ಕ್ರಿಕೆಟರ್‌ ಇರ್ಫಾನ್ ಪಠಾಣ್‌ ಅವರ ಪತ್ನಿಯ unseen photos

First Published Oct 30, 2021, 10:08 AM IST

ಭಾರತದ (Team India) ಮಾಜಿ ಫಾಸ್ಟ್‌ ಬೌಲರ್ ಇರ್ಫಾನ್ ಪಠಾಣ್ Irfan Pathan ಅವರು ಅಕ್ಟೋಬರ್ 27 ರಂದು ತಮ್ಮ 33 ವರ್ಷಗಳನ್ನು ಪೂರೈಸಿದ್ದಾರೆ. ಇರ್ಫಾನ್ ಪಠಾಣ್ ಕಪಿಲ್ ದೇವ್ (Kapil Dev) ನಂತರ ಭಾರತದ ಅತ್ಯಂತ ಯಶಸ್ವಿ ಆಲ್ ರೌಂಡರ್ (All Rounder). ಭಾರತ ಪರ ಅತಿವೇಗವಾಗಿ 100 ವಿಕೆಟ್‌ಗಳನ್ನು ಪಡೆದ ಆಟಗಾರ ಎನಿಸಿಕೊಂಡರು. ಇರ್ಫಾನ್ ತಮ್ಮ ಕ್ರೀಡೆಯ ಜೊತೆ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇರ್ಫಾನ್‌ ಅವರ ಲವ್‌ಲೈಫ್‌ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.

ಇರ್ಫಾನ್ ಪಠಾಣ್ ಅವರು ಗುಜರಾತ್‌ನ  (Gujarath) ಬರೋಡಾದ ಬಡ ಕುಟುಂಬದಲ್ಲಿ (Poor Family) 27 ಅಕ್ಟೋಬರ್ 1984 ರಂದು ಜನಿಸಿದರು. ಯೂಸುಫ್ ಮತ್ತು ಇರ್ಫಾನ್ ಅವರ ತಂದೆ ಮೆಹಮೂದ್ ಪಠಾಣ್ ಮಸೀದಿಯಲ್ಲಿ ಮುಝಿನ್ ಆಗಿದ್ದರು. ಇಬ್ಬರೂ ಸಹೋದರರ ಬಾಲ್ಯವು ಕಡು ಬಡತನದಲ್ಲಿ ಕಳೆದಿತ್ತು.

ಇರ್ಫಾನ್ ಪಠಾಣ್ 19 ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧದ ಟೆಸ್ಟ್ (Test Cricket) ಪಂದ್ಯದೊಂದಿಗೆ ತಮ್ಮ ವೃತ್ತಿಜೀವನವನ್ನು (Career) ಪ್ರಾರಂಭಿಸಿದರು. 2007 ರ T20 ವಿಶ್ವಕಪ್‌ನಲ್ಲಿ (World T20), ಇರ್ಫಾನ್ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನದ (Pakistan) ವಿರುದ್ಧ 16 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಇದಕ್ಕಾಗಿ ಇರ್ಫಾನ್ ‘ಪ್ಲೇಯರ್ ಆಫ್ ದಿ ಮ್ಯಾಚ್’ (Player of the Match) ಪ್ರಶಸ್ತಿಗೂ ಪಾತ್ರರಾದರು.

ಕ್ರಿಕೆಟ್ (Cricket) ಜೊತೆಗೆ, ಇರ್ಫಾನ್ ತಮ್ಮ ವೈಯಕ್ತಿಕ ಜೀವನವೂ (Personal Life)  ಸಾಕಷ್ಟು ಗಮನ ಸೆಳೆದಿದೆ. 2003 ರಲ್ಲಿ, ಪಠಾಣ್ ಅವರು ಆಸ್ಟ್ರೇಲಿಯಾದಲ್ಲಿದ್ದ ಭಾರತೀಯ ರಾಜತಾಂತ್ರಿಕರ ಮಗಳು ಶಿವಾಂಗಿ ದೇವ್ (Shivangi Dev) ಅವರನ್ನು ಭೇಟಿಯಾದರು ಮತ್ತು ಇಬ್ಬರೂ ಸುಮಾರು 10 ವರ್ಷಗಳ ಕಾಲ ಪರಸ್ಪರ ಸಂಬಂಧ ಹೊಂದಿದ್ದರು. ಆದರೆ ನಂತರ ಅವರು ಬೇರ್ಪಟ್ಟರು.

ಇದಾದ ನಂತರ ಇರ್ಫಾನ್ ಪಠಾಣ್ 2016 ರಲ್ಲಿ ಸಫಾ ಬೇಗ್ ಅವರನ್ನು ವಿವಾಹವಾದರು. ಇರ್ಫಾನ್ ಪಠಾಣ್ ಪತ್ನಿ ತುಂಬಾ ಸುಂದರಿ. ಅವರು ಟಾಪ್‌ ಮಾಡೆಲ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ ಮದುವೆಯ ನಂತರ ಗ್ಲಾಮರ್ ಲೋಕದಿಂದ (World of Glamour) ದೂರ ಉಳಿದರು ಮತ್ತು  ಅವರು ಹೆಚ್ಚಾಗಿ ಹಿಜಾಬ್ ಧರಿಸಿ ಕಾಣಿಸಿಕೊಳ್ಳುತ್ತಾರೆ.

ಹೈದರಾಬಾದ್ (Hederabad) ಮೂಲದ ಸಫಾ ಬೇಗ್ ಇರ್ಫಾನ್‌ಗಿಂತ 10 ವರ್ಷ ಚಿಕ್ಕವರು. ತಮ್ಮ ಬಾಲ್ಯವನ್ನು ಸೌದಿ ಅರೇಬಿಯಾ (Saudi Arabia)ಲ್ಲಿ ಕಳೆದಿರುವ ಸಫಾ ಮದುವೆಗೆ ಮುಂಚೆ ಅಪರೂಪವಾಗಿ ಹಿಜಾಬ್ ಧರಿಸುತ್ತಿದ್ದರು.

ಇರ್ಫಾನ್ ಅವರ ಬೇಗಂ ಸಫಾ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ. ಅವರ ಫೋಟೋಗಳು ಇಸ್ಟ್ ಏಷ್ಯಾದ (East Asia) ಅನೇಕ ದೊಡ್ಡ ಫ್ಯಾಷನ್ ಮ್ಯಾಗ್‌ಜೀನ್‌ಗಳಲ್ಲಿ ಪ್ರಕಟವಾಗಿದೆ. ಇದು ಇಂದಿಗೂ Google ನಲ್ಲಿ ಲಭ್ಯವಿದೆ .

ಇರ್ಫಾನ್ ಜೊತೆಗಿನ ಮದುವೆಯ ನಂತರ ಸಫಾ ಲೈಮ್‌ಲೈಟಿನಿಂದ ದೂರವಾಗಿದ್ದರು.ಆದರೆ ಕೆಲವು ಸಮಯದ ಹಿಂದೆ, ಇರ್ಫಾನ್ ತನ್ನ ಹೆಂಡತಿಯ ಬ್ಲರ್‌ ಫೋಟೋವನ್ನು ಹಂಚಿಕೊಂಡಿದ್ದರು ಮತ್ತು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು,  

' ನಾನು ನನ್ನ ಇಷ್ಟಪಟ್ಟು ಫೋಟೋವನ್ನು ಬ್ಲರ್ ಮಾಡಿದ್ದೇನೆ ಮತ್ತು ಅದು ಸಂಪೂರ್ಣವಾಗಿ ನನ್ನ ನಿರ್ಧಾರ. ಇದಕ್ಕೂ ಇರ್ಫಾನ್‌ಗೂ ಯಾವುದೇ ಸಂಬಂಧವಿಲ್ಲ' ಎಂದು ನಂತರ ಸಫಾ ಟ್ರೋಲರ್‌ಗಳಿಗೆ ತಕ್ಕ ಉತ್ತರವನ್ನು ನೀಡಿದರು.

ಇರ್ಫಾನ್ ಪಠಾಣ್ , ಅವರು ಭಾರತಕ್ಕಾಗಿ 29 ಟೆಸ್ಟ್ ಪಂದ್ಯಗಳಲ್ಲಿ 1105 ರನ್ ಮತ್ತು 100 ವಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ, ಅವರು 120 ODIಗಳಲ್ಲಿ 1544 ರನ್ ಮತ್ತು 173 ವಿಕೆಟ್‌ಗಳನ್ನು ಹೊಂದಿದ್ದಾರೆ. ಇದಲ್ಲದೇ 26 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 172 ರನ್ ಹಾಗೂ 28 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಅವರು 2021 ರ ಟಿ 20 ವಿಶ್ವಕಪ್‌ನಲ್ಲಿ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದಾರೆ.

click me!