Yuzvendra Chahal Opens Up on Quitting Alcohol After Divorce 2026ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಭಿಯಾನ ಲೀಗ್ ಹಂತದಲ್ಲೇ ಮುಕ್ತಾಯವಾಗಿದೆ. ಪಂಜಾಬ್ ಕಿಂಗ್ಸ್ ಕ್ರಿಕೆಟಿಗ ಯುಜುವೇಂದ್ರ ಚಹಲ್ ತಮ್ಮ ಖಾಸಗಿ ಬದುಕಿನ ಅತ್ಯಂತ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಮೊದಲ ಏಳು ಪಂದ್ಯಗಳ ಪೈಕಿ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೇರುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಇದಾದ ಬಳಿಕ ಸತತ ಆರು ಸೋಲು ಕಾಣುವ ಮೂಲಕ ನಾಕೌಟ್ ಹಂತಕ್ಕೇರುವ ಅವಕಾಶವನ್ನು ಕೈಚೆಲ್ಲಿತು. ಇನ್ನು ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್, ತಮ್ಮ ಖಾಸಗಿ ಬದುಕಿನ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
26
ವೈವಾಹಿಕ ಜೀವನದಿಂದ ಬೇಸತ್ತಿದ್ದ ಚಹಲ್
ಧನಶ್ರೀ ವರ್ಮಾ ಜತೆಗೆ ದಾಂಪತ್ಯ ಜೀವನ ಬಿರುಕು ಬಿಟ್ಟ ಬಳಿಕ ಚಹಲ್-ಧನಶ್ರೀ ಪರಸ್ಪರ ಸಮ್ಮತಿ ಮೇರೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. ಇದಾದ ಬಳಿಕ ಈ ಜೋಡಿ ಪರೋಕ್ಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಮಾಡಿಕೊಂಡಿಕೊಂಡಿದ್ದರು. ಇದೆಲ್ಲದರ ನಡುವೆ ಯುಜುವೇಂದ್ರ ಚಹಲ್ ತಾವು ಮದ್ಯ ವ್ಯಸನಿಯಾಗಿದ್ದೆ ಎನ್ನುವ ವಿಚಾರವನ್ನು ಪಾಡ್‌ಕಾಸ್ಟ್‌ವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.
36
ಆಲ್ಕೋಹಾಲ್ ತ್ಯಜಿಸಿದ ಬಳಿಕ ಜೀವನದಲ್ಲಾದ ಬದಲಾವಣೆಗಳು
ಯುಜುವೇಂದ್ರ ಚಹಲ್ ತಾವು ಎಣ್ಣೆ ಹೊಡೆಯುವುದನ್ನು ಬಿಟ್ಟ ಬಳಿಕ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಚಹಲ್, ಹರ್ಲೀನ್ ಡಿಯೊಲ್ ಜತೆಗಿನ ಪಂಜಾಬ್ ಕಿಂಗ್ಸ್ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 'ಕ್ಯಾಂಡೀಡ್ ವಿಥ್ ಕಿಂಗ್ಸ್' ಪಾಡ್‌ಕಾಸ್ಟ್‌ನಲ್ಲಿ ತಮ್ಮ ಖಾಸಗಿ ಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
'ಕ್ಯಾಂಡೀಡ್ ವಿಥ್ ಕಿಂಗ್ಸ್' ಪಾಡ್‌ಕಾಸ್ಟ್‌ನಲ್ಲಿ ಚಹಲ್ ಮುಕ್ತ ಮಾತು
'ಕ್ಯಾಂಡೀಡ್ ವಿಥ್ ಕಿಂಗ್ಸ್' ಪಾಡ್‌ಕಾಸ್ಟ್‌ನಲ್ಲಿ ಯುಜುವೇಂದ್ರ ಚಹಲ್, ಮದ್ಯಪಾನ ತ್ಯಜಿಸಿದ್ದು, ಡ್ರಿಪ್ರೆಸ್ಸನ್ ವಿರುದ್ದ ಹೋರಾಡಿದ್ದು ಹಾಗೂ ಕ್ರಿಕೆಟ್ ಕುರಿತಾದ ಕೆಲವೊಂದು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಮೆಲುಕು ಹಾಕಿದ್ದಾರೆ.
56
ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ ಎಂದ ಚಹಲ್
ಪಾಡ್‌ಕಾಸ್ಟ್‌ನ ಆರಂಭದಲ್ಲೇ ಹರ್ಲೀನ್ ಡಿಯೊಲ್, ಚಹಲ್‌ಗೆ ನೀವು ಎಣ್ಣೆ ಹೊಡೆಯುವುದನ್ನು ಬಿಟ್ಟಿದ್ದೀರಾ ಅಲ್ವಾ ಎಂದು ಪ್ರಶ್ನಿಸುತ್ತಾರೆ. ಆಗ ಯುಜಿ, ಹೌದು, ಇದು ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ಹೇಳಿದ್ದಾರೆ. ಎಣ್ಣೆ ಹೊಡೆಯುವುದನ್ನು ಬಿಟ್ಟ ಬಳಿಕ ನನ್ನ ಜೀವನವೂ ತುಂಬಾ ಬದಲಾಯಿತು. ನಾನೀಗ ನನ್ನ ಕುಟುಂಬ ಹಾಗೂ ಸ್ನೇಹಿತರ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ
66
IPL ಇತಿಹಾಸದ ಅತ್ಯಂತ ಯಶಸ್ವಿ ಸ್ಪಿನ್ನರ್ ಚಹಲ್
2026ರ ಐಪಿಎಲ್ ಟೂರ್ನಿಯಲ್ಲಿ ಯುಜುವೇಂದ್ರ ಚಹಲ್ ಪ್ರದರ್ಶನ ಸಾಧಾರಣವಾಗಿತ್ತು. ಪಂಜಾಬ್ ಕಿಂಗ್ಸ್ ಪರ ಆಡಿದ 14 ಪಂದ್ಯಗಳಲ್ಲಿ ಕೇವಲ 12 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಇನ್ನು ಐಪಿಎಲ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಹೆಗ್ಗಳಿಕೆ ಚಹಲ್ ಅವರದ್ದು. ಚಹಲ್ ಐಪಿಎಲ್‌ನಲ್ಲಿ ಒಟ್ಟು 231 ವಿಕೆಟ್ ಕಬಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.