ಡಿಸೆಂಬರ್ 7ಕ್ಕೆ ಸ್ಮೃತಿ ಮಂಧನಾ, ಪಲಾಶ್ ಮುಚ್ಚಲ್ ಮದುವೆ? ಕುಟುಂಬಸ್ಥರು ಹೇಳಿದ್ದೇನು?

Published : Dec 03, 2025, 01:12 PM IST

ಡಿಸೆಂಬರ್ 7 ರಂದು ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ನಡೆಯಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೆಡ್ಡಿಂಗ್ ಕಾರ್ಡ್ ಒಂದು ವೈರಲ್ ಆಗಿದೆ. ಈ ಮದುವೆ ಸುದ್ದಿಗೆ ಕುಟುಂಬ ಸದಸ್ಯರು ಪ್ರತಿಕ್ರಿಯಿಸಿದ್ದಾರೆ. ಪೂರ್ತಿ ವಿವರ ಇಲ್ಲಿದೆ.

PREV
15
ಮಂಧನಾ, ಮುಚ್ಚಲ್ ಮದುವೆ ಯಾವಾಗ?

ಭಾರತದ ಕ್ರಿಕೆಟರ್ ಸ್ಮೃತಿ ಮಂಧನಾ, ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಮದುವೆ ಚರ್ಚೆಯಲ್ಲಿದೆ. ನ. 23ರ ವಿವಾಹ ಮುಂದೂಡಿಕೆಯಾಗಿತ್ತು. ಈಗ ಡಿ. 7ಕ್ಕೆ ಮದುವೆ ಎಂದು ವೆಡ್ಡಿಂಗ್ ಕಾರ್ಡ್ ವೈರಲ್ ಆಗಿದೆ.

25
ಕುಟುಂಬ ಸದಸ್ಯರು ಏನು ಹೇಳುತ್ತಿದ್ದಾರೆ?

ಪಲಾಶ್ ಮುಚ್ಚಲ್ ಸಂಬಂಧಿಕರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. 'ಡಿ. 7ರ ಮದುವೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲ, ಮದುವೆ ಮುಂದೂಡಿಕೆಯಾಗಿದೆ' ಎಂದಿದ್ದಾರೆ. ಸ್ಮೃತಿ ಸಹೋದರ ಶ್ರವಣ್ ಕೂಡ ಇದನ್ನೇ ಹೇಳಿದ್ದಾರೆ.

35
ಆರೋಗ್ಯ ಸಮಸ್ಯೆಗಳೇ ಮದುವೆ ಮುಂದೂಡಲು ಕಾರಣವೇ?

ನ. 23ರ ಮದುವೆಗೆ ಎಲ್ಲಾ ಸಿದ್ಧತೆಗಳಾಗಿದ್ದವು. ಹಳದಿ, ಸಂಗೀತ ಕಾರ್ಯಕ್ರಮಗಳು ನಡೆದಿದ್ದವು. ಆದರೆ ಸ್ಮೃತಿ ತಂದೆಯ ಅನಾರೋಗ್ಯದಿಂದ ಮದುವೆ ನಿಂತುಹೋಯಿತು. ಪಲಾಶ್ ಕೂಡ ಅಸ್ವಸ್ಥರಾಗಿದ್ದರು ಎನ್ನಲಾಗಿದೆ.

45
ಆನ್‌ಲೈನ್‌ನಲ್ಲಿ ವೈರಲ್ ಆದ ಚಾಟ್ಸ್, ವಿವಾದಗಳು. ಏನಿದು ಸತ್ಯ?

ಮದುವೆ ಮುಂದೂಡಿದ ನಂತರ, ಪಲಾಶ್ ಬೇರೆ ಮಹಿಳೆಯರೊಂದಿಗೆ ಚಾಟ್ ಮಾಡುತ್ತಿರುವ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದ್ದವು. ಇದೇ ಕಾರಣಕ್ಕೆ ಮದುವೆ ನಿಂತಿದೆ ಎಂದು ನೆಟ್ಟಿಗರು ಆರೋಪಿಸಿದ್ದರು. ಆದರೆ ಕುಟುಂಬ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

55
ಮದುವೆ ಸುದ್ದಿಯಿಲ್ಲ

ಇದೀಗ ಸ್ಮೃತಿ ಮಂಧನಾ ಅವರ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ ಮದುವೆ ವಿಚಾರವಾಗಿ ಯಾವುದೇ ಅಪ್‌ಡೇಟ್‌ ಸದ್ಯಕ್ಕಂತೂ ಸಿಗುವ ಸಾಧ್ಯತೆ ಕಾಣುತ್ತಿಲ್ಲ

Read more Photos on
click me!

Recommended Stories