ಲಿಂಗ ಪರಿವರ್ತಿಸಿಕೊಂಡ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಮಗ: ಈಗ ಆರ್ಯನ್ ಅವನಲ್ಲ ಅವಳು!

First Published | Nov 11, 2024, 12:36 PM IST

ಬೆಂಗಳೂರು: ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಹಾಗೂ ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಮಗ ತಮ್ಮ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
 

ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಹಾಗೂ ಮಾಜಿ ಆಲ್ರೌಂಡರ್ ಸಂಜಯ್ ಬಂಗಾರ್, ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಕ್ರಿಕೆಟ್ ಸ್ಪಿರಿಟ್ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಿದ್ದರು. ಇದೀಗ ಅವರ ಮಗ ಅಲ್ಲ ಮಗಳಾಗಿ ಬದಲಾದ ಆನ್ಯಾ ಅವರ ವಿಚಾರವಾಗಿ ಸುದ್ದಿಯಾಗಿದ್ದಾರೆ

ಹೌದು, ಇದೀಗ ಸಂಜಯ್ ಬಂಗಾರ್ ಪುತ್ರ ಆರ್ಯನ್ ಬಂಗಾರ್ ಲಿಂಗ ಪರಿವರ್ತನೆ ಮಾಡಿಕೊಳ್ಳುವ ಮೂಲಕ ದಿಟ್ಟ ನಿರ್ಧಾರವನ್ನು ಕೈಗೊಂಡು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್ ಆಡುವುದಕ್ಕೋಸ್ಕರವೇ ಆರ್ಯನ್ ಬಂಗಾರ್ ಇದೀಗ ಆನ್ಯಾ ಬಂಗಾರ್ ಆಗಿ ಬದಲಾಗಿದ್ದಾರೆ.
 

Tap to resize

ಆರ್ಯನ್‌ನಿಂದ ಆನ್ಯಾ ಆಗಿ ಬದಲಾದ 10 ತಿಂಗಳ ಹಾರ್ಮೊನ್ ಬದಲಾವಣೆಯ ವಿಡಿಯೋವನ್ನು ಇದೀಗ ಸಂಜಯ್ ಬಂಗಾರ್ ಪುತ್ರಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆನ್ಯಾ ಹಾರ್ಮೊನ್ ರೀಪ್ಲೇಸ್‌ಮೆಂಟ್ ಥೆರಪಿ ಎಫೆಕ್ಸ್ ಹೇಗಿತ್ತು ಎನ್ನುವುದನ್ನು ವಿವರಿಸಿದ್ದಾರೆ.

ಬರೋಬ್ಬರಿ 11 ತಿಂಗಳುಗಳ ಕಾಲ ನಡೆದ ಸರ್ಜರಿಯ ಬಳಿಕ ಆರ್ಯನ್‌ನಿಂದ ಆನ್ಯಾ ಆಗಿ ಬದಲಾದ ಸಂಜಯ್ ಬಂಗಾರ್ ಪುತ್ರಿ, ಎಡಗೈ ಬ್ಯಾಟರ್ ಅಗಿದ್ದು, ಲೋಕಲ್ ಕ್ರಿಕೆಟ್ ಕ್ಲಬ್‌ನಲ್ಲಿ ಇಸ್ಲಾಂ ಜಿಮ್ಖಾನವನ್ನು ಪ್ರತಿನಿಧಿಸುತ್ತಿದ್ದಾರೆ. ಇದಷ್ಟೇ ಅಲ್ಲದೇ ಲೈಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್ ಪರವೂ ಸಾಕಷ್ಟು ರನ್ ರಾಶಿಯನ್ನೇ ಆರ್ಯನ್ ಕಲೆ ಹಾಕಿದ್ದರು.

ಸದ್ಯ ಆನ್ಯಾ ಬಂಗಾರ್ ಮ್ಯಾಂಚೆಸ್ಟರ್‌ನಲ್ಲಿ ವಾಸವಾಗಿದ್ದು, ಕೌಂಟಿ ಕ್ಲಬ್ ಕೂಡಾ ಅಲ್ಲೇ ಇದೆ. ಆದರೆ ಆನ್ಯಾ ಬಂಗಾರ್ ಮಹಿಳೆಯಾಗಿ ಬದಲಾದ ಬಳಿಕ ಯಾವ ಕ್ರಿಕೆಟ್ ಕ್ಲಬ್ ಪ್ರತಿನಿಧಿಸಲಿದ್ದಾರೆ ಎನ್ನುವ ಕುತೂಹಲಕ್ಕೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ.

ಟೀಂ ಇಂಡಿಯಾ ಪರ 12 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳನ್ನಾಡಿರುವ ಸಂಜಯ್ ಬಂಗಾರ್, 2014ರಿಂದ 2018ರ ವರೆಗೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿಯೂ ಸೈ ಎನಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ ಸಂಜಯ್ ಬಂಗಾರ್ 2022ರಲ್ಲಿ ಆರ್‌ಸಿಬಿ ತಂಡದ ಹೆಡ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Latest Videos

click me!