Cricket: ಹಿಟ್‌ಮ್ಯಾನ್ ಅಸಲಿ ವೈರಿ ಯಾರು? ಟೀಂ ಇಂಡಿಯಾದಲ್ಲಿ ನಡೀತಿರೋ ಈ ಕಳಪೆ ಗೇಮ್ ಪ್ಲಾನ್ ಏನು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್!

Published : Sep 04, 2026, 09:52 PM IST

ಸಂಪೂರ್ಣ ಫಿಟ್‌ನೆಸ್ ಹೊಂದಿಲ್ಲದ ಆಟಗಾರರನ್ನು ಪದೇ ಪದೇ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ ಎಂಬ ಟೀಕೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ತಂಡದ ನಾಯಕ ಹಾಗೂ ದಂತಕಥೆ ಬ್ಯಾಟ್ಸಮನ್ ರೋಹಿತ್ ಶರ್ಮಾ ಅವರನ್ನೇ ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿವೆ.

PREV
15
ರೋಹಿತ್‌ ಕುರಿತು ಅಪಪ್ರಚಾರ!

ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಅಭಿಮಾನಿಗಳಲ್ಲಿ ತೀವ್ರ ಗೊಂದಲ ಮತ್ತು ಆಕ್ರೋಶವನ್ನು ಹುಟ್ಟುಹಾಕಿವೆ. ಒಂದು ಕಡೆ ಗಾಯಗೊಂಡಿರುವ ಹಾಗೂ ಸಂಪೂರ್ಣ ಫಿಟ್‌ನೆಸ್ ಹೊಂದಿಲ್ಲದ ಆಟಗಾರರನ್ನು ಪದೇ ಪದೇ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ತಂಡದ ನಾಯಕ ಹಾಗೂ ದಂತಕಥೆ ಬ್ಯಾಟ್ಸಮನ್ ರೋಹಿತ್ ಶರ್ಮಾ ಅವರನ್ನೇ ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ. ಈ ಕುರಿತು ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

25
ಸೋಷಿಯಲ್ ಮೀಡಿಯಾದಲ್ಲಿ 'ಪಿಆರ್' ಯುದ್ಧ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶೇಕಡಾ 90 ರಷ್ಟು ಕ್ರಿಕೆಟ್ ಆಧಾರಿತ ಪೇಜ್‌ಗಳು 'ಪಿಆರ್' ಸಂಸ್ಥೆಗಳ ಹಿತಾಸಕ್ತಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ. ನಿರ್ದಿಷ್ಟ ಆಟಗಾರರ ಇಮೇಜ್ ಹೆಚ್ಚಿಸಲು ಮತ್ತು ಪ್ರಮುಖ ಆಟಗಾರರನ್ನು ಕೆಳಗೆ ತುಳಿಯಲು ನೆಗೆಟಿವ್ ಕ್ಯಾಂಪೇನ್ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ಸೆಲೆಕ್ಟರ್ಸ್ ರೋಹಿತ್ ಶರ್ಮಾ ಅವರನ್ನು ತಂಡದಿಂದ ಹೊರಗಿಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಬಿತ್ತರಿಸಲಾಗಿತ್ತು. ಹಿಂದೆ ವಿರೇಂದ್ರ ಸೆಹ್ವಾಗ್, ಅಂಬಟಿ ರಾಯುಡು ಹಾಗೂ ಶಿಖರ್ ಧವನ್ ಅವರನ್ನು ತಂಡದಿಂದ ಹೊರಹಾಕಿದಂತೆ, ಈ ಬಾರಿ ರೋಹಿತ್ ಸರದಿ ಎಂಬ ವದಂತಿಗಳನ್ನು ಹರಡಲಾಗಿತ್ತು.

35
ಬಿಸಿಸಿಐ ನೀಡಿದ ನೇರ ಉತ್ತರ!

ಈ ಎಲ್ಲಾ ಸುಳ್ಳು ಸುದ್ದಿಗಳಿಗೆ ಅಂತಿಮವಾಗಿ ಬಿಸಿಸಿಐ ಕಾರ್ಯದರ್ಶಿ ತೆರೆ ಎಳೆದಿದ್ದಾರೆ. ವದಂತಿ ಹರಡಿಸುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ ಪಂದ್ಯದಲ್ಲಷ್ಟೇ 138 ರನ್ ಬಾರಿಸಿ ಅದ್ಭುತ ಫಾರ್ಮ್‌ನಲ್ಲಿರುವ ಆಟಗಾರನ ಬಗ್ಗೆ ಇಂತಹ ಆಧಾರರಹಿತ ಪ್ರಶ್ನೆಗಳನ್ನು ಎತ್ತುವುದು ಸರಿಯಲ್ಲ. ರೋಹಿತ್ ಶರ್ಮಾ ತಂಡದಲ್ಲೇ ಇರಲಿದ್ದು, ಅವರ ಆಟ ಮುಂದುವರಿಯಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

45
ಅಂಕಿಅಂಶಗಳೇ ನೀಡಲಿವೆ ಉತ್ತರ!

39 ವರ್ಷದ ರೋಹಿತ್ ಶರ್ಮಾ ಕಳೆದ 30 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ ರನ್ ಗಳಿಸಿದ್ದು, ಇಂದಿಗೂ ವಿಶ್ವ ಕ್ರಿಕೆಟ್‌ನ ಟಾಪ್-5 ಬ್ಯಾಟರ್‌ಗಳ ಸಾಲಿನಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ತೂಕ ಇಳಿಸಿಕೊಂಡು, ತೀವ್ರ ಕಠಿಣ ಅಭ್ಯಾಸದಲ್ಲಿ ನಿರತರಾಗಿರುವ ಅವರು ಶತಕ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮೈದಾನದಲ್ಲೇ ಸಾಬೀತುಪಡಿಸಿದ್ದಾರೆ. ಹೀಗಿದ್ದರೂ, ಅವರನ್ನು ಹೊರಹಾಕುವ ಕುರಿತು ಸಭೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ ಎಂಬ ಸುದ್ದಿಗಳನ್ನು ಹರಡುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಅನುಮಾನಗಳನ್ನು ಹೆಚ್ಚಿಸಿದೆ.

55
ಗಮನಿಸಬೇಕಾದ ಅಂಶ!

ಇದು ಕೇವಲ ಒಬ್ಬ ರೋಹಿತ್ ಶರ್ಮಾ ಅವರ ಇಮೇಜ್‌ಗೆ ಸಂಬಂಧಿಸಿದ ವಿಚಾರವಲ್ಲ, ಬದಲಾಗಿ ಇಡೀ ಭಾರತೀಯ ಕ್ರಿಕೆಟ್ ವ್ಯವಸ್ಥೆಯ ಪಾರದರ್ಶಕತೆ ಮತ್ತು ಭವಿಷ್ಯದ ಪ್ರಶ್ನೆಯಾಗಿದೆ. ಮೈದಾನದಲ್ಲಿ ನಿರಂತರವಾಗಿ ರನ್ ಮಳೆ ಹರಿಸುತ್ತಿರುವ ನಾಯಕನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ 'ಪಿಆರ್ ವಾರ್' ನಡೆಸುವುದು ಕ್ರೀಡಾ ಸ್ಫೂರ್ತಿಗೆ ತಕ್ಕುದಲ್ಲ. ರೋಹಿತ್ ಶರ್ಮಾ ನೀಡಿರುವ ಅದ್ಭುತ ಪ್ರದರ್ಶನಗಳೇ ಇಂತಹ ವದಂತಿಗಳಿಗೆ ಸೂಕ್ತ ಉತ್ತರದಂತಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಹುಸಿ ವದಂತಿಗಳಿಗಿಂತ ಅರ್ಹತೆ ಮತ್ತು ಶ್ರಮಕ್ಕೆ ಆದ್ಯತೆ ಸಿಗಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories