ಒಂದು ವಿಕೆಟ್‌ಗೆ ₹4.50 ಕೋಟಿ..! ಈ ಬಾರಿಯ ಐಪಿಎಲ್‌ನ ಟಾಪ್-5 ದುಬಾರಿ ಬೌಲರ್‌ಗಳು ಇವರೇ ನೋಡಿ! ಬುಮ್ರಾಗೆ ಎಷ್ಟನೇ ಸ್ಥಾನ?

Published : May 27, 2026, 05:47 PM IST

2026ರ ಐಪಿಎಲ್ ಟೂರ್ನಿಯಲ್ಲಿ ಕೆಲವು ಸ್ಟಾರ್ ಬೌಲರ್‌ಗಳ ವೈಫಲ್ಯ ತಂಡದ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ. ಕೆಲವು ಸ್ಟಾರ್ ಬೌಲರ್‌ಗಳು ಲೀಗ್ ಹಂತದಲ್ಲಿ ವಿಕೆಟ್ ಕಬಳಿಸಲು ಪರದಾಡಿದ್ದು, ತಂಡದ ನಾಕೌಟ್ ಕನಸನ್ನು ನುಚ್ಚುನೂರು ಮಾಡಿತು. ಐಪಿಎಲ್‌ನ ಟಾಪ್-5 ದುಬಾರಿ ಬೌಲರ್‌ಗಳು ಯಾರು ನೋಡೋಣ ಬನ್ನಿ. 

PREV
16
IPL 2026 ಟಾಪ್ 5 ದುಬಾರಿ ಬೌಲರ್‌ಗಳು

19ನೇ ಐಪಿಎಲ್ ಟೂರ್ನಿಯಲ್ಲಿ ಹಲವು ಯುವ ಹಾಗೂ ಅನುಭವಿ ಬೌಲರ್‌ಗಳು ಮಿಂಚಿದ್ದಾರೆ. ಆದರೆ ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕೆಲವು ಸ್ಟಾರ್ ಬೌಲರ್‌ಗಳು ವಿಕೆಟ್ ಕಬಳಿಸಲು ಅಕ್ಷರಶಃ ಪರದಾಡಿದ್ದಾರೆ. ಬನ್ನಿ ನಾವಿಂದು ತಮ್ಮ ತಂಡಗಳಿಗೆ ಕೋಟ್ಯಾಂತರ ರುಪಾಯಿ ಹೊರೆ ಎನಿಸಿದ ಟಾಪ್-5 ಬೌಲರ್‌ಗಳು ಯಾರು ಎನ್ನುವುದನ್ನು ನೋಡೋಣ.

26
1. ಜಸ್ಪ್ರೀತ್ ಬುಮ್ರಾ:

ಮುಂಬೈ ಇಂಡಿಯನ್ಸ್ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ 18 ಕೋಟಿ ರುಪಾಯಿ ನೀಡಿ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿತ್ತು. ಆದರೆ ಈ ಸೀಸನ್‌ನಲ್ಲಿ ಬುಮ್ರಾ ಕೇವಲ 4 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಹೀಗಾಗಿ ಬುಮ್ರಾ ಕಬಳಿಸಿದ ಒಂದು ವಿಕೆಟ್‌ನ ಬೆಲೆ 4.50 ಕೋಟಿ ರುಪಾಯಿಗಳು.

36
2. ಯುಜುವೇಂದ್ರ ಚಹಲ್:

ಪಂಜಾಬ್ ಕಿಂಗ್ಸ್‌ ತಂಡದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಹಲ್ 2026ರ ಐಪಿಎಲ್ ಟೂರ್ನಿಯಲ್ಲಿ ಕೇವಲ 12 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಪಂಜಾಬ್ ಫ್ರಾಂಚೈಸಿ 18 ಕೋಟಿ ರುಪಾಯಿ ನೀಡಿ ಚಹಲ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಚಹಲ್ ಕಬಳಿಸಿದ ಒಂದು ವಿಕೆಟ್ ಮೌಲ್ಯ ಬರೋಬ್ಬರಿ 1.50 ರುಪಾಯಿ.

46
3. ಟಿ. ನಟರಾಜನ್:

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತಂಗವೇಲು ನಟರಾಜನ್‌ಗೆ 10.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಈ ಸೀಸನ್‌ನಲ್ಲಿ ನಟರಾಜನ್ ಕೇವಲ 5 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ನಟರಾಜನ್ ಕಬಳಿಸಿದ ಒಂದು ವಿಕೆಟ್‌ಗೆ ಡೆಲ್ಲಿ ಫ್ರಾಂಚೈಸಿ 2.15 ಕೋಟಿ ರುಪಾಯಿ ಖರ್ಚು ಮಾಡಿದೆ.

56
4. ಕ್ಯಾಮರೋನ್ ಗ್ರೀನ್:

ಆಸೀಸ್ ಮೂಲದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು 25.20 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಈ ಆಲ್ರೌಂಡರ್ ಕೆಕೆಆರ್‌ ಪರ ಕೇವಲ 7 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಹೀಗಾಗಿ ಗ್ರೀನ್ ಕಬಳಿಸಿದ ಒಂದು ವಿಕೆಟ್ ಮೌಲ್ಯ ಬರೋಬ್ಬರಿ 3.60 ಕೋಟಿ ರುಪಾಯಿಗಳಾಗಿದೆ.

66
5. ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಫ್ರಾಂಚೈಸಿ 16.35 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಆದರೆ ಪಾಂಡ್ಯ ಕೇವಲ 4 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಹೀಗಾಗಿ ಮುಂಬೈ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಕಬಳಿಸಿದ ಒಂದು ವಿಕೆಟ್‌ಗೆ ತಲಾ 4.09 ಕೋಟಿ ರುಪಾಯಿ ಖರ್ಚು ಮಾಡಿತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories