Published : Jul 01, 2024, 04:41 PM ISTUpdated : Jul 01, 2024, 05:04 PM IST
ಭಾರತ ಟಿ20 ವರ್ಲ್ಡ್ ಕಪ್ ಗೆದ್ದ ಬೆನ್ನಲ್ಲೇ ತಂಡದ ಮೂರು ಹಿರಿಯ ಸ್ಟಾರ್ ಆಟಗಾರರು ಟಿ20 ಫಾರ್ಮಟ್‌ನ ಅಂತಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಇದರಲ್ಲಿ ತಂಡದ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇಜಾ ಕೂಡ ಒಬ್ಬರು. ಇದರ ನಡುವೆ ಜಡೇಜಾ ಅವರ ನೆಟ್ವರ್ತ್, IPL ಸಂಬಳ, ಕಾರುಗಳು ಮತ್ತು ಆಸ್ತಿಯ ಮಾಹಿತಿಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಹಾಗದರೆ ರವೀಂದ್ರ ಜಡೇಜಾರ ಅವರ ನೆಟ್ವರ್ತ್ ಎಷ್ಷು ಗೊತ್ತಾ?
ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ವಾರ್ಷಿಕ ಆದಾಯ ಈ ವರ್ಷಗಳಲ್ಲಿ ಸಿಕ್ಕಾಪಟ್ಟೆ ಏರಿದೆ. ಹಾಗಾದರೆ ಆಟಗಾರನ ನೆಟ್‌ವರ್ತ್ ಎಷ್ಷು ಗೊತ್ತಾ?
210
2024ರ ಹೊತ್ತಿಗೆ, ಜಡೇಜಾ ಅವರ ನಿವ್ವಳ ಮೌಲ್ಯ ಸುಮಾರು 15 ಮಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಂದರೆ 120 ಕೋಟಿ ರೂಪಾಯಿಗಳು.
310
2023 - 24 BCCI ವಾರ್ಷಿಕ ಒಪ್ಪಂದದ A+ ಪಟ್ಟಿಯಲ್ಲಿ ಜಡೇಜಾ ಇದ್ದಾರೆ. ಆದ್ದರಿಂದ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲು ಜಡೇಜಾ ಅವರ ವಾರ್ಷಿಕ ವೇತನವು 7 ಕೋಟಿ ರೂ ಪಡೆಯುತ್ತಾರೆ.
410
ರವೀಂದ್ರ ಜಡೇಜಾ ಅವರು ಭಾರತೀಯ ತಂಡ ಮತ್ತು ಐಪಿಎಲ್‌ಗೆ ನೀಡಿದ ಕೊಡುಗೆಗಾಗಿ ಸುಮಾರು 20 ಕೋಟಿ ರೂಪಾಯಿ ವಾರ್ಷಿಕ ವೇತನ ಪಡೆಯುತ್ತಾರೆ.
510
ASICS, ಕಿನಾರಾ ಕ್ಯಾಪಿಟಲ್, SWOTT, ಲೈಫ್ ಓಕೆ, ಇನ್‌ಕ್ರೆಡಿಬಲ್ ಇಂಡಿಯಾ, MY11 ಸರ್ಕಲ್, Myntra, MRF ಭಾರತ್ಪೆ, ಝೆವೆನ್ ಮತ್ತು ಬಜಾಜ್ ಗ್ರಾಹಕ ಸೇವೆ ಸೇರಿದಂತೆ ಹಲವು ಅನುಮೋದನೆಗಳನ್ನು ಜಡೇಜಾ ಹೊಂದಿದ್ದಾರೆ.
610
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫ್ರಾಂಚೈಸಿ ಜೊತೆ ಒಪ್ಪಂದ ಮಾಡಿಕೊಂಡ ನಂತರ ಜಡೇಜಾ ಅಹಮದಾಬಾದ್‌ನಲ್ಲಿ ಜಾಗವನ್ನು ಕೊಂಡಿದ್ದಾರೆ. ಅಲ್ಲಿ ಅವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಿದ್ದು, ಪ್ರಸ್ತುತ ಮನೆ 8 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
710
ತಮ್ಮ ಐಪಿಎಲ್ ವೃತ್ತಿಜೀವನದುದ್ದಕ್ಕೂ ಜಡೇಜಾ ಅವರು ಐಪಿಎಲ್ ಒಪ್ಪಂದಗಳ ಮೂಲಕ ಒಟ್ಟು 109.1 ಕೋಟಿ ಗಳಿಸಿದ್ದಾರೆ. ಇದು ಲೀಗ್‌ನಲ್ಲಿ ಅವರ ಮೌಲ್ಯ ಮತ್ತು ಪ್ರಭಾವವನ್ನು ತಿಳಿಸುತ್ತದೆ.
810
ಜಡೇಜಾ ಅವರು ಆಡಿ ಎ4, ಆಡಿ ಕ್ಯೂ7, ಬಿಎಂಡಬ್ಲ್ಯು ಎಕ್ಸ್1 ಮತ್ತು ರೋಲ್ಸ್ ರಾಯ್ಸ್ ಸೇರಿ ಕೆಲವು ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ.
910
ಜಡೇಜಾ ಜಾಮ್‌ನಗರದಲ್ಲಿ ಭವ್ಯವಾದ ಮತ್ತು ಐಷಾರಾಮಿ ಬಂಗಲೆ ಸೇರಿದಂತೆ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ಈ ಆಸ್ತಿಯು 120 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದ್ದು, ಇವರು ಹೊಂದಿರುವ ಆಸ್ತಿಗಳಲ್ಲಿ ಹೆಚ್ಚಿನ ಬೆಲೆಯುಳ್ಳದ್ದಾಗಿದೆ.
1010
ಜಡೇಜಾ ಅವರು ಜಡ್ಡುಸ್ ಫುಡ್ ಫೀಲ್ಡ್ ಎಂಬ ರೆಸ್ಟೋರೆಂಟ್‌ಗಳ ಸರಪಳಿಯನ್ನು ಹೊಂದಿದ್ದಾರೆ, ಇದು ಅವರ ಉದ್ಯಮಶೀಲತಾ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.