ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ 8% ಕುಸಿತ! ದಿಢೀರ್ ಮೌಲ್ಯ ಕುಸಿತಕ್ಕೆ ಕಾರಣವೇನು?

Published : Oct 18, 2025, 11:50 AM IST

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಬ್ರ್ಯಾಂಡ್ ವ್ಯಾಲ್ಯೂ ಈ ವರ್ಷ 8% ಕುಸಿದಿದೆ. ಡಿ ಅಂಡ್ ಪಿ ಅಡ್ವೈಸರಿ ಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ, 2024ರಲ್ಲಿ 82,700 ಕೋಟಿ ಇದ್ದ ಐಪಿಎಲ್‌ನ ಬ್ರ್ಯಾಂಡ್ ವ್ಯಾಲ್ಯೂ 2025ರಲ್ಲಿ 76100 ಕೋಟಿಗೆ ಇಳಿದಿದೆ. ಯಾಕೆ ಹೀಗೆ ಎನ್ನುವುದನ್ನು ನೋಡೋಣ. 

PREV
17
ಕಳೆದೆರಡು ವರ್ಷದಲ್ಲಿ 16,000 ಕೋಟಿ ಮೌಲ್ಯ ಕಡಿಮೆ

ಕಳೆದ ಎರಡು ವರ್ಷದಲ್ಲಿ ವಿಶ್ವದ ಶ್ರೀಮಂತ ಟಿ20 ಲೀಗ್‌ನ ಮೌಲ್ಯ ಅಂದಾಜು 16,000 ಕೋಟಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

27
ಐಪಿಎಲ್‌ನ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ

ಆದರೆ ಐಪಿಎಲ್‌ನ ವೀಕ್ಷಕರು, ಫ್ರಾಂಚೈಸಿಗಳಿಗೆ ಸಿಗುತ್ತಿರುವ ಜಾಹಿರಾತುಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

37
ಜಿಯೋ ಸ್ಟಾರ್ ಸಂಸ್ಥೆಯು ಜಾಹೀರಾತು

ಇನ್ನು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಜಿಯೋ ಸ್ಟಾರ್ ಸಂಸ್ಥೆಯು ಜಾಹೀರಾತು ಮೂಲಕ ಅಂದಾಜು 4500 ಕೋಟಿ ರುಪಾಯಿ ಸಂಪಾದಿಸಿದೆ ಎನ್ನಲಾಗಿದೆ.

47
ಮೌಲ್ಯ ಕುಸಿತಕ್ಕೆ ಕಾರಣಗಳೇನು?

ಜಿಯೋ ಹಾಗೂ ಸ್ಟಾರ್ ಸ್ಪೋರ್ಟ್ಸ್ ವಿಲೀನಗೊಂಡ ಕಾರಣ ಮಾಧ್ಯಮ ಪ್ರಸಾರ ಹಕ್ಕಿ ಮಾರಾಟದಲ್ಲಿ ಈಗ ಸ್ಪರ್ಧೆಯೇ ಉಳಿದಿಲ್ಲ,

57
ಜಿಯೋಸ್ಟಾರ್‌ಗೆ ಪ್ರತಿಸ್ಪರ್ಧಿಯಿಲ್ಲ

ಜಿಯೋಸ್ಟಾರ್‌ಗೆ ಪ್ರತಿಸ್ಪರ್ಧಿಯಾಗಬಲ್ಲ ಮತ್ತೊಂದು ಸಂಸ್ಥೆ ಸದ್ಯಕ್ಕಂತೂ ಕಾಣುತ್ತಿಲ್ಲ, ಹೀಗಾಗಿ, ಪ್ರಸಾರ ಹಕ್ಕು ಮಾರಾಟ ವೇಳೆ ಎರಡು ಸಂಸ್ಥೆಗಳ ನಡುವೆ ಪೈಪೋಟಿ ಸೃಷ್ಟಿಸುವ ಅವಕಾಶ ಬಿಸಿಸಿಐಗಿಲ್ಲ, ಇದು ಬ್ರ್ಯಾಂಡ್ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣ.

67
ರಿಯಲ್ ಮನಿ ಗೇಮಿಂಗ್ ಆ್ಯಪ್‌ ಬ್ಯಾನ್

'ರಿಯಲ್ ಮನಿ ಗೇಮಿಂಗ್ ಆ್ಯಪ್‌ಗಳ ನಿಷೇಧದಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

77
ಆನ್‌ಲೈನ್ ಗೇಮಿಂಗ್ ನಿಷೇಧದ ಎಫೆಕ್ಟ್

ಡ್ರೀಮ್ ಇಲೆವೆನ್ ಸೇರಿ ಇನ್ನೂ ಅನೇಕ ಗೇಮಿಂಗ್‌ ಆ್ಯಪ್‌ಗಳು ಐಪಿಎಲ್ ಟೂರ್ನಿ ಹಾಗೂ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತಿದ್ದವು. ಕೇಂದ್ರ ಸರ್ಕಾರ ನಿಷೇಧ ಹೇರಿದ ಕಾರಣ, ಹಣ ಹರಿವು ಕಡಿತಗೊಂಡಿದೆ.

Read more Photos on
click me!

Recommended Stories