ಭರ್ಜರಿ ಶತಕ ಸಿಡಿಸಿ ಸಿಎಸ್‌ಕೆ ಪರ ಹೊಸ ದಾಖಲೆ ಸೃಷ್ಟಿಸಿದ ಸಂಜು ಸ್ಯಾಮ್ಸನ್

Published : Apr 23, 2026, 10:13 PM IST

ಭರ್ಜರಿ ಶತಕ ಸಿಡಿಸಿ ಸಿಎಸ್‌ಕೆ ಪರ ಹೊಸ ದಾಖಲೆ ಸೃಷ್ಟಿಸಿದ ಸಂಜು ಸ್ಯಾಮ್ಸನ್, ಮುಂಬೈ ಇಂಡಿಯನ್ಸ್ ವಿರುದ್ದ ಅಬ್ಬರಿಸಿದ ಸಂಜು  ಶತಕ ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ 2ನೇ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. 

PREV
15
ಸಂಜು ಅಬ್ಬರಕ್ಕೆ 208 ರನ್ ಟಾರ್ಗೆಟ್

ಬರೋಬ್ಬರಿ 18 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡ ಸಂಜು ಸ್ಯಾಮ್ಸನ್ ಅಬ್ಬರ ಆರಂಭಗೊಂಡಿದೆ. ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ 208 ರನ್ ಟಾರ್ಗೆಟ್ ನೀಡಿದ್ದಾರೆ. ಸಂಜು ಸ್ಯಾಮ್ಸನ್ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

25
ಸಂಜು ಸ್ಯಾಮ್ಸನ್ ದಾಖಲೆ

2026ನೇ ಐಪಿಎಲ್ ಟೂರ್ನಿಯಲ್ಲಿ ಆರಂಭದಲ್ಲಿ ಸಪ್ಪೆಯಾಗಿದ್ದ ಸಂಜು ಇದೀಗ ಅಬ್ಬರಿಸುತ್ತಿದ್ದಾರೆ. ಡೆಲ್ಲಿ ವಿರುದ್ದ ಸೆಂಚುರಿ ಸಿಡಿಸಿದ್ದ ಸಂಜು ಇದೀಗ ಮುಂಬೈ ಇಂಡಿಯನ್ಸ್ ವಿರುದ್ದ 54 ಎಸೆತದಲ್ಲಿ 101 ರನ್ ಸಿಡಿಸಿದ್ದಾರೆ. ಈ ಮೂಲಕ ಒಂದೇ ಆವೃತ್ತಿಯಲ್ಲಿ 2 ಶತಕ ಸಿಡಿಸಿದ ಮೊದಲ ಸಿಎಸ್‌ಕೆ ಆಟಗಾರ ಅನ್ನೋ ದಾಖಲೆ ಬರೆದಿದ್ದಾರೆ.

35
ಸಂಜು ಸೆಂಚುರಿ

ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಸಂಜು ಸ್ಯಾಮ್ಸನ್ (101*) ತಮ್ಮ ಶತಕ ಪೂರೈಸಿದರು. ಕೇವಲ 54 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳೊಂದಿಗೆ ಸಂಜು ಅಜೇಯರಾಗಿ ಉಳಿದರು. ಕೃಷ್ಣ ಭಗತ್ ಎಸೆದ ಕೊನೆಯ ಓವರ್‌ನಲ್ಲಿ ಸಂಜುಗೆ ಶತಕ ಪೂರೈಸಲು 15 ರನ್‌ಗಳ ಅವಶ್ಯಕತೆ ಇತ್ತು. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ 90ರ ಗಡಿ ದಾಟಿದರು. ಮುಂದಿನ ಎರಡು ಎಸೆತಗಳಲ್ಲಿ ಅವರು ಸಿಂಗಲ್ ತೆಗೆದುಕೊಳ್ಳಲಿಲ್ಲ. ನಾಲ್ಕನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್ ಬಾರಿಸಿದರು. ಆಗ ಅವರ ಸ್ಕೋರ್ 97. ಐದನೇ ಎಸೆತದಲ್ಲೂ ಸಿಂಗಲ್ ಓಡಲಿಲ್ಲ. ಕೊನೆಗೆ, ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಶತಕ ಪೂರ್ಣಗೊಳಿಸಿದರು.

45
ಚೆನ್ನೈ ಇನ್ನಿಂಗ್ಸ್

ಚೆನ್ನೈಗೆ ಉತ್ತಮ ಸ್ಕೋರ್ ತಂದುಕೊಟ್ಟರು. ಸಂಜು ಬಿಟ್ಟರೆ, ಚೆನ್ನೈ ಪರ ಎರಡನೇ ಅತಿ ಹೆಚ್ಚು ಸ್ಕೋರ್ ಮಾಡಿದವರು ನಾಯಕ ರುತುರಾಜ್ ಗಾಯಕ್ವಾಡ್ (22). ಡೆವಾಲ್ಡ್ ಬ್ರೆವಿಸ್ 11 ಎಸೆತಗಳಲ್ಲಿ 21 ರನ್, ಕಾರ್ತಿಕ್ ಶರ್ಮಾ 19 ಎಸೆತಗಳಲ್ಲಿ 18 ರನ್ ಮತ್ತು ಜೇಮಿ ಓವರ್‌ಟನ್ 7 ಎಸೆತಗಳಲ್ಲಿ 15 ರನ್ ಗಳಿಸಿದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಚೆನ್ನೈಗೆ ಸಂಜು ಮತ್ತು ರುತುರಾಜ್ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ 3 ಓವರ್‌ಗಳಲ್ಲಿ 32 ರನ್ ಸೇರಿಸಿದರು.

55
ರುತುರಾಜ್ ನಿರಾಸೆ

ರುತುರಾಜ್ ಮತ್ತೊಮ್ಮೆ ಪವರ್‌ಪ್ಲೇನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸರ್ಫರಾಜ್ ಖಾನ್, ಸಂಜು ಜೊತೆಗೂಡಿ ಪವರ್‌ಪ್ಲೇ ಅಂತ್ಯಕ್ಕೆ ಚೆನ್ನೈ ಸ್ಕೋರನ್ನು 76ಕ್ಕೆ ತಲುಪಿಸಿದರು, ಆದರೆ ಮಿಚೆಲ್ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಶಿವಂ ದುಬೆ (5) ನಿರಾಸೆ ಮೂಡಿಸಿದರೆ, ಡೆವಾಲ್ಡ್ ಬ್ರೆವಿಸ್ (11 ಎಸೆತಗಳಲ್ಲಿ 21) ಭರವಸೆ ಮೂಡಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕಾರ್ತಿಕ್ ಶರ್ಮಾ ಜೊತೆಗೂಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ ಸಂಜು, ತಂಡ 200ರ ಗಡಿ ದಾಟುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬೈ ಪರ ಘನ್ಸಫರ್ 25 ರನ್‌ಗಳಿಗೆ 2 ವಿಕೆಟ್ ಪಡೆದರೆ, ಅಶ್ವಿನಿ ಕುಮಾರ್ 37 ರನ್‌ಗಳಿಗೆ 2 ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ 4 ಓವರ್‌ಗಳಲ್ಲಿ 31 ರನ್ ನೀಡಿ 1 ವಿಕೆಟ್ ಪಡೆದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories