IPL 2021: ಒಂದು ಶತಕ: ಅಪರೂಪದ ದಾಖಲೆಗಳು ಕನ್ನಡಿಗ ಪಡಿಕ್ಕಲ್ ಪಾಲು..!
First Published | Apr 23, 2021, 4:08 PM ISTಬೆಂಗಳೂರು: ಕರ್ನಾಟಕದ ಯುವ ಪ್ರತಿಭೆ ದೇವದತ್ ಪಡಿಕ್ಕಲ್ ರಾಜಸ್ಥಾನ ರಾಯಲ್ಸ್ ವಿರುದ್ದ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸುವ ಮೂಲಕ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ನೀಡಿದ್ದ 178 ರನ್‌ಗಳ ಗುರಿ ಆರ್‌ಸಿಬಿ ಆರಂಭಿಕರಾದ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್‌ಗೆ ಸವಾಲೆನಿಸಲೇ ಇಲ್ಲ. ದೇವದತ್ ಪಡಿಕ್ಕಲ್ ಕೇವಲ 51 ಎಸೆತಗಳನ್ನು ಎದುರಿಸಿ ಅಜೇಯ ಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಡಿಕ್ಕಲ್ ಶತಕ ಬಾರಿಸಿದ ಬಳಿಕ ನಿರ್ಮಾಣವಾದ ಅಪರೂಪದ ದಾಖಲೆಗಳು ಇಲ್ಲಿವೆ ನೋಡಿ