ಅನುಷ್ಕಾರನ್ನು ಅನಗತ್ಯವಾಗಿ ಟ್ರೋಲ್ ಮಾಡ್ತಾರೆ ಕೊಹ್ಲಿ ಫ್ಯಾನ್ಸ್‌!

First Published | Oct 29, 2021, 11:38 AM IST

ಪ್ರಸ್ತುತ ದುಬೈನಲ್ಲಿ (Dubai) ನೆಡೆಯುತ್ತಿರುವ ಟಿ20 (T20) ವರ್ಲ್ಡ್‌ ಕಪ್‌ನ  (WOrld Cup) ಮೊದಲ ಪಂದ್ಯದಲ್ಲಿ  ಭಾರತವು (India) ಪಾಕಿಸ್ತಾನದ (pakistan) ವಿರುದ್ಧ ಸೋತಿದೆ. ಇದಕ್ಕಾಗಿ ಫ್ಯಾನ್ಸ್‌ ವಿರಾಟ್ ಕೊಹ್ಲಿ (Virat Kohli) ಅವರ ಪತ್ನಿ ಅನುಷ್ಕಾ ಶರ್ಮಾ (Anushka Shrama) ಅವರನ್ನು ಮತ್ತೊಮ್ಮೆ ಟ್ರೋಲ್‌ಗೆ ಗುರಿಯಾಗಿಸಿದ್ದಾರೆ. ಟೀಮ್‌ ಇಂಡಿಯಾದ (Team Indaia) ಸೋಲಿಗೆ ಅಥವಾ ವಿರಾಟ್ ಕೊಹ್ಲಿ ಅವರ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳು ಅನುಷ್ಕಾ ಶರ್ಮಾ ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿರುವುದು ಇದೇ ಮೊದಲಲ್ಲ. ಇದೇ ರೀತಿ ಅನುಷ್ಕಾ ಶರ್ಮಾ ಅವರನ್ನು ವಿರಾಟ್ ಕೊಹ್ಲಿ ಅಭಿಮಾನಿಗಳು ಅನಗತ್ಯವಾಗಿ ಟ್ರೋಲ್ ಮಾಡಿದ ಹಲವು  ಉದಾಹರಣೆಗಳಿವೆ. 

ಈ ಬಾರಿ ಅಕ್ಟೋಬರ್‌ 24ರಂದು ಕರ್ವಾಚೌತ್‌ ಹಬ್ಬದ ದೀನದಂದೇ ಇಂಡಿಯಾ ಪಾಕಿಸ್ತಾನ ನಡುವೆ ಮ್ಯಾಚ್‌ ಇತ್ತು. ಮತ್ತು ಭಾರತವು ಪಂದ್ಯವನ್ನು ಸೋತಿತು. ಕರ್ವಾ ಚೌತ್ ಉಪವಾಸ ಮಾಡದ ಅನುಷ್ಕಾರನ್ನು ದೂಷಿಸಿದ್ದಾರೆ ಮತ್ತು ಇದು ಭಾರತವು ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ  ಸೋಲಲು ಕಾರಣವಾಯಿತು ಎಂದು ನಟಿಯ ಮೇಲೆ ಸೋಶಿಯಲ್‌ ಮೀಡಿಯಾ ಯೂಸರ್ಸ್‌ ವಾಗ್ದಾಳಿ ನೆಡೆಸಿದ್ದಾರೆ.

ವಿರಾಟ್ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ 11 ಪಂಜಾಬ್ ನಡುವಿನ IPL ಪಂದ್ಯದ ವೇಳೆ, ಅನುಷ್ಕಾರ ಬಗ್ಗೆ ಸುನಿಲ್ ಗವಾಸ್ಕರ್ ಅವರ ಕಾಮೆಂಟ್ ಸಹ ತೀವ್ರ ಚರ್ಚೆಗೆ ಗುರಿಯಾಗಿತ್ತು ಮತ್ತು ಟ್ರೋಲ್‌ (Troll) ಆಗಿತ್ತು.

Tap to resize

'ಈ ಲಾಕ್‌ಡೌನ್‌ ವಿರಾಟ್‌ ಕೇವಲ ಅನುಷ್ಕಾರ ಬಾಲ್‌ಗಳ ಪ್ರಾಕ್ಟೀಸ್ ಮಾಡಿದ್ದಾರೆ', ಎಂದು  ಸುನಿಲ್ ಗವಾಸ್ಕರ್ (Sunil Gavaskar) ಹೇಳಿದರು. ನಂತರ ತಮ್ಮ ಕಾಮೆಂಟ್ ಅನುಷ್ಕಾ ಮತ್ತು ವಿರಾಟ್ ಕ್ರಿಕೆಟ್ ಆಡಿದ ಹಳೆಯ ವೀಡಿಯೋವನ್ನು ಆಧರಿಸಿದೆ, ಎಂದು ಗವಾಸ್ಕರ್ ಸ್ಪಷ್ಟಪಡಿಸಿದ್ದಾರೆ. 

ಭಾರತ (India) ತಂಡದ ಸೋಲಿನ ನಂತರ, ಸಾಮಾಜಿಕ ಮಾಧ್ಯಮದಲ್ಲಿ (Social Media) ಅನುಷ್ಕಾ ಶರ್ಮಾರ ಬಗ್ಗೆ ಅಸಹ್ಯ ಮೇಮ್‌ಗಳು ತುಂಬಿದ್ದವು. ಸೂಯಿ ಧಾಗಾ ಸಿನಿಮಾದ ನಟನೆಯ ಪಾತ್ರವನ್ನು ಕೊಹ್ಲಿಯ ಜೊತೆ ಫೋಟೋ ಮಾರ್ಫ್ ಮಾಡಲಾಗಿತ್ತು  ಮತ್ತು ಅವರನ್ನು ದುರಾದೃಷ್ಟ ಅಥವಾ ಬ್ಯಾಡ್‌ಲಕ್‌ ಎಂದು ಕರೆಯಲಾಯಿತು.  

2016 ರಲ್ಲಿ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮರ ರಿಲೆಷನ್‌ಶಿಪ್‌ (Relatinship) ಬ್ರೇಕ್‌ ಆಯಿತು ಎಂದು ವರದಿಗಳು ಬಂದಾಗ, ಅನುಷ್ಕಾ ಶರ್ಮಾ ಅವರೊಂದಿಗೆ ಇಲ್ಲದ ಕಾರಣ ವಿರಾಟ್‌ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಕೊಹ್ಲಿ ಫ್ಯಾನ್ಸ್‌ (Kohli Fans) ಕಾಮೆಂಟ್‌ ಮಾಡಿದ್ದರು. 
 

ಆದರೆ ವಿರಾಟ್ ಆ ಸಮಯದಲ್ಲಿ ಅನುಷ್ಕಾ ಶರ್ಮಾ ಅವರ ಬೆಂಬಲಕ್ಕೆ ನಿಂತರು ಮತ್ತು ಅನುಷ್ಕಾ ಶರ್ಮಾರನ್ನು ಟ್ರೋಲ್ ಮಾಡುತ್ತಿರುವ ಜನರಿಗೆ ನಾಚಿಕೆಯಾಗಬೇಕು. ಸ್ವಲ್ಪ ಕರುಣೆ ಇರಲಿ. ಅವಳು ಯಾವಾಗಲೂ ನನಗೆ ಪಾಸಿಟಿವಿಟಿ (Positivity) ಮಾತ್ರ ನೀಡುತ್ತಾಳೆ ಎಂದು ವಿರಾಟ್‌ ಹೇಳಿದ್ದರು.

2015ರ ವಿಶ್ವಕಪ್‌ನಲ್ಲಿ (World Cup) ಆಸ್ಟ್ರೇಲಿಯಾ (Australia) ವಿರುದ್ಧ ವಿರಾಟ್ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆಗಲೂ ಅನುಷ್ಕಾ ಶರ್ಮ ಅವರನ್ನು ದೂಷಿಸಲಾಯಿತು. ಸೋಶಿಯಲ್‌ ಮೀಡಿಯಾ ಯೂಸರ್ಸ್‌ ವಿರಾಟ್‌ ಕೊಹ್ಲಿ ಫೇಲ್ಯೂರ್‌ಗೆ ಅನುಷ್ಕಾರ ವಿರುದ್ಧ ಮಾತನಾಡಿದ್ದರು.

ಪ್ರತಿ ಬಾರಿ ಆರ್‌ಸಿಬಿ (RCB) ಕೆಟ್ಟ ಪ್ರದರ್ಶನ ನೀಡಿದ್ದಾಗ, ಅನುಷ್ಕಾ ಶರ್ಮಾ ಅವರನ್ನು ದೂಷಿಸಲಾಯಿತು ಮತ್ತು ಭಾರೀ ಪ್ರಮಾಣದಲ್ಲಿ ಟ್ರೋಲ್ ಮಾಡಲಾಯಿತು. ಪ್ರಸ್ತುತ ಟಿ20 ವರ್ಲ್ಡ್‌ಕಪ್‌ನಲ್ಲಿ (T20 World cup)  ಭಾರತವು (India) ಪಾಕಿಸ್ತಾನದ ವಿರುದ್ಧ ಸೋತ ನಂತರ ಅವರು ಮತ್ತೆ ಟ್ರೋಲ್ ಆಗಿದ್ದಾರೆ. 

Latest Videos

click me!