಲೂ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಬೇರೆ-ಬೇರೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವಾದರೂ, ಅಧಿಕೃತ ಮಾಹಿತಿ ಇರಲಿಲ್ಲ.
 

Tap to resize

ಇನ್ನು ಸನಾ ಜಾವೆದ್ 2020ರಲ್ಲಿ ಪಾಕಿಸ್ತಾನಿ ನಟ, ಗಾಯಕ ಹಾಗೂ ಸಾಹಿತ್ಯ ರಚನೆಕಾರ ಉಮೈರ್ ಜಸ್ವಾಲ್ ಅವರನ್ನು ವಿವಾಹವಾಗಿದ್ದರು. ಇನ್ನು  ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಅವರು ಬೇರ್ಪಟ್ಟಿದ್ದರು. ಮಲಿಕ್ ಅವರನ್ನು ಮದುವೆಯಾಗುತ್ತಿದ್ದಂತೆಯೇ ಸನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ 'ಸನಾ ಶೋಯೆಬ್ ಮಲಿಕ್' ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಶೋಯೆಬ್ ಮಲಿಕ್ ಮೂರನೇ ಮದುವೆಯಾಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನವನ್ನೇ ಹುಟ್ಟುಹಾಕಿದೆ. ಕೆಲವು ಕ್ರಿಕೆಟಿಗರು ಈ ಮದುವೆಯ ಬಗ್ಗೆ ಮಾತಾನಾಡಿದ್ದಾರೆ. ಇದೀಗ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಪಾಕಿಸ್ತಾನದ ಟಿವಿಯೊಂದರಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಹಿದ್ ಅಫ್ರಿದಿಗೆ, ಶೋಯೆಬ್ ಮಲಿಕ್ ಮೂರನೇ ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಕಾಲೆಳೆಯುವ ರೀತಿಯಲ್ಲಿಯೇ ಉತ್ತರ ನೀಡಿದ್ದಾರೆ.

ಶೋಯೆಬ್ ಮಲಿಕ್‌ಗೆ ಅಭಿನಂದನೆಗಳು. ಇನ್ನಾದರೂ ದೇವರು ಈ ಹೊಸ ಪತ್ನಿಯ ಜತೆ ಅವರು ಸಂಪೂರ್ಣ ಜೀವನ ಕಳೆಯುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳುವ ಮೂಲಕ ಕಾಲೆಳೆಯುತ್ತಲೇ ಶುಭಾಶಯ ಕೋರಿದ್ದಾರೆ.

ಸನಾ ಜಾವೆದ್ ಅವರನ್ನು ಮದುವೆಯಾಗುವ ಮುನ್ನ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜತೆ 2010ರಲ್ಲಿ ಎರಡನೇ ಮದುವೆಯಾಗಿದ್ದು. ಈ ಜೋಡಿ 14 ವರ್ಷಗಳ ಕಾಲ ಸಂಸಾರ ನಡೆಸಿತ್ತು. ಇವರಿಗೆ ಇಜಾನ್ ಎನ್ನುವ ಒಬ್ಬ ಗಂಡು ಮಗನಿದ್ದಾನೆ.

Latest Videos

click me!