74 ಪಂದ್ಯದ ಐಪಿಎಲ್‌ನಲ್ಲಿ ಭಾರಿ ಬದಲಾವಣೆ, ಮಾರ್ಚ್‌ನಿಂದ ಟೂರ್ನಿ ಆರಂಭಕ್ಕೆ ಬಿಸಿಸಿಐ ತಯಾರಿ

Published : Jun 15, 2026, 07:41 PM IST

ಐಪಿಎಲ್ ಟೂರ್ನಿಯಲ್ಲಿ (IPL) ಭಾರಿ ಬದಲಾವಣೆಯಾಗುತ್ತಿದೆ. ಹೊಸ ರೂಪದಲ್ಲಿ ಟೂರ್ನಿ ನಡೆಯಲಿದೆ. 74 ಪಂದ್ಯಗಳ ಟೂರ್ನಿ ವಿಸ್ತರಣೆಗೊಳ್ಳುತ್ತಿದೆ, ಪಂದ್ಯ ಮಾತ್ರವಲ್ಲ, ಎಪ್ರಿಲ್, ಮೇ ತಿಂಗಳ ಟೂರ್ನಿ ಇದೀಗ ಮಾರ್ಚ್‌ನಿಂದಲೇ ಆರಂಭಗೊಳ್ಳಲಿದೆ. ಏನೆಲ್ಲಾ ಬದಲಾವಣೆ?

PREV
16
ಐಪಿಎಲ್ ಟೂರ್ನಿಯಲ್ಲಿ ಭಾರಿ ಬದಲಾವಣೆ

ಐಪಿಎಲ್ 2026 ಟೂರ್ನಿ ಅದ್ಧೂರಿಯಾಗಿ ನಡೆದಿದೆ. ಆರ್‌ಸಿಬಿ ಸತತ 2ನೇ ಬಾರಿಗೆ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಹೊಸ ಪ್ರತಿಭಟೆಗಳು ಬೆಳಕಿಗೆ ಬಂದಿದೆ. ಹಲವು ಕ್ರಿಕೆಟಿಗರು ಲಯ ಕಂಡುಕೊಂಡಿದ್ದಾರೆ. ಇದೀಗ ಬಿಸಿಸಿಐ ಹೊಸ ಮಾದರಿಯಲ್ಲಿ ಐಪಿಎಲ್ ಟೂರ್ನಿ ಮುಂದುವರಿಸಲು ಪ್ಲಾನ್ ಮಾಡಿದೆ. ಟೂರ್ನಿ ಆರಂಭ, ಪಂದ್ಯ ಸೇರಿದಂತೆ ಕೆಲ ಮಹತ್ವದ ಬದಲಾವಣೆ ನಡೆಯಲಿದೆ.

26
74 ಪಂದ್ಯಗಳಿಂದ 94 ಪಂದ್ಯಕ್ಕೆ ಐಪಿಎಲ್ ವಿಸ್ತರಣೆ

ಸದ್ಯ ಐಪಿಎಲ್ ಟೂರ್ನಿ 74 ಪಂದ್ಯಗಳಿಂದ ಕೂಡಿದೆ. ಲೀಗ್, ಪ್ಲೇ ಆಫ್ ಹಾಗೂ ಫೈನಲ್ ಮಾದರಿಯಲ್ಲಿ ಆಡುವ ಐಪಿಎಲ್ ಟೂರ್ನಿಯ ಒಟ್ಟು ಪಂದ್ಯಗಳ ಸಂಖ್ಯೆ ಇನ್ನು ಮುಂದೆ 94ಕ್ಕೆ ವಿಸ್ತರಣೆಯಾಗಲಿದೆ. ಬರೋಬ್ಬರಿ 20 ಪಂದ್ಯಗಳು ಹೆಚ್ಚಾಗಲಿದೆ. ಚುಟುಕು ಸರಣಿ ಇದೀಗ ಸುದೀರ್ಘವಾಗುತ್ತಿದೆ.

36
ಮಾರ್ಚ್ ತಿಂಗಳಿನಿಂದ ಐಪಿಎಲ್ ಆರಂಭ

ಐಪಿಎಲ್ ಟೂರ್ನಿ ಸಾಮಾನ್ಯ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭಗೊಳ್ಳುತ್ತದೆ. ಸರಿಸುಮಾರು 60 ದಿನಗಳಲ್ಲಿ ಈ ಟೂರ್ನಿ ಮುಕ್ತಾಯಗೊಳ್ಳಲಿದೆ. ಆದರೆ ಪಂದ್ಯಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮಾರ್ಚ್ ಆರಂಭದಿಂದ ಟೂರ್ನಿ ಆರಂಭಗೊಳ್ಳಲಿದೆ. ಸರಿಸುಮಾರು ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಐಪಿಎಲ್ ಟೂರ್ನಿ ನಡೆಯಲಿದೆ.

46
ದ್ವಿಪಕ್ಷೀಯ ಸರಣಿಗೆ ಕೊಕ್

ಮಾರ್ಚ್ ತಿಂಗಳಲ್ಲಿ ಭಾರತ ಕೆಲ ದ್ವಿಪಕ್ಷೀಯ ಸರಣಿ ಆಡಲಿದೆ. ಈ ಸರಣಿಗೆ ಬಿಸಿಸಿಐ ಕೊಕ್ ನೀಡಲು ಮುಂದಾಗಿದೆ. ಟೀಂ ಇಂಡಿಯಾದ ಎಲ್ಲಾ ಸರಣಿಗಳು ಫೆಬ್ರವರಿ 15ರೊಳಗೆ ಅಂತ್ಯಗೊಳ್ಳುವಂತೆ ಬಿಸಿಸಿಐ ನೋಡಿಕೊಳ್ಳಲಿದೆ. ಈ ಮೂಲಕ ಮಾರ್ಚ್ ಆರಂಭದಿಂದಲೇ ಐಪಿಎಲ್ ಟೂರ್ನಿಗೆ ಅವಕಾಶ ಮಾಡಿಕೊಡಲಿದೆ.

56
2028ರಿಂದ ಹೊಸ ಮಾದರಿಯಲ್ಲಿ ಟೂರ್ನಿ

ಮುಂದಿನ ಐಪಿಎಲ್ ಟೂರ್ನಿ ಹೆಚ್ಚಿನ ಬದಲಾವಣೆಗಿಲ್ಲದೆ ನಡೆಯಲಿದೆ. ಆದರೆ 2028ರ ಐಪಿಎಲ್ ಟೂರ್ನಿಯಲ್ಲಿ 94 ಪಂದ್ಯ, ಮಾರ್ಚ್ ತಿಂಗಳಿನಿಂದ ಐಪಿಎಲ್ ಆರಂಭ ಸೇರಿದಂತೆ ಹಲವು ಬದಲಾವಣೆಗಳು ನಡೆಯಲಿದೆ. ಇದೇ ವೇಳೆ ವಿದೇಶಿ ಆಟಗಾರರ ಲಭ್ಯತೆ ಕುರಿತು ಕೆಲ ನಿಯಮ ಜಾರಿಯಾಗುವ ಸಾಧ್ಯತೆ ಇದೆ.

66
ಮತ್ತಷ್ಟು ರಂಗು ನೀಡಲು ಪ್ಲಾನ್

ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ರಸದೌತಣ ನೀಡಲು ಬಿಸಿಸಿಐ ಭರ್ಜರಿ ಪ್ಲಾನ್ ಮಾಡುತ್ತಿದೆ. ಬೌಂಡರಿ ಸಿಕ್ಸರ್ ಸುರಿಮಳೆ, ವಿಕೆಟ್ ಅಬ್ಬರ ಸೇರಿದಂತೆ ಟೂರ್ನಿಯ ರೋಚಕತೆ ಹೆಚ್ಚಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. 2028ರಿಂಗದ ಹೊಸ ರೂಪದಲ್ಲಿ ಐಪಿಎಲ್ ನಡೆಯಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories