IPL ಹರಾಜಿನಿಂದ ಒಂದು ಹೆಜ್ಜೆ ದೂರದಲ್ಲಿ ವಿರಾಟ್ ಕೊಹ್ಲಿ ಅಳಿಯ, ಸೆಹ್ವಾಗ್ ಕಿರಿಮಗ

Published : Jul 03, 2026, 11:50 AM IST

ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ತಲೆಮಾರಿನ ಪ್ರತಿಭೆಗಳು ಗಮನ ಸೆಳೆಯುತ್ತಿವೆ. ಈಗ ವಿರಾಟ್ ಕೊಹ್ಲಿ ಅವರ ಅಳಿಯ ಆರ್ಯವೀರ್ ಕೊಹ್ಲಿ ಹಾಗೂ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ಹೆಸರುಗಳು ಮತ್ತೆ ಸುದ್ದಿಯಲ್ಲಿವೆ. 

PREV
15
IPL ಕಡೆಗೆ ಮಹತ್ವದ ಹೆಜ್ಜೆ

ಇಬ್ಬರೂ ದೆಹಲಿ ಪ್ರೀಮಿಯರ್ ಲೀಗ್ (DPL) 2026 ಆಟಗಾರರ ಹರಾಜಿನಲ್ಲಿ ಆಯ್ಕೆಯಾಗಿದ್ದು, IPL ಕಡೆಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಡೆಲ್ಲಿ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಮುಂದಿನ ದಿನಗಳಲ್ಲಿ IPL ಫ್ರಾಂಚೈಸಿಗಳ ಗಮನ ಸೆಳೆಯುವ ಅವಕಾಶ ಇವರ ಮುಂದಿದೆ.

25
ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್

ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ಅವರನ್ನು ಸೆಂಟ್ರಲ್ ಡೆಲ್ಲಿ ಕಿಂಗ್ಸ್ ₹1 ಲಕ್ಷಕ್ಕೆ ಖರೀದಿಸಿದೆ. ಕೇವಲ 16 ವರ್ಷದ ವೇದಾಂತ್ ಈಗಾಗಲೇ ಡೆಲ್ಲಿ ವಯೋಮಿತಿ ಕ್ರಿಕೆಟ್‌ನಲ್ಲಿ ತನ್ನ ಪ್ರತಿಭೆ ತೋರಿದ್ದು, ತಂದೆಯಂತೆ ಬ್ಯಾಟರ್ ಅಲ್ಲ; ಆಫ್‌ಸ್ಪಿನ್ ಬೌಲಿಂಗ್ ಮಾಡುವ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

35
ಆರ್ಯವೀರ್ ಸೆಹ್ವಾಗ್

ಇನ್ನೊಂದೆಡೆ, ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಅವರನ್ನು ವೆಸ್ಟ್ ಡೆಲ್ಲಿ ಲಯನ್ಸ್ ₹3 ಲಕ್ಷಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಅವರು ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಆಡಿದ್ದು, ಈ ಬಾರಿ ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ.

45
ವಿಕಾಸ್ ಕೊಹ್ಲಿಯ ಪುತ್ರ ಆರ್ಯವೀರ್ ಕೊಹ್ಲಿ

ವಿರಾಟ್ ಕೊಹ್ಲಿಯ ಅಣ್ಣ ವಿಕಾಸ್ ಕೊಹ್ಲಿಯ ಪುತ್ರ ಆರ್ಯವೀರ್ ಕೊಹ್ಲಿ ಕೂಡ ಹರಾಜಿನಲ್ಲಿ ಸ್ಥಾನ ಪಡೆದಿದ್ದಾರೆ. ಲೆಗ್‌ಸ್ಪಿನ್ನರ್ ಆಗಿರುವ ಆರ್ಯವೀರ್ ಅವರನ್ನು ಸೆಂಟ್ರಲ್ ಡೆಲ್ಲಿ ಕಿಂಗ್ಸ್ ₹1.20 ಲಕ್ಷಕ್ಕೆ ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ ಅವರು ಸೌತ್ ಡೆಲ್ಲಿ ಸೂಪರ್ಸ್ಟಾರ್ಜ್ ಪರ ಆಡಿದ್ದರು.

55
IPL ಪ್ರವೇಶಿಸುವ ಪ್ರಮುಖ ವೇದಿಕೆ

ಈ ಬಾರಿ DPL ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ ತೇಜಸ್ವಿ ದಹಿಯಾ. ಅವರನ್ನು ಸೌತ್ ಡೆಲ್ಲಿ ಸೂಪರ್ಸ್ಟಾರ್ಜ್ ₹40 ಲಕ್ಷಕ್ಕೆ ತನ್ನ ತಂಡದಲ್ಲೇ ಉಳಿಸಿಕೊಂಡಿದೆ. DPL ಈಗ ಯುವ ಕ್ರಿಕೆಟಿಗರಿಗೆ IPL ಹಾಗೂ ಉನ್ನತ ಮಟ್ಟದ ಕ್ರಿಕೆಟ್‌ಗೆ ಪ್ರವೇಶಿಸುವ ಪ್ರಮುಖ ವೇದಿಕೆಯಾಗುತ್ತಿದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories