ಟೀಂ ಇಂಡಿಯಾ ಮಾಜಿ ಅ19 ವಿಶ್ವಕಪ್ ಹೀರೋಗೆ ಜಾಮೀನು ನಿರಾಕರಿಸಿದ ಕೋರ್ಟ್, ಜೈಲಿನಲ್ಲೇ ಕ್ರಿಕೆಟಿಗ

Published : Jul 28, 2026, 12:42 PM IST

ಟೀಂ ಇಂಡಿಯಾ ಮಾಜಿ ಅಂಡರ್ 19 ವಿಶ್ವಕಪ್ ಹೀರೋ ಜೈಲಿನಲ್ಲೇ ಬಂಧಿಯಾಗಿದ್ದಾರೆ. ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಶ್ರೀಲಂಕಾ ಪೊಲೀಸರಿಂದ ಅರೆಸ್ಟ್ ಆಗಿದ್ದ ಈ ಭಾರತದ ಮಾಜಿ ಹೀರೋಗೆ ಸಂಕಷ್ಟ ತೀವ್ರಗೊಂಡಿದೆ.

PREV
15
ಭಾರತದ ಮಾಜಿ ಹೀರೋಗೆ ಜಾಮೀನು ನಿರಾಕರಣೆ

ಭಾರತದ ಅಂಡರ್ 19 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕ್ರಿಕೆಟಿಗ ಮನ್ಜೋತ್ ಕಾಲ್ರ ಸಮಸ್ಯೆಗಳು ತೀವ್ರಗೊಂಡಿದೆ. ಭಾರತದ ಅಂಡರ್ 19 ಮೂಲಕ ಗಮನಸೆಳೆದಿದ್ದ ಮನ್ಜೋತ್ ಶೀಘ್ರದಲ್ಲೇ ಟೀಂ ಇಂಡಿಯಾಗೂ ಲಗ್ಗೆ ಇಡುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೆಲ ಮಾತುಗಳು, ನಿರ್ಧಾರಗಳು ಮನ್ಜೋತ್ ಕಾಲ್ರಾಗೆ ಮುಳುವಾಗಿತ್ತು. ಬಳಿಕ ಮನ್ಜೋತ್ ಕಾಲ್ರ ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಅರೆಸ್ಟ್ ಆಗಿದ್ದಾರೆ. ಇದೀಗ ಜಾಮೀನು ಕೂಡ ನಿರಾಕರಿಸಲಾಗಿದೆ.

25
ಶ್ರೀಲಂಕಾ ಕೋರ್ಟ್‌ನಿಂದ ಜಾಮೀನು ನಿರಾಕರಣೆ

ಶ್ರೀಲಂಕಾ ಲೀಗ್ ಟೂರ್ನಿಯಲ್ಲಿ ಜಾಫ್ನಾ ಕಿಂಗ್ಸ್ ತಂಡದ ಸಹ ಮಾಲೀಕನಾಗಿರುವ ಮನ್ಜೋತ್ ಕಾಲ್ರಾ ಟೂರ್ನಿ ಆರಂಭಕ್ಕೂ ಮುನ್ನ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಶ್ರೀಲಂಕಾ ಪೊಲೀಸರು ಅರೆಸ್ಟ್ ಮಾಡಿದ್ದರು. ಕಳೆದ 15 ದಿನಗಳಿಂದ ಜೈಲಿನಲ್ಲಿರುವ ಮನ್ಜೋತ್ ಕಾಲ್ರಾಗೆ ಶ್ರೀಲಂಕಾ ಕೋರ್ಟ್ ಜಾಮೀನು ನಿರಾಕರಿಸಿದೆ. ಇದೀಗ ಜುಲೈ 31ವರೆಗೂ ಮನ್ಜೋತ್ ಕಾಲ್ರಾ ಜೈಲಿನಲ್ಲೇ ಕಳೆಯಬೇಕಿದೆ.

35
ಅನಾರೋಗ್ಯ ಕಾರಣ ಜಾಮೀನು ಕೇಳಿದ ವಕೀರಲು

ಮನ್ಜೋತ್ ಕಾಲ್ರಾ ಪರ ವಕೀಲರು ಅನಾರೋಗ್ಯ ಕಾರಣ ಮುಂದಿಟ್ಟು ಜಾಮೀನು ಕೇಳಿದ್ದಾರೆ. ಆದರೆ ಶ್ರೀಲಂಕಾ ಕೋರ್ಟ್ ಅರ್ಜಿ ತಿರಸ್ಕರಿಸಿದೆ. ಇದು ಗಂಭೀರ ಪ್ರಕರಣವಾಗಿದೆ. ಶ್ರೀಲಂಕಾ ಕ್ರಿಕೆಟ್ ಇದೇ ರೀತಿಯ ಫಿಕ್ಸಿಂಗ್ ಕಾರಣದಿಂದ ಅಧಪತನವಾಗಿದೆ. ಹೀಗಾಗಿ ಕ್ರೀಡೆಯ ಕಾನೂನು ಉಲ್ಲಂಘನೆ ಗಂಭೀರ ಪ್ರಕರಣ ಎಂದು ಕೋರ್ಟ್ ಹೇಳಿದೆ. ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ಜೈಲು ಅಧೀಕ್ಷರಿಗೆ ಸೂಚನೆ ನೀಡಿದೆ.

45
ಸಂಕಷ್ಟದಲ್ಲಿ ಜಾಫ್ನಾ ಕಿಂಗ್ಸ್ ತಂಡ

ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇರುವುದು 5 ತಂಡಗಳು ಮಾತ್ರ. ಈ ಪೈಕಿ ಜಾಫ್ನಾ ಕಿಂಗ್ಸ್ ತಂಡದ ಸಹ ಮಾಲೀಕನಾಗಿರುವ ಮನ್ಜೋತ್ ಕಾಲ್ರಾ ಜೈಲು ಸೇರಿರುವ ಕಾರಣ ಇದೀಗ ಆಟಗಾರರಿಗೆ ಆತಂಕ ಎದುರಾಗಿದೆ. ತಮ್ಮ ಸಂಭಾವನೆ, ಟೂರ್ನಿ ಖರ್ಚು ವೆಚ್ಚಗಳ ಕುರಿತು ಆತಂಕ ಹೆಚ್ಚಾಗಿದೆ.ಲೀಗ್‌ನಲ್ಲಿ ತಂಡ ಉಳಿದುಕೊಳ್ಳುವ ಸಾಧ್ಯತೆ ಕುರಿತು ತೀವ್ರ ಚರ್ಚೆಯಾಗುತ್ತಿದೆ.

55
ಹೊಟೆಲ್‌ನಿಂದ ಕಾಲ್ರಾ ಅರೆಸ್ಟ್

ಜುಲೈ 17 ರಿಂದ ಆರಂಭಗೊಂಡಿರುವ ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಆಗಸ್ಟ್ 8ಕ್ಕೆ ನಡೆಯಲಿದೆ. ಒಟ್ಟು 24 ಪಂದ್ಯಗಳ ಟೂರ್ನಿ ಇದೀಗ ರೋಚಕ ಘಟ್ಟ ತಲುಪಿದೆಯ. ಟೂರ್ನಿ ಆರಂಭಕ್ಕೆ ಕೆಲವೇ ದಿನ ಮೊದಲು ಕೊಲೊಂಬೊ ಹೋಟೆಲ್‌ ರೂಂನಲ್ಲಿ ಮನ್ಜೋತ್ ಕಾಲ್ರಾನನ್ನು ಶ್ರೀಲಂಕಾ ಪೊಲೀಸರು ಅರೆಸ್ಟ್ ಮಾಡಲಾಗಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories