ಏರ್‌ಶೋ ವೇಳೆ ಸೂರ್ಯಕಿರಣ್‌ ಕಾಕ್‌ಪಿಟ್‌ನಿಂದ ಹೀಗೆ ಕಾಣ್ತಿತ್ತು ವಿಶ್ವಕಪ್‌ ಫೈನಲ್‌ ಪಂದ್ಯದ ಸ್ಟೇಡಿಯಂ!

First Published | Nov 19, 2023, 6:24 PM IST

ವಿಶ್ವಕಪ್‌ ಫೈನಲ್‌ ಪಂದ್ಯಕ್ಕೂ ಮುನ್ನ ಭಾರತೀಯ ವಾಯುಸೇನೆ ನರೇಂದ್ರ ಮೋದಿ ಸ್ಟೇಡಿಯಂನ ಆಗಸದಲ್ಲಿ ನಡೆಸಿದ ಏರ್‌ಶೋ ಪ್ರೇಕ್ಷಕರಿಗೆ ಮುದ ನೀಡಿತು. ಇದರ ಚಿತ್ರಗಳನ್ನು ಸೂರ್ಯಕಿರಣ್‌ ಟೀಮ್‌ ಹಂಚಿಕೊಂಡಿದೆ.

ತೀರಾ ಅಪರೂಪ ಎನ್ನುವಂತೆ ಈ ಬಾರಿ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಭಾರತೀಯ ವಾಯುಸೇನೆಯ ವತಿಯಿಂದ ಏರ್‌ಶೋ ನಡೆಸಲಾಗಿತ್ತು.

ಆಗಸದಲ್ಲಿ ತಮ್ಮ ಚಮತ್ಕಾರದ ಪ್ರದರ್ಶನದ ಕಾರಣಕ್ಕೆ ಹೆಸರುವಾಸಿಯಾಗಿರುವ ಐಎಎಫ್‌ನ ಸೂರ್ಯಕಿರಣ್‌ ಅಕ್ರೋಬ್ಯಾಟಿಕ್‌ ಟೀಮ್‌ ಈ ಬಾರಿ ಏರ್‌ಶೋ ನಡೆಸಿಕೊಟ್ಟಿತು.

Latest Videos


ಗುಜರಾತ್‌ ಸರ್ಕಾರ ಹಾಗೂ ಸ್ಥಳೀಯ ಸರ್ಕಾರದ ಅನುಮತಿಯೊಂದಿಗೆ ನಡೆದ ವಿಶ್ವಕಪ್‌ ಫೈನಲ್‌ ಏರ್‌ಶೋನಲ್ಲಿ ಒಟ್ಟು 9 ವಿಮಾನಗಳು ಭಾಗವಹಿಸಿದ್ದವು. 

ಸೂರ್ಯಕಿರಣ್‌ ಆಗಸದಲ್ಲಿ ತಮ್ಮ ಚಮತ್ಕಾರವನ್ನು ತೋರಿಸುತ್ತಿದ್ದರೆ, ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರು ಹಾಗೂ ವಿಶ್ಲೇಷಕರು ಕೂಡ ಇದನ್ನು ನೋಡುತ್ತಾ ನಿಂತುಬಿಟ್ಟಿದ್ದರು.

ಇದರ ನಡುವೆ ಸೂರ್ಯಕಿರಣ್‌ ಆಕ್ರೋಬ್ಯಾಟಿಕ್‌ ಟೀಮ್‌ ಕೂಡ ಕಾಕ್‌ಪಿಟ್‌ನಿಂದ ಫೈನಲ್‌ ಪಂದ್ಯದ ವೇಳೆ ಸ್ಟೇಡಿಯಂ ಹೇಗೆ ಕಾಣುತ್ತಿತ್ತು ಎನ್ನುವ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಸೂರ್ಯಕಿರಣ್ ವಿಮಾನದ ಕಾಕ್‌ಪಿಟ್‌ನಿಂದ ತೆಗೆದ ಚಿತ್ರಗಳನ್ನು ಗುಜರಾತ್‌ ಟೂರಿಸಂ ತನ್ನ ಟ್ವಿಟರ್‌ ಪೇಜ್‌ನಲ್ಲಿ ಹಂಚಿಕೊಂಡಿದೆ. 

ಒಟ್ಟು ನಾಲ್ಕು ಚಿತ್ರಗಳನ್ನು ಭಿನ್ನ ಭಿನ್ನ ಕೋನದಿಂದ ತೆಗೆದಿದ್ದು, ವಿಶ್ವಕಪ್‌ ಫೈನಲ್‌ ಪಂದ್ಯದಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಹೇಗೆ ಕಾಣುತ್ತಿತ್ತು ಎನ್ನುವುದನ್ನು ತಿಳಿಸಲಾಗಿದೆ.

ಸ್ಟೇಡಿಯಂನ ಬಾನಿನಲ್ಲಿ ಒಟ್ಟು 30 ನಿಮಿಷಗಳ ಕಾಲ ಸೂರ್ಯಕಿರಣ್‌ ವಿಮಾನಗಳು ತನ್ನ ಚಮತ್ಕಾರ ಮೆರೆದವು. ವಿಶ್ವಕಪ್‌ ಪಂದ್ಯಕ್ಕೆ ಏರ್‌ಶೋ ನಡೆದಿರುವುದು ಇದು ಮೊದಲ ಬಾರಿಯಾಗಿದೆ.

ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ತಮ್ಮ ಪುತ್ರನೊಂದಿಗೆ ವಿಶ್ವಕಪ್‌ ಫೈನಲ್‌ ವೇಳೆ ಸೂರ್ಯಕಿರಣ್‌ ವಿಮಾನದ ಪೈಲಟ್‌ಗಳನ್ನು ಭೇಟಿಯಾಗಿ ತೆಗೆಸಿಕೊಂಡ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

click me!