ಐಪಿಎಲ್‌ನಲ್ಲಿ ಫಾಸ್ಟೆಸ್ಟ್‌ ಅರ್ಧ ಸೆಂಚುರಿ ಬಾರಿಸಿದ ಕ್ರಿಕೆಟಿಗರಿವರು!

Suvarna News   | Asianet News
Published : May 05, 2021, 03:54 PM IST

ಐಪಿಎಲ್ 2021 ರ  ಮುಂಬೈ ಇಂಡಿಯನ್ಸ್ ಮತ್ತು  ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಮ್ಯಾಚ್‌ನಲ್ಲಿ  ನಾಲ್ಕು ವಿಕೆಟ್‌ಗಳಿಂದ ಮುಂಬೈ ತಂಡ ಜಯ ಗಳಿಸಿತು. ಮುಂಬೈನ ಕೀರನ್ ಪೊಲಾರ್ಡ್ 34 ಎಸೆತಗಳಲ್ಲಿ ಔಟಾಗದೆ 87 ರನ್ ಗಳಿಸಿ ಮುಂಬೈ ಟೀಮ್‌ನ ಅದ್ಭುತ ಗೆಲುವಿಗೆ ಕಾರಣವಾದರು. ಇದರ ಜೊತೆ ಅವರ ಹೆಸರು ಈ  ಸೀಸನ್‌ನಲ್ಲಿ ಐಪಿಎಲ್‌ನ ಅತಿ ವೇಗದ ಅರ್ಧ ಶತಕ ದಾಖಲೆಯಾಗಿದೆ. ಐಪಿಎಲ್ ಇತಿಹಾಸದಲ್ಲಿ ಯಾವ ಆಟಗಾರರು ಫಾಸ್ಟೆಸ್ಟ್‌ ಐವತ್ತು ರನ್‌ಗಳಿಸಿದ್ದಾರೆ ಎಂಬ ವಿವರ ಇಲ್ಲಿದೆ.  

PREV
110
ಐಪಿಎಲ್‌ನಲ್ಲಿ ಫಾಸ್ಟೆಸ್ಟ್‌ ಅರ್ಧ ಸೆಂಚುರಿ ಬಾರಿಸಿದ ಕ್ರಿಕೆಟಿಗರಿವರು!

ಕೆ. ಎಲ್. ರಾಹುಲ್‌:
14 ಎಸೆತಗಳಲ್ಲಿ ಈ ಸಾಧನೆ ತೋರಿದ ಭಾರತೀಯ ಆಟಗಾರ ಕೆ.ಎಲ್.ರಾಹುಲ್ ಅವರ ಹೆಸರಿನಲ್ಲಿ ಐಪಿಎಲ್‌ನ ಫಾಸ್ಟೆಸ್ಟ್‌ 50  ರನ್ ಗಳಿಸಿದ ದಾಖಲೆ ಇದೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧ  8 ಏಪ್ರಿಲ್ 2018 ರಂದು ಅತಿ ವೇಗದ 50 ರನ್ ಗಳಿಸಿದರು. ಈ ಪಂದ್ಯದಲ್ಲಿ ಅವರು 4 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 51 ರನ್ ಗಳಿಸಿದರು.

210

ಯೂಸುಫ್ ಪಠಾಣ್:
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ 2014ರ ಮೇ 24 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯೂಸುಫ್ ಪಠಾಣ್ ಈ ಲಿಸ್‌ಟ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಾಯದಿಂದ 72 ರನ್ ಗಳಿಸಿದರು ಪಠಾಣ್‌.

310

ಸುನಿಲ್ ನಾರಾಯಣ್:
ಕೆಕೆಆರ್ ಟೀಮ್‌ನ ಸುನಿಲ್ ನಾರಾಯಣ್ ಆರ್‌ಸಿಬಿ ವಿರುದ್ಧ 15 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. 7 ಮೇ 2017 ರಂದು ಅವರು ಬೆಂಗಳೂರು ವಿರುದ್ಧ 4 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 54 ರನ್ ಗಳಿಸಿದರು.

410

ಸುರೇಶ್ ರೈನಾ :
ಮಿಸ್ಟರ್‌ ಐಪಿಎಲ್ ಎಂದೇ ಜನಪ್ರಿಯವಾಗಿರುವ ಸುರೇಶ್ ರೈನಾರ  ಹೆಸರು ಸಹ ಈ ರೆಕಾರ್ಡ್‌ ಲಿಸ್ಟ್‌ನಲ್ಲಿದೆ.  ಐಪಿಎಲ್‌ನಲ್ಲಿ ಅತಿ ವೇಗದ 50 ರನ್‌ಗಳ ಗಳಿಸಿದವರಲ್ಲಿ  ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. 30 ಮೇ 2014ರಂದು ಪಂಜಾಬ್ ಕಿಂಗ್ಸ್ ವಿರುದ್ಧ 16 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದ ಈ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು 12 ಬೌಂಡರಿಗಳ ಸಹಾಯದಿಂದ 87 ರನ್ ಗಳಿಸಿದರು ರೈನಾ.

510

ಕ್ರಿಸ್ ಗೇಲ್:
ಯೂನಿವರ್ಸಲ್ ಬಾಸ್‌ ಕ್ರಿಸ್ ಗೇಲ್ ಏಪ್ರಿಲ್ 23, 2013ರಲ್ಲಿ 17 ಎಸೆತಗಳಲ್ಲಿ ಈ ದಾಖಲೆ ಮಾಡಿದ್ದರು. ಆರ್‌ಸಿಬಿ ಪರ ಆಡುವಾಗ ಈ ಇನ್ನಿಂಗ್ಸ್‌ನಲ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿ ಇವರಿಗೆ ಸೇರುತ್ತದೆ.  ಗೇಲ್ 17 ಸಿಕ್ಸರ್ ಮತ್ತು 12 ಬೌಂಡರಿಗಳ ಸಹಾಯದಿಂದ 175 ರನ್ ಗಳಿಸಿದರು.

610

ಹಾರ್ದಿಕ್ ಪಾಂಡ್ಯ:
ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು 2019ರ ಏಪ್ರಿಲ್ 28 ರಂದು ಈಡನ್ ಗಾರ್ಡನ್‌ನಲ್ಲಿ ಕೆಕೆಆರ್ ವಿರುದ್ಧ 17 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 9 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 91 ರನ್ ಗಳಿಸಿದರು.

710

ಕೀರನ್ ಪೊಲಾರ್ಡ್:
ಕೀರನ್ ಪೊಲಾರ್ಡ್ 2021 ರ ಮೇ 1 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫಾಸೆಸ್ಟ್‌  ಅರ್ಧಶತಕ ಬಾರಿಸಿದ್ದಾರೆ. ಅವರು 8 ಎಸೆತಗಳು ಮತ್ತು 4 ಬೌಂಡರಿಗಳ ಸಹಾಯದಿಂದ 17 ಎಸೆತಗಳಲ್ಲಿ ಹಾಫ್‌ ಸೆಂಚುರಿ ಮಾಡಿದ ಪೋಲಾರ್ಡ್‌ ಈ ಮ್ಯಾಚ್‌ನಲ್ಲಿ 87 ರನ್ ಗಳಿಸಿದರು.

810

ಆಡಮ್ ಗಿಲ್‌ಕ್ರಿಸ್ಟ್:
 ಆಡಮ್ ಗಿಲ್‌ಕ್ರಿಸ್ಟ್ ಅವರು ಮೇ 22, 2009  ದೆಹಲಿ ಕ್ಯಾಪಿಟಲ್ಸ್ ವಿರುದ್ಧ 17 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಮತ್ತು 10 ಬೌಂಡರಿಗಳ ಸಹಾಯದಿಂದ 85 ರನ್ ಗಳಿಸಿದ್ದಾರೆ.

910

ಕ್ರಿಸ್ ಮೋರಿಸ್‌:
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಕ್ರಿಸ್ ಮೋರಿಸ್ ಸಹ 27 ಏಪ್ರಿಲ್ 2016 ರಂದು 17 ಎಸೆತಗಳಲ್ಲಿ 50 ರನ್ ಗಳಿಸಿದರು.ಈ ಮ್ಯಾಚ್‌ನಲ್ಲಿ  ಅವರು 8 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ 82 ರನ್ ಗಳಿಸಿದರು. 

1010

ಕೋಲಸ್ ಪುರಾನ್:
ನಿಕೋಲಸ್ ಪುರಾನ್  ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್‌ನಲ್ಲಿ 17 ಎಸೆತಗಳಲ್ಲಿ 50 ರನ್ ಗಳಿಸಿದರು. ಅಕ್ಟೋಬರ್ 8, 2020 ರಂದು  ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಈ ಸಾಧನೆ ಮಾಡಿದ್ದರು. ಈ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 77 ರನ್ ಗಳಿಸಿದರು ಪುರಾನ್‌.

click me!

Recommended Stories