ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಟಾಪ್-10 ಟೆಸ್ಟ್ ವೇಗದ ಬೌಲರ್ ಆಯ್ಕೆ ಮಾಡಿದ ಸ್ಟುವರ್ಟ್ ಬ್ರಾಡ್; ಲಿಸ್ಟ್‌ನಲ್ಲಿವೆ ಅಚ್ಚರಿ ಹೆಸರು..!

Published : Sep 07, 2026, 01:24 PM IST

ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಇದೀಗ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಟೆಸ್ಟ್ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಬ್ರಾಡ್ ಆಯ್ಕೆ ಮಾಡಿದ ಟಾಪ್-10 ಲಿಸ್ಟ್‌ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ ಬನ್ನಿ.

PREV
16
ಸಾರ್ವಕಾಲಿಕ ಶ್ರೇಷ್ಠ ಟಾಪ್-10 ಟೆಸ್ಟ್ ವೇಗಿಗಳನ್ನು ಆಯ್ಕೆ ಮಾಡಿದ ಬ್ರಾಡ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಷ್ಟೇ ಬೌಲರ್‌ಗಳು ಪ್ರಭಾವ ಬೀರಿದ್ದಾರೆ. ಅದರಲ್ಲೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಲವಾರ ವೇಗದ ಬೌಲರ್‌ಗಳು ದಶಕಗಳ ಕಾಲ ತಮ್ಮ ತಂಡವನ್ನು ಪ್ರತಿನಿಧಿಸುವ ಮೂಲಕ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಇದೆಲ್ಲದರ ನಡುವೆ ಇಂಗ್ಲೆಂಡ್ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಸಾರ್ವಕಾಲಿಕ ಶ್ರೇಷ್ಠ ಟಾಪ್-10 ಟೆಸ್ಟ್ ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿದ್ದು, ಇದೀಗ ಹೊಸ ಚರ್ಚೆ ಹುಟ್ಟುಹಾಕಿದೆ.

26
ಟಾಪ್ 10 ಪಟ್ಟಿಯಲ್ಲಿ ಮಿಚೆಲ್ ಸ್ಟಾರ್ಕ್‌ಗಿಲ್ಲ ಸ್ಥಾನ

ಇನ್ನು ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪೈಕಿ ಟಾಪ್-10 ಪಟ್ಟಿಯೊಳಗೆ ಸ್ಥಾನ ಪಡೆದ ಆಸ್ಟ್ರೇಲಿಯಾದ ಅನುಭವಿ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಕೈಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಂತಹ ಅಪಾಯಕಾರಿ ಬೌಲರ್ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

36
ಚರ್ಚೆಗೆ ಗ್ರಾಸವಾದ ಸ್ಟುವರ್ಟ್ ಬ್ರಾಡ್ ಲಿಸ್ಟ್

ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಮಾತ್ರವಲ್ಲದೇ ಕೆರಿಬಿಯನ್ ದಿಗ್ಗಜ ವೇಗಿ ಮಾಲ್ಕಮ್ ಮಾರ್ಷಲ್, ಅಲನ್ ಡೊನಾಲ್ಡ್, ಕಪಿಲ್ ದೇವ್ ಅವರಂತವ ವೇಗಿಗಳನ್ನು ಕೈಬಿಟ್ಟಿರುವುದು ಕೂಡಾ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

46
ಜೇಮ್ಸ್ ಆಂಡರ್‌ಸನ್‌ಗೆ ಟಾಪ್-1 ಸ್ಥಾನ ನೀಡಿದ ಬ್ರಾಡ್

ಇನ್ನು ಒಂದು ದಶಕದ ಕಾಲ ತಮ್ಮ ಜತೆ ಇಂಗ್ಲೆಂಡ್ ವೇಗದ ದಾಳಿಯ ಮುಂಚೂಣಿ ವಹಿಸಿದ್ದ ದಿಗ್ಗಜ ವೇಗಿ ಜೇಮ್ಸ್ ಆಂಡರ್‌ಸನ್‌ಗೆ ಬ್ರಾಡ್ ಮೊದಲ ಸ್ಥಾನ ನೀಡಿದ್ದಾರೆ. ಬ್ರಾಡ್ 188 ಟೆಸ್ಟ್ ಪಂದ್ಯಗಳನ್ನಾಡಿ 704 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪೈಕಿ ಒಟ್ಟಾರೆ ಮೂರನೇ ಹಾಗೂ ವೇಗದ ಬೌಲರ್‌ಗಳ ಲಿಸ್ಟ್‌ನಲ್ಲಿ ಆಂಡರ್‌ಸನ್ ಮೊದಲ ಸ್ಥಾನ ಪಡೆದಿದ್ದಾರೆ.

56
ಏಕೈಕ ಭಾರತೀಯ ವೇಗಿಗೆ ಸ್ಥಾನ

ಇನ್ನುಳಿದಂತೆ ಆಸೀಸ್ ವೇಗದ ಬೌಲಿಂಗ್ ದಂತಕಥೆ ಗ್ಲೆನ್ ಮೆಗ್ರಾಥ್‌ಗೆ ಎರಡನೇ, ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾಗೆ ಮೂರನೇ ಸ್ಥಾನ ನೀಡಿದ್ದಾರೆ. ಇದಾದ ಬಳಿಕ ಕ್ರಮವಾಗಿ ಶಾನ್ ಪೊಲ್ಲಾಕ್, ಕರ್ಟ್ಲಿ ಆಂಬ್ರೋಸ್, ಡೇಲ್ ಸ್ಟೇನ್, ವಾಸಿಂ ಅಕ್ರಂ, ಪ್ಯಾಟ್ ಕಮಿನ್ಸ್, ರಿಚರ್ಡ್ ಹ್ಯಾಡ್ಲಿ, ಮಿಚೆಲ್ ಜಾನ್ಸನ್ ಸ್ಥಾನ ಪಡೆದಿದ್ದಾರೆ.

66
ಸ್ಟುವರ್ಟ್ ಬ್ರಾಡ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಟಾಪ್-10 ಟೆಸ್ಟ್ ವೇಗದ ಬೌಲರ್‌ಗಳ ಪಟ್ಟಿ ಹೀಗಿದೆ:

1.ಜೇಮ್ಸ್ ಆಂಡರ್‌ಸನ್, 2.ಗ್ಲೆನ್ ಮೆಗ್ರಾಥ್, 3.ಜಸ್ಪ್ರೀತ್ ಬುಮ್ರಾ, 4.ಶಾನ್ ಪೊಲ್ಲಾಕ್, 5.ಕರ್ಟ್ಲಿ ಆಂಬ್ರೋಸ್, 6.ಡೇಲ್ ಸ್ಟೇನ್, 7.ವಾಸಿಂ ಅಕ್ರಂ, 8.ಪ್ಯಾಟ್ ಕಮಿನ್ಸ್, 9.ರಿಚರ್ಡ್ ಹ್ಯಾಡ್ಲಿ, 10.ಮಿಚೆಲ್ ಜಾನ್ಸನ್.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories