IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!

Published : Dec 03, 2025, 03:44 PM IST

ಐಪಿಎಲ್ 2026 ಸೀಸನ್‌ಗೂ ಮುನ್ನವೇ ದೊಡ್ಡ ಆಘಾತಗಳು ಎದುರಾಗುತ್ತಿವೆ. ಹಲವು ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸಿದ್ದ ಆಂಡ್ರೆ ರಸೆಲ್, ಫಾಫ್ ಡು ಪ್ಲೆಸಿಸ್ ಅವರಂತಹ ಸ್ಟಾರ್ ಆಟಗಾರರು ಲೀಗ್‌ನಿಂದ ದೂರವಾಗುತ್ತಿದ್ದಾರೆ. ಇದೀಗ ಮತ್ತಿಬ್ಬರು ಆಲ್ರೌಂಡರ್ಸ್‌ ಐಪಿಎಲ್ ಮಿನಿ ಹರಾಜಿನಿಂದ ಹಿಂದೆ ಸರಿದಿದ್ದಾರೆ.

PREV
15
ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ

ಐಪಿಎಲ್ ಹೊಸ ಸೀಸನ್ ಆರಂಭಕ್ಕೂ ಮುನ್ನವೇ ಲೀಗ್‌ಗೆ ದೊಡ್ಡ ಆಘಾತಗಳು ಎದುರಾಗುತ್ತಿವೆ. ಹಲವು ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸಿದ್ದ ಕೆಲವು ಸ್ಟಾರ್ ಆಟಗಾರರು ಈ ಲೀಗ್‌ನಿಂದ ದೂರವಾಗುತ್ತಿದ್ದಾರೆ. ವಿದೇಶಿ ಆಟಗಾರರಲ್ಲಿ ಪ್ರಮುಖ ಆಲ್‌ರೌಂಡರ್‌ಗಳು, ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಐಪಿಎಲ್‌ಗೆ ನಿವೃತ್ತಿ ನೀಡುತ್ತಿದ್ದಾರೆ.

25
ಐಪಿಎಲ್‌ಗೆ ಗುಡ್ ಬೈ ಹೇಳಿದ ರಸೆಲ್

ಈಗಾಗಲೇ ಕೆಕೆಆರ್ ಪರ ಆಡಿದ್ದ ಆಂಡ್ರೆ ರಸೆಲ್, ಆರ್‌ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರಂತಹ ಸ್ಟಾರ್ ಆಟಗಾರರು ಐಪಿಎಲ್‌ಗೆ ಗುಡ್‌ಬೈ ಹೇಳಿದ್ದಾರೆ. ಇದೀಗ ಈ ಸ್ಟಾರ್ ಆಟಗಾರರ ಸಾಲಿಗೆ ಮತ್ತಿಬ್ಬರು ಪ್ರಮುಖ ಆಟಗಾರರು ಸೇರಿದ್ದಾರೆ.

35
ರಸೆಲ್‌-ಮೋಯಿನ್ ಅಲಿಗೆ ಗೇಟ್‌ಪಾಸ್ ನೀಡಿದ್ದ ಕೆಕೆಆರ್

ಇತ್ತೀಚೆಗೆ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಕೆಕೆಆರ್, ರಸೆಲ್ ಜೊತೆಗೆ ಮೊಯಿನ್ ಅಲಿಯನ್ನು ಕೈಬಿಟ್ಟಿದೆ. ಫ್ರಾಂಚೈಸಿ ಕೈಬಿಟ್ಟಿದ್ದರಿಂದ ಮೊಯಿನ್ ಐಪಿಎಲ್‌ಗೆ ಗುಡ್‌ಬೈ ಹೇಳಿದ್ದಾರೆ. ಕಳೆದ ಸೀಸನ್‌ನಲ್ಲಿ ಕೇವಲ ಐದು ರನ್ ಗಳಿಸಿ, ಆರು ವಿಕೆಟ್ ಪಡೆದಿದ್ದ ಮೊಯಿನ್ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಫ್ರಾಂಚೈಸಿ ಅವರನ್ನು ಉಳಿಸಿಕೊಳ್ಳಲಿಲ್ಲ.

45
ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಗೇಟ್‌ಪಾಸ್ ನೀಡಿದ್ದ ಪಂಜಾಬ್ ಕಿಂಗ್ಸ್

ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ, ಬಿಗ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಮುಂದಿನ ಐಪಿಎಲ್‌ನಿಂದ ದೂರವಾಗುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಮ್ಯಾಕ್ಸಿಯನ್ನು ಕೈಬಿಟ್ಟಿದೆ. ಹೀಗಾಗಿ ಮ್ಯಾಕ್ಸಿ ಮುಂದಿನ ವರ್ಷ ಐಪಿಎಲ್ ಆಡುವುದು ಅನುಮಾನ. ಅವರ ಫಿಟ್‌ನೆಸ್ ಸಮಸ್ಯೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

55
1355 ಆಟಗಾರರು ಹರಾಜಿಗೆ ಹೆಸರು ರಿಜಿಸ್ಟರ್

ಇಂತಹ ಸ್ಟಾರ್ ಆಟಗಾರರು ದೂರವಾಗುವುದು ಲೀಗ್‌ಗೆ ದೊಡ್ಡ ನಷ್ಟ ಎನ್ನುತ್ತಾರೆ ಕ್ರಿಕೆಟ್ ವಿಶ್ಲೇಷಕರು. ಈ ಸೀಸನ್ ಹರಾಜಿಗೆ ಒಟ್ಟು 1355 ಆಟಗಾರರಿದ್ದು, ಅವರಲ್ಲಿ 16 ಕ್ಯಾಪ್ಡ್ ಭಾರತೀಯ ಆಟಗಾರರಿದ್ದಾರೆ. 2 ಕೋಟಿ ರೂ. ಪಟ್ಟಿಯಲ್ಲಿ ರವಿ ಬಿಷ್ಣೋಯ್, ವೆಂಕಟೇಶ್ ಅಯ್ಯರ್ ಇದ್ದಾರೆ. ಸ್ಟೀವ್ ಸ್ಮಿತ್ ಅವರಂತಹ ಹಿರಿಯ ಬ್ಯಾಟರ್ ಕೂಡ ಹೆಸರು ನೋಂದಾಯಿಸಿದ್ದಾರೆ.

Read more Photos on
click me!

Recommended Stories